ಬೈಲಹೊಂಗಲ: ಐತಿಹಾಸಿಕ ಚೆನ್ನಮ್ಮ ಕಿತ್ತೂರಿನಿಂದ ಸಂಗೊಳ್ಳಿ, ಬೇವಿನಕೊಪ್ಪ, ಅಮಟೂರ ಮಾರ್ಗವಾಗಿ ಬೈಲಹೊಂಗಲ (ಬಾಗೇವಾಡಿ-ಸವದತ್ತಿ ರಸ್ತೆ)ವರಿಗೆ ರಾಜ್ಯ ರಸ್ತೆ ನಿರ್ಮಿಸಲು ವಿಜಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಯವರಿಗೆ ಸ್ವಾಮೀಜಿಯವರ ಆತ್ಮೀಯರಾದ ಮಕೇಂದ್ರ ರಾಜ್ಯ ಸಚಿವ ಶ್ರೀಪಾದ್ ನಾಯಕ್ ರವರಿಗೆ ಮನವಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಇಂಜಿನಿಯರ್ ರಮೇಶ್ ಜಂಗಲ್ ರವರು ಸಚಿವರಿಗೆ ಐತಿಹಾಸಿಕ ಚೆನ್ನಮ್ಮ ಕಿತ್ತೂರಿನಿಂದ ಬೈಲಹೊಂಗಲದವರಿಗೆ ರಸ್ತೆ ನಿರ್ಮಿಸಿ ಕೊಡುವ ಕುರಿತು ಸವಿಸ್ತಾರವಾಗಿ ವಿವರಿಸಿದರು. ಈ ರಸ್ತೆ ನಿರ್ಮಿಸಿದರೆ ಐತಿಹಾಸಿಕ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ಹಾಗೂ ಬೈಲಹೊಂಗಲದಲ್ಲಿರುವ ಚೆನ್ನಮ್ಮನ ಸಮಾಧಿಯನ್ನು ಪ್ರವಾಸಿಗರು ಸಂದರ್ಶಿಸಲು ಅನುಕೂಲವಾಗುತ್ತದೆ ಮತ್ತು ಈ ಭಾಗದ ಕೃಷಿ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಸಚಿವರಿಗೆ ಈ ರಸ್ತೆ ಕುರಿತು ಹೇಳಿದರು.
ಶ್ರೀಗಳು ಈ ಭಾಗದ ಸಾರ್ವಜನಿಕರ ಬಹುದಿನಗಳ ಕನಸಾಗಿದೆ. ಈ ರಸ್ತೆ ನಿರ್ಮಿಸುವುದರಿಂದ ಐತಿಹಾಸಿಕ ಸ್ವಾತಂತ್ರ್ಯ ಹೋರಾಟಗಾರರ ಸ್ಥಳಗಳನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಈ ಕಾರ್ಯಕ್ಕೆ ಬೆಳಗಾವಿ ಸಂಸದರಾದ ಮಂಗಳಾ ಸುರೇಶ್ ಅಂಗಡಿ, ಲೋಕಸಭಾ ಸದಸ್ಯರಾದ ಈರಣ್ಣ ಕಡಾಡಿ, ಬೈಲಹೊಂಗಲದ ಶಾಸಕರಾದ ಮಹಾಂತೇಶ ಕೌಜಲಗಿ, ಕಿತ್ತೂರ್ ಶಾಸಕರಾದ ಮಹಾಂತೇಶ್ ದೊಡ್ಡಗೌಡರ ಹಾಗೂ ಬೈಲಹೊಂಗಲ ಪುರಸಭೆಯ ಅಧಿಕಾರಿಗಳು, ಕಿತ್ತೂರ್ ಪಟ್ಟಣ ಪಂಚಾಯತಿಯ ಅಧಿಕಾರಿಗಳು ಮತ್ತು ಸಂಗೊಳ್ಳಿ, ಅಮಟೂರ್ ಗ್ರಾಮ ಪಂಚಾಯತಿಯ ಅಧ್ಯಕ್ಷರ ಮತ್ತು ಸರ್ವ ಸದಸ್ಯರ, ಮನವಿ ಪತ್ರಗಳನ್ನು ಲಗತ್ತಿಸಿದ್ದರು.
ಈಶ್ವರ್ ನಿರಡಿ ಸಹಕಾರದಿಂದ ಹಾಗೂ ಈ ಭಾಗದ ಎಲ್ಲಾ ರಾಜಕೀಯ, ಧಾರ್ಮಿಕ ಮುಖಂಡರ ಹಾಗೂ ಸಾರ್ವಜನಿಕರ ಪರವಾಗಿ ಈ ಮನವಿಯನ್ನು ತಮ್ಮ ಮೂಲಕ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ನೀಡುತ್ತಿದ್ದೇವೆ. ಹಾಗೂ ಈ ಐತಿಹಾಸಿಕ ಪರಂಪರೆ ಇರುವ ರಾಜ್ಯ ರಸ್ತೆಯನ್ನು ನಿರ್ಮಿಸಿ ಕೊಡಬೇಕೆಂದು ವಿನಂತಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಇಂಜಿನಿಯರ್ ರಮೇಶ್ ಜಂಗಲ್, ಅಜಿತ ಕಾಮತ್, ವಲ್ಲಭ, ಮಲ್ಲಿಕಾರ್ಜುನ್ ಪೂಜೇರ, ಗಿರೀಶ್ ಉಜ್ಜಿನಕೊಪ್ಪ, ಪಕೀರಪ್ಪ ಹಸರನ್ನವರ, ಹರೀಶ್ ಬೆಳಗಾವಿ ಉಪಸ್ಥಿತಿ ಇದ್ದರು.