ಬೆಳಗಾವಿ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗು ಕಾಕತಿ ಕಲ್ಪವೃಕ್ಷ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಕಾಕತಿಯ ಕೇದಾರ ಹೋಟಲ್ ದಲ್ಲಿ ನಾಳೆ ಸೆಪ್ಟೆಂಬರ 24 ರಂದು ಬೆಳಗ್ಗೆ 11 ಗಂಟೆಗೆ ‘ಹಳೆ ಬೇರು ಹೊಸ ಚಿಗುರು’ ವಿನೂತನ ಉಪನ್ಯಾಸ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ಬೆಳಗಾವಿ ತಾಲೂಕ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ಮೇದಾರ ಉದ್ಘಾಟಿಸಲಿದ್ದು ಎಸ್. ಪಿ.ನಂದನವಾಡ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ ಅಧ್ಯಕ್ಷ ಸುನೀಲ ಸುಣಗಾರ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸಿದ್ದಗೌಡ ಸುಣಗಾರ,ಮಾಜಿ ತಾ. ಪಂ. ಸದಸ್ಯ ಯಲ್ಲಪ್ಪ ಕೊಳೇಕರ ಆಗಮಿಸಲಿದ್ದು ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ ದೇಯನ್ನವರ ಆಶಯ ನುಡಿಗಳನ್ನಾಡಲಿದ್ದಾರೆ. ಸಾಹಿತಿ ಡಾ.ರೇಣುಕಾ ಕಠಾರಿ ಮತ್ತು ಕಾಕತಿ ಪೊಲೀಸ್ ನಿರೀಕ್ಷಕರಾದ ಆಯ್. ಎಸ್. ಗುರುನಾಥ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಹಾರೂಗೇರಿಯ ಆಜೂರ ಪ್ರತಿಷ್ಠಾನ ಕೊಡ ಮಾಡುವ 2021 ನೇ ಸಾಲಿನ ಉತ್ತಮ ಪುಸ್ತಕ ಪ್ರಶಸ್ತಿ ವಿಜೇತರಾದ ಸಾಹಿತಿ ಎಂ. ವೈ.ಮೆಣಸಿನಕಾಯಿ ಮತ್ತು ಡಾ. ದಯಾನಂದ ಧನವಂತ ಸೇರಿದಂತೆ ‘ರಾಜ್ಯಮಟ್ಟದ ಸ್ವಾಭಿಮಾನಿ ಶಾಲೆ’ ಪ್ರಶಸ್ತಿ ವಿಜೇತ ತಾಲೂಕಿನ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಭೂತರಾಮನಹಟ್ಟಿ ಮತ್ತು’ತಾಲೂಕ ಮಟ್ಟದ ಉತ್ತಮ ಶಾಲೆ’ ಪ್ರಶಸ್ತಿ ಗಳಿಸಿರುವ ಕಡೋಲಿ ಪ್ರೌಢಶಾಲೆಯ ಗುರು ಬಳಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ ಸನ್ಮಾನ ನಡೆಯಲಿದೆ ಎಂದು ಬೆಳಗಾವಿ ತಾಲೂಕು ಕಸಾಪ ಅಧ್ಯಕ್ಷ ಸುರೇಶ ಹಂಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.