ಮುಗಳಖೋಡದಲ್ಲಿ ಶಿಸ್ತಿಲ್ಲದ ಅಂಗನವಾಡಿ ಕೇಂದ್ರಗಳು.

ಉಮೇಶ ಗೌರಿ (ಯರಡಾಲ)

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗರ್ಭಿಣಿ ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ಪೌಷ್ಠಿಕಾಂಶದ ಕೊರತೆ ಆಗದಿರಲೆಂದು ಮೊಟ್ಟೆಗಳನ್ನು ವಿತರಣೆ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಈ ಮೊಟ್ಟೆ ವಿತರಣೆ ಪ್ರಾರಂಭವಾದಾಗಿನಿಂದಲೂ,  ಅಂಗನವಾಡಿ ಕಾರ್ಯಕರ್ತೆಯರು ಸರಿಯಾಗಿ ಮೊಟ್ಟೆ ಹಂಚಿಕೆ ಮಾಡುತ್ತಿಲ್ಲ ಎಂಬ ಕೂಗು ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಇಂತಹದೊಂದು ಘಟನೆ ಈಗ ಮುಗಳಖೋಡ ಪಟ್ಟಣದಲ್ಲಿ ನಡೆದಿದೆ.

ಮುಗಳಖೋಡ: “ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ” ಎಂಬ ಗಾದೆ ಮಾತಿದೆ. ಅದನ್ನು ಇಂಥವರನ್ನು ನೋಡಿ ಹೇಳಿರಬಹುದೇನೋ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಗರ್ಭಿಣಿ ಬಾಣಂತಿಯರಲ್ಲಿ ಹಾಗೂ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಆಗದಿರಲಿ ಎಂಬ ಉದ್ದೇಶವನ್ನಿಟ್ಟುಕೊಂಡು ಮೊಟ್ಟೆ ವಿತರಣೆ ಮಾಡುವ ನಿರ್ಧಾರವನ್ನು ತೆಗೆದು ಕೊಂಡಿರುವುದು ಒಳ್ಳೆಯದೇ.

ಆದರೆ ಇಲಾಖೆಯಿಂದ ಗರ್ಭಿಣಿ ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ವಿತರಣೆಯಾಗಬೇಕಾದ ಮೊಟ್ಟೆಗಳು ವಿತರಣೆ ಆಗಬೇಕಾದಷ್ಟು ಆಗುತ್ತಿಲ್ಲ. ಗರ್ಭಿಣಿ ಬಾಣಂತಿಯರಿಗೆ 25 ಮೊಟ್ಟೆಗಳ ಬದಲಿಗೆ 20 ಮೊಟ್ಟೆಯನ್ನು ಕೊಡುತ್ತಿದ್ದಾರೆ. ಇದಕ್ಕೆ ನಿರ್ದರ್ಶನ ಎಂದರೆ 5ನೇ ವಾರ್ಡಿನ ಅಂಗನವಾಡಿ ಕೇಂದ್ರ ಸಂಖ್ಯೆ ಎಂಟರಲ್ಲಿ ಆಹಾರ ಕಿಟ್ ವಿತರಣೆ ಮಾಡುತ್ತಿದ್ದ ವೇಳೆ ಗರ್ಭಿಣಿ ಬಾಣಂತಿಯರಿಗೆ 25 ಮೊಟ್ಟೆಗಳ ಬದಲಿಗೆ 20 ಮೊಟ್ಟೆಗಳನ್ನು ಕೊಟ್ಟು 5 ಮೊಟ್ಟೆಗಳನ್ನು ಗುಳುಂ ಸ್ವಾಹ ಮಾಡುತ್ತಿದ್ದರು.

ಇಲಾಖೆಯಿಂದ ಪ್ರತಿಭಾರಿ ವಿತರಿಸಬೇಕಾದ ಆಹಾರಧಾನ್ಯದ ಕಿಟ್ನ ವಿವರಣೆಯನ್ನು ಯಾವುದೇ ಅಂಗನವಾಡಿ ಕೇಂದ್ರಗಳಲ್ಲಿ ಲಗತ್ತಿಸುತ್ತಿಲ್ಲ. ಇದರಿಂದ ಬಾಣಂತಿಯರಿಗೆ ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಎಷ್ಟು ಪ್ರಮಾಣದಲ್ಲಿ ಆಹಾರ ಧಾನ್ಯ  ಬಂದಿದೆಯೆಂಬ ಮಾಹಿತಿ ಯಾರಿಗೂ ಸಿಗುವುದಿಲ್ಲ.

ಅಂಗನವಾಡಿ ಕಾರ್ಯಕರ್ತೆ ಎಷ್ಟು ಕೊಡುತ್ತಾರೋ ಅದನ್ನು ತೆಗೆದುಕೊಂಡು ಹೋಗುವುದಷ್ಟೇ ಇವರ ಕೆಲಸವಾಗಿದೆ. ನಾಗರಿಕ ಸನ್ನದ್ದು ಕಾಯ್ದೆ ಪ್ರಕಾರ ಇಲಾಖೆಯಿಂದ ಮಾಡಬೇಕಾದ ಆಹಾರ ವಿತರಣಾ ಮಾಹಿತಿ ಪಟ್ಟಿ ಹಾಗೂ ಬಾಲವಿಕಾಸ ಸಮಿತಿ ರಚನೆ ಹಾಗೂ ಸಭೆ ನಡೆಸಲು ಬಗ್ಗೆ ಮಾಹಿತಿ ಕೇಳಿದರೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಮೇಲ್ವಿಚಾರಕೆ ಉತ್ತರ ಕೊಡಲು ಪೆಚಾಡುತ್ತಿರುವುದು ಕಂಡು ಬಂದಿತು.

ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಮುಗಳಖೋಡ ಅಂಗನವಾಡಿ ಮೇಲ್ವಿಚಾರಿಕೆ ಎಂ ಎಂ ಸೂರ್ಯವಂಶಿ “ಅಂಗನವಾಡಿ ಕಾರ್ಯಕರ್ತೆ ಕರ್ತವ್ಯಲೋಪ ನೋಟಿಸು ಜಾರಿ ಮಾಡುವುದಾಗಿ ಹೇಳಿದ್ದಾರೆ. “

ಇದೇ ರೀತಿ ಮುಗಳಖೋಡದ 29 ಅಂಗನವಾಡಿ ಕೇಂದ್ರಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಮೊಟ್ಟೆಯ ಸತ್ಯ ಹೊರಬೀಳಲಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";