ಖ್ಯಾತ ಗ್ರಂಥಾಲಯ ವಿಜ್ಞಾನಿ ಡಾ.ಎಸ್.ಆರ್.ಗುಂಜಾಳ ಅವರಿಗೆ ಸನ್ಮಾನ

ಉಮೇಶ ಗೌರಿ (ಯರಡಾಲ)

ಧಾರವಾಡ:ರಾಷ್ಟ್ರೀಯ ಮಟ್ಟದ ಗ್ರಂಥಾಲಯ ವಿಜ್ಞಾನಿಗಳಾಗಿ, ಗ್ರಂಥಪಾಲಕರಾಗಿ, ಸಂಶೋಧಕರಾಗಿ, ಖ್ಯಾತ ಸಾಹಿತಿಗಳಾಗಿ, ಪತ್ರಿಕಾ ಸಂಪಾದಕರಾಗಿ, ನಾಟಕಕಾರರಾಗಿ ಅದ್ಭುತ ಸಾಧನೆ ಮಾಡಿದ ಡಾ. ಎಸ್.ಆರ್.ಗುಂಜಾಳ ಅವರನ್ನು ಧಾರವಾಡದ ಅವರ ನಿವಾಸದಲ್ಲಿ ಭೇಟಿಯಾಗಿ ಸತ್ಕರಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಮಾಧ್ಯಮ ಪ್ರತಿನಿಧಿಗಳಾದ ಆಕಾಶ್ ಅರವಿಂದ ಥಬಾಜ, ಬೈಲಹೊಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್. ಠಕ್ಕಾಯಿ, ಖಾನಾಪೂರ ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ಕಿರಣ ಸಾವಂತನವರ ಉಪಸ್ಥಿತರಿದ್ದರು.

ಡಾ. ಎಸ್.ಆರ್. ಗುಂಜಾಳ ಅವರಿಗೆ ವಯಸ್ಸು ತೊಂಭತ್ತಾದರೂ ಯುವಕರನ್ನು ನಾಚಿಸುವ ಅವರ ಉತ್ಸಾಹ, ಕ್ರಿಯಾಶೀಲತೆ, ಶಿಸ್ತು ಅಚ್ಚರಿ ಮೂಡಿಸುವಂತದ್ದು. ಅಪಾರ ಜ್ಞಾನ, ಜೀವನಾನುಭವ ಹೊಂದಿದ ಹಿರಿಯರ ಭೇಟಿ ಮನಸ್ಸಿಗೆ ಅತ್ಯಂತ ಖುಷಿ ಹಾಗೂ ತೃಪ್ತಿ ತಂದುಕೊಟ್ಟ ಅವಿಸ್ಮರಣೀಯ ಕ್ಷಣ ಎಂದರೆ ತಪ್ಪಾಗಲಾರದು.

ಡಾ.ಎಸ್.ಆರ್. ಗುಂಜಾಳರು ಐವರು ಗ್ರಂಥಾಲಯ ವಿಜ್ಞಾನಿಗಳು, ಗ್ರಂಥಾಲಯು ವಿಜ್ಞಾನ ದರ್ಶನ, ಕರ್ನಾಟಕದಲ್ಲಿ ಗ್ರಂಥಾಲಯಗಳು, ಗ್ರಂಥಾಲಯ ದಿಗ್ಗಜರು, ಗ್ರಂಥಾಲಯ ವಿಜ್ಞಾನದ ಪಂಚಸೂತ್ರಗಳು, ಗ್ರಂಥಾಲಯದ ಅಂತರಂಗ, ಕಾಯಕಯೋಗಿ ಬಸವನಾಳ ಶಿವಲಿಂಗಪ್ಪನವರು, ಬಿ.ಡಿ. ಜತ್ತಿ ಬಾಳು-ಬದುಕು, ಎಚ್.ಎಫ್. ಕಟ್ಟೀಮನಿಯವರು, ಉತ್ತಂಗಿ ಚನ್ನಪ್ಪ ಮುಂತಾದ ಅನೇಕ ಮೌಲಿಕ ಕೃತಿಗಳನ್ನು ರಚಿಸಿದ್ದಾರೆ.

ಡಾ. ಗುಂಜಾಳ ಅವರ ಸಾಹಿತ್ಯ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ದೇವರಾಜ ಬಹದ್ದೂರ್ ಪ್ರಶಸ್ತಿ, ತಪಶೆಟ್ಟಿ ಬಹುಮಾನ, ಶರಣ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ, ಸೇವಾರತ್ನ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";