ರಾಜ್ಯಮಟ್ಟದ “ಮಾಧ್ಯಮ ಸೇವಾರತ್ನ” ಪ್ರಶಸ್ತಿ ಪಡೆದ ಉದಯವಾಣಿ ವರದಿಗಾರ ಬಸವರಾಜ ಚಿನಗುಡಿ

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು: ಐತಿಹಾಸಿಕ ಚನ್ನಮ್ಮನ ಕಿತ್ತೂರು ತಾಲೂಕಿನ ವದಯವಾಣಿ ತಾಲೂಕಾ ವರದಿಗಾರರು ಹಾಗೂ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಬಸವರಾಜ ಚಿನಗುಡಿ ಅವರಿಗೆ ಪ್ರತಿವರ್ಷ ಪದ್ದತಿಯಂತೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ವತಿಯಿಂದ ಕೊಡಮಾಡುವ 2023ನೇ ಸಾಲಿನ ರಾಜ್ಯ ಮಟ್ಟದ “ಮಾಧ್ಯಮ ಸೇವಾ ರತ್ನ” ಪ್ರಶಸ್ತಿ ಪಡೆದಿದ್ದಾರೆ.

ಕಳೆದ 10 ವರ್ಷಗಳಿಂದ ಬಸವರಾಜ ಚಿನಗುಡಿ ಮುದ್ರಣ ಮಾದ್ಯಮ ಮತ್ತು ದೃಶ್ಯ ಮಾದ್ಯಮದಲ್ಲಿ ಕಿತ್ತೂರು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಜನರ ಹಲವಾರು ಸಮಸ್ಯೆಗಳನ್ನು ತಮ್ಮ ಬರವಣೆಗೆ ಮೂಲಕ ರಾಜಕಾರಣಿಗಳ ಮತ್ತು ಅಧಿಕಾರಿಗಳ ಗಮನ ಸೆಳೆದು, ನ್ಯಾಯ ಕೊಡಿಸುವ ಹಿನ್ನಲೆಯಲ್ಲಿ ಪ್ರಾಮಾಣಿಕ ಮತ್ತು ನಿಸ್ವಾರ್ಥ ಸೇವೆಯನ್ನು ಸಲ್ಲಿಸುವುದರ ಜೊತೆಗೆ ಅನೇಕ ಸಾಮಾಜಿಕ ಹಾಗೂ ದಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಾಮಜ ಸೇವೆಯನ್ನು ತಮ್ಮ ಉಸಿರಾಗಿಸಿಕೊಂಡಿದ್ದಾರೆ.

ಅವರ ನಿಶ್ವಾರ್ಥ ಸೇವೆಯನ್ನು ಪರಿಗಣಿಸಿ ಡಿ. 23 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಪತ್ರಕರ್ತರ ವಿಚಾರ ಸಂಕೀರಣ ಕಾರ್ಯಕ್ರಮದಲ್ಲಿ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಕಟಕೋಳ ಶ್ರೀ ಅಭಿನವ  ಸಿದ್ರಾಯಜ್ಜ ಮಹಾಸ್ವಾಮಿಗಳು, ಸರ್ವೋಚ್ಚ ನ್ಯಾಯಾಲಯದ ನಿವೃತ್‌ ನ್ಯಾಯಮೂತ್ರಿ ವಿ. ಗೋಪಾಲಗೌಡ, ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ, ಖ್ಯಾತ ಚಲನಚಿತ್ರ ನಟ ವಿನೋದರಾಜ, ನಟಿ ಅಭಿನಯ, ಖಜಾಂಚಿ ಮಂಜುಳಾ ಬಂಗ್ಲೆ ಹಾಗೂ ಜಗಳೂರು ಲಕ್ಷ್ಮಣರಾವ್‌ ಇವರುಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಇವರ ಸಾಧನೆಗೆ ಐತಿಹಾಸಿಕ ಕಿತ್ತೂರು ನಾಡಿನ ಸಂತ ಮಹಾಂತರು, ಮಠಾಧೀಶರು, ರಾಜಕಾರಣಿಗಳು, ಸ್ನೇಹಿತರು, ರಾಷ್ಟ್ರೀಯ ಬಸವ ದಳ, ರಾಷ್ಟ್ರೀಯ ಬಸವ ಸೇನೆ, ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು, ಸರ್ವ ಸದಸ್ಯರು ಪಟ್ಟಣದ ನಾಗರಿಕರು ಸೇರಿದಂತೆ ಇತರರು ಅಭಿನಂದಿಸಿದ್ದಾರೆ.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";