ಕಲಘಟಗಿ: ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸದೃಢವಾಗಿದೆ ಗ್ರಾಹಕರು ಹಾಗೂ ಷೇರುದಾರರು ಭಯ ಪಡುವ ಅಗತ್ಯವಿಲ್ಲ ಎಂದು ಬ್ಯಾಂಕಿನ ಅಧ್ಯಕ್ಷ ವೃಷಭೇಂದ್ರ ಪಟ್ಟಣಶಟ್ಟಿ ಹೇಳಿದರು.
ಇಲ್ಲಿನ ಬ್ಯಾಂಕಿನಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿ ಕೆಲ ದಿನಪತ್ರಿಕೆಯಲ್ಲಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ದಿವಾಳಿಯಾಗಿದೆ ಎಂಬ ಪದ ಬಳಸಿ ಪ್ರಕಟಿಸಿದ್ದು ಇದು ಸತ್ಯಕ್ಕೆ ದೂರವಾದದ್ದು ಎಂದರು.
ಬ್ಯಾಂಕಿನ ಶೇರು ಬಂಡವಾಳ 1 ಕೋಟಿ 25 ಲಕ್ಷ, ಬರುವ ಬಡ್ಡಿ 1 ಕೋಟಿ 75 ಲಕ್ಷ, ನಿದಿಗಳು 2 ಕೋಟಿ 27 ಲಕ್ಷ, ಠೇವಣಿದಾರರು 30 ಕೋಟಿ, ವಿವಿಧ ಬ್ಯಾಂಕ್ ಗಳಲ್ಲಿ ಠೇವಣಿ 6 ಕೋಟಿ, ಸರ್ಕಾರಿ ಭದ್ರತೆ ಠೇವಣಿ 6 ಕೋಟಿ, ಬ್ಯಾಕಿನ್ ಆಸ್ತಿ 6 ಕೋಟಿ ಇದೆ ಎಂದರು.
ಬ್ಯಾಂಕಿನಿಂದ ರೈತರಿಗೆ, ಬಡ ಜನತೆಗೆ, ವ್ಯಾಪಾರಸ್ಥರಿಗೆ ವಿವಿಧ ರೂಪದಲ್ಲಿ ಸಾಲ ನೀಡಿದ್ದು 19 ಕೋಟಿ 65 ಲಕ್ಷ ಕೊಟ್ಟಿರುತ್ತೇವೆ ಎಂದು ಮಾಹಿತಿ ನೀಡಿದರು.
ಬ್ಯಾಕಿನ ವ್ಯವಹಾರದಲ್ಲಿ ಕೋವಿಡ್ -19 ನಿಂದ ಜನರ ಕೈಯಲ್ಲಿ ಹಣ ಇಲ್ಲದ ಕಾರಣ ಸ್ವಲ್ಪ ಆರ್ಥಿಕ ನಷ್ಟದಲ್ಲಿ ಹೊರತು ಆದರೆ ಸಂಪೂರ್ಣ ದಿವಾಳಿಯಾಗಿದೆ ಎಂದು ಹೇಳುವದು ಇದನ್ನು ಬ್ಯಾಂಕ್ ಒಪ್ಪಿಕೊಳ್ಳುವದಿಲ್ಲ ಎಂದು ತಿಳಿಸಿದರು.
ವರದಿ: ಶಶಿಕುಮಾರ್ ಕಟ್ಟಿಮನಿ