ಆಕ್ರೋಶಕ್ಕೆ ಕಾರಣವಾದ ಇಂದು ನಡೆದ ಕಿತ್ತೂರು ಉತ್ಸವ ಸಭೆ

ಸುದ್ದಿ ಸದ್ದು ನ್ಯೂಸ್‌ ಚನ್ನಮ್ಮನ ಕಿತ್ತೂರು: ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಉತ್ಸವ ಈ ಭಾರಿ ರಾಜ್ಯ ಮಟ್ಟದ ಉತ್ಸವವಾಗಿದ್ದು ಎಲ್ಲರಿಗೂ ಖುಷಿ ತರಿಸಿದ್ದು ಒಂದೆಡೆಯಾದರೆ, ಉತ್ಸವದ ಅಂಗವಾಗಿ ಮಂಗಳವಾರ ಕಿತ್ತೂರು ಕೊಟೆಯಲ್ಲಿ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಸಮಯ ಪಾಲನೆಯಾಗದೇ  ಇರುವುದರಿಂದ ವಿವಿಧ ಇಲಾಖೆ ಅಧಿಕಾರಿಗಳು, ಸರ್ಕಾರಿ ನೌಕರರು ಹಾಗೂ ಸಭೆಯಲ್ಲಿ ಭಾಗಿಯಾದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ಕಂದಾಯ ಇಲಾಖೆ ಅಡಿಯಲ್ಲಿ  ಕಿತ್ತೂರು ಉತ್ಸವದ ಸಭೆ, ನಿಗದಿ ಮಾಡಿ ತಿಳಿಸಿದ ಸಮಯಕ್ಕೆ ಸರಿಯಾಗಿ  ನಡೆಯದೆ ಕಾದೂ ಕಾದೂ ಸುಸ್ತಾಗುವಂತಾಗಿದ್ದು, ಅಕ್ಬೋಬರ್‌ 4 ರಂದು ಮಂಗಳವಾರ ಕೋಟೆ ಆವರಣದಲ್ಲಿ ಮುಂಜಾನೆ 11 ಗಂಟೆಗೆ ನಿಗದಿಯಾದ ಸಭೆ ಸುಮಾರು 2 ಗಂಟೆ ವಿಳಂಭವಾಗಿ ನಡೆದಿರುವುದು ಸಭೆಯಲ್ಲಿ ಭಾಗಿಯಾದವರಿಗೆ ಅಸಮಾಧಾನ ಉಂಟಾಗಿರುವುದು ಕಂಡುಬಂದಿತು.

ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ಬೈಲಹೊಂಗಲ ಉಪವಿಭಾಗಾಧಿಕಾರಿ ಶಶಿಧರ ಬಗಲಿ ಸೂಚನೆಯ ಮೇರೆಗೆ ತಹಶೀಲ್ದಾರ ಸೋಮಲಿಂಗಪ್ಪ ಹಾಲಗಿ ಸಭೆಗೆ ವೇಳೆಯನ್ನು ನಿಗದಿ ಪಡಿಸಿದ್ದರು. ಆದರೆ ಸಭೆ ಕರೆಯುವಂತೆ ಸೂಚನೆ ಹೊರಡಿಸಿದ ಶಾಸಕ ಮಹಾಂತೇಶ ದೊಡ್ಡಗೌಡರ ಸಭೆಯ ಅಧ್ಯಕ್ಷರಾಗಿದ್ದರು.  ಶಾಸಕರೆ ಸಭೆಗೆ 2 ಗಂಟೆಗೂ ಹೆಚ್ಚು ಕಾಲ ತಡವಾಗಿ ಬಂದಿದ್ದು ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಮನದಲ್ಲಿ ಅಸಮಾಧಾನ ಮೂಡಿಸಿತ್ತು. ಅದರಲ್ಲಿ ಇಂದು ವಿಶೇಷ ದಸರಾ ರಜೆ ಇರುವುದರಿಂದ ಕುಟುಂಬದೊಂದಿಗೆ ರಜೆಯ ಮಜಾ ಅನುಭವಿಸಬೇಕಾದ ನೌಕರರು ಮನನೊಂದಿಕೊಡಿದ್ದಾರೆ.

ಸಭೆಯನ್ನು ರಾಣಿ ಚನ್ನಮ್ಮನ ಕೋಟೆಯ ಮುಖ್ಯ ವೇದಿಕೆಯ ಮೇಲೆ ಆಯೋಜಿಸಿದ್ದರು, ಆದರೆ ಈ ಸಭೆಯಲ್ಲಿ ಭಾಗಿಯಾದವರಿಗೆ ಕುಳಿತುಕೊಳ್ಳಲು ಸರಿಯಾದ ಆಸನದ ವ್ಯವಸ್ಥೆಇರಲಿಲ್ಲ, ಅಲ್ಲದೆ ಧ್ವನಿ ವರ್ಧಕದ ವ್ಯವಸ್ಥೆಯೂ ಸರಿ ಇಲ್ಲದ ಕಾರಣ ಅಧಿಕಾರಿಗಳು ನೀಡಿದ ಮಾಹಿತಿ ಸ್ಪಷ್ಟವಾಗಿ ತಿಳಿಯಲಿಲ್ಲ, ಈ ಕಾರಣಗಳಿಂದಾಗಿ ಬಹುತೇಕ ಪತ್ರಕರ್ತರೂ ರೋಷಿಹೋಗಿ ಸಭೆಯಿಂದ ಅಸಮಾಧಾನಗೊಂಡು ಹೊರ ನಡೆದರು.

ಇಂದು ದಸರಾ ರಜೆ ಆಗಿದ್ದರಿಂದ ಅಧಿಕಾರಿಗಳು ಹಾಗೂ ನೌಕರಸ್ಥರು ಕುಟುಂಬದೊಂದಿಗೆ ದಸರಾ ರಜೆಯ ರುಚಿ ಅನುಭವಿಸಬೇಕಾದ ಇಂದು ಈ  ಸಭೆಯ ಆಯೋಜಿಸುವ ಮೂಲಕ ಕುಟುಂಬದೊಂದಿಗೆ ಬೆರೆಯಲು ಆಗಲಿಲ್ಲ, ಅಲ್ಲದೆ ಕೆಲಸದ ಒತ್ತಡದಿಂದ ಮಾನಸಿಕ ಖಿನ್ನತೆಗೆ ಒಳಗಾಗುವ ಸಂದರ್ಭ ಬಂದೊದಗುತ್ತಿದೆ ಎಂದು ಅಳಲು ತೊಡಿಕೊಂಡರು. ಹೆಸರು ಹೇಳಲು ಇಚ್ಚಿಸದ  ನೌಕರ.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";