ಮಾಳವ ರುದ್ರಸರ್ಜನ ನಿಧನಾನಂತರ ಆತನು ದತ್ತಕ ತೆಗೆದುಕೊಂಡಿರುವ ಆತನ ಅಣ್ಣನ ಮಗ ವೀರಪ್ಪಗೌಡ ದೇಸಾಯಿ ಕಿತ್ತೂರಿನ ದೊರೆಯಾದ. 1749 ರಿಂದ 1782 ರವರೆಗೆ ರಾಜ್ಯಭಾರ ಮಾಡಿದ.ವೀರಪ್ಪಗೌಡ ದೇಸಾಯಿ ಹೈದರಾಲಿ ಮತ್ತು ಪೇಶ್ವೆಯನ್ನು ಸೋಲಿಸಿ ಈ ಭಾಗದ ದೊರೆಯಾದ.
1778 ರಲ್ಲಿ ಅವನು ಬೆಳಗಾವಿ ಜಿಲ್ಲೆಯ ಮಲಪ್ರಭಾ ನದಿಯ ದಕ್ಷಿಣ ಮತ್ತು ಬಿಜಾಪುರ ಜಿಲ್ಲೆಯ ಕೃಷ್ಣಾನದಿಯ ದಕ್ಷಿಣಕ್ಕಿರುವ ಪ್ರದೇಶಗಳನ್ನು ವಶಪಡಿಸಿಕೊಂಡನು. ಪೇಶ್ವೆಗಳ ಮೇಲೆ ಸವಾರಿ ಮಾಡಿದ ಮೊದಲ ಕನ್ನಡ ದೊರೆ ಎಂಬ ಹೆಗ್ಗಳಿಕೆ ಪಡೆದನು.
1756 ರಲ್ಲಿ ಕಿತ್ತೂರಿನ ಅಧೀನದಲ್ಲಿ ಪರಸಗಡ ಸಂಪಗಾವಿ,ಬೀಡಿ ಪರಗಣಗಳು ಸೇರಿದ್ದವು.1778ರಲ್ಲಿ ತಾಸಗಾಂವ ಪಟವರ್ಧನನ್ನು ಸೋಲಿಸಿ ಗೋಕಾಕ್ ಮತ್ತು ಸವದತ್ತಿಗಳನ್ನು ವಶಪಡಿಸಿಕೊಂಡನು.
ಒಂದೆಡೆ ಪೇಶ್ವೆ ಇನ್ನೊಂದೆಡೆ ಹೈದರಾಲಿಗಳ ಕಿತ್ತಾಟದಲ್ಲಿ ಸಣ್ಣ ಸಣ್ಣ ಸಂಸ್ಥಾನಗಳು ಬಹಳ ಎಚ್ಚರಿಕೆ ಹೆಜ್ಜೆ ಇಡಬೇಕಾದ ಕಾಲ ಅದಾಗಿತ್ತು.
1779 ರಲ್ಲಿ ಪೇಶ್ವೆಗಳ ಪರಶುರಾಮ್ ಬಾವು ಗೋಕಾಕದ ಮೇಲೆ ದಾಳಿ ಮಾಡಿದ.ಈ ಯುದ್ಧದಲ್ಲಿ ಕಿತ್ತೂರು ದೋರೆಯಾದ ವೀರಪ್ಪಗೌಡ ದೇಸಾಯಿಯನ್ನು ಅಕ್ರಮವಾಗಿ ಬಂದಿಸಿ ಮೀರಜ್ ಗೆ ತೆಗೆದುಕೊಂಡು ಹೋದ .
ಮುಂದೊಂದು ದಿನ ವೀರಪ್ಪಗೌಡ ದೇಸಾಯಿ ತನಗೆ ಮುಳುವಾಗಬಹುದು ಎಂಬ ಹೆದರಿಕೆಯಿಂದ ಮೀರಜ್ ನಲ್ಲಿ ಅಕ್ರಮ ಬಂಧನದಲ್ಲಿರಿಸಿ ಚಿತ್ರಹಿಂಸೆ ನೀಡಿ ಮೀರಜ್ ನಲ್ಲಿಯೇ ನಿಧನ ಹೋಂದುವಂತೆ ಮಾಡಿದ.
ಹೀಗಾಗಿ ವೀರಪ್ಪಗೌಡ ದೇಸಾಯಿ 1782 ರಲ್ಲಿ ಮೀರಜ್ನಲ್ಲಿ ನಿಧನ ಹೊಂದಿದ. ಹಾಗಾಗಿ ಪೇಶ್ವೆಗಳ ಕುತಂತ್ರದಿಂದ ಸಂಸ್ಥಾನದ ಆಚೆಗೆ ನಿಧನಹೊಂದಿದ ಕಿತ್ತೂರಿನ ಮೊದಲ ದೊರೆ ವೀರಪ್ಪಗೌಡ ದೇಸಾಯಿ.
ವೀರಪ್ಪಗೌಡ ದೇಸಾಯಿಯ ಮೃತದೇಹವನ್ನು ಮೀರಜ್ ನಿಂದ ಕಿತ್ತೂರಿಗೆ ತಂದು ಕಲ್ಮಠದ ಆವರಣದಲ್ಲಿ ಸಮಾಧಿ ಮಾಡಲಾಯಿತು.
ಈ ಸಮಾಧಿ ಇವತ್ತಿಗೂ ಸ್ಥಿತಿಯಲ್ಲಿರುವುದನ್ನು ನಾವು ಕಾಣುತ್ತೇವೆ ವೀರಪ್ಪ ದೇಸಾಯಿಗೆ ಮಕ್ಕಳಾಗದೇ ಇರುವ ಕಾರಣ ಆತನು ಸಹಿತ ಓರ್ವನನ್ನು ದತ್ತಕ್ಕ ತೆಗೆದುಕೊಂಡನು.
ಆತನೇ ಕಿತ್ತೂರು ಇತಿಹಾಸದಲ್ಲಿ ಮೇರು ನಾಯಕನಾಗಿ ಮರೆದಿರುವ ಮಲ್ಲಸರ್ಜಾ ದೇಸಾಯಿ, ಇತನ ಆಳ್ವಿಕೆ 1782 ರಿಂದ 1816 ರವರೆಗೆ ಆಳ್ವಿಕೆ ನಡೆಸಿದನು….
ಲೇಖನ :ಮಹೇಶ ನೀಲಕಂಠ ಚನ್ನಂಗಿ.
ಮುಖ್ಯ ಶಿಕ್ಷಕರು.
ಚನ್ನಮ್ಮನ ಕಿತ್ತೂರ.
೯೭೪೦೩೧೩೮೨೦.