ಕೋವಿಡ್ ಹಿನ್ನೆಲೆ ಈ ಬಾರಿ ಸರಳವಾಗಿ ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ ಆಯೋಜಿಸಲಾಗಿತ್ತು. ಒಕ್ಕುಂದ ಉತ್ಸವ ಸರ್ಕಾರಿ ಉತ್ಸವ ಆಗಲಿ ಎಂದು ಗ್ರಾಮಸ್ಥರು ಸರ್ಕಾರಕ್ಕೆ ಒಕ್ಮೊರಲಿನ ಆಗ್ರಹ ಮಾಡಿದರು.
ಬೈಲಹೊಂಗಲ :ತಾಲೂಕಿನ ಒಕ್ಕುಂದ ಗ್ರಾಮದ ಐತಿಹಾಸಿಕ ಶಿಲ್ಪಮಂದಿರ ತ್ರಿಕೂಟೇಶ್ವರ(ಕಲಗುಡಿ) ರಸ್ತೆಯಲ್ಲಿ ಮಲಪ್ರಭಾ ನದಿ ದಂಡೆಯಲ್ಲಿ ಅಮೋಘವರ್ಷ ನೃಪತುಂಗ ಜ್ಯೋತಿ ಪ್ರದೀಪನಕ್ಕೆ ಗ್ರಾ.ಪಂ.ಅಧ್ಯಕ್ಷೆ ಸವಿತಾ ಹೂವಿನ್ ಅವರು ಚಾಲನೆ ನೀಡಿದರು.
ಈ ವೇಳೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಉತ್ಸವ ಸಮಿತಿ ಗೌರವಾಧ್ಯಕ್ಷ ಸಿ.ಕೆ.ಮೆಕ್ಕೇದ ನಮ್ಮ ತಿರುಳ್ಗನ್ನಡನಾಡಿನ ಇತಿಹಾಸ ಇಂದಿನ ಯುವ ಜನಾಂಗಕ್ಕೆ ತಿಳಿಸುವ ಉದ್ದೇಶದಿಂದ ಕಳೆದ 7 ವರ್ಷಗಳಿಂದ ಉತ್ಸವ ಮಾಡುತ್ತಾ ಬಂದಿದ್ದೇವೆ. ಆದಷ್ಟು ಬೇಗನೇ ಒಕ್ಕುಂದ ಉತ್ಸವ ಸರ್ಕಾರಿ ಉತ್ಸವ ಮಾಡುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಉತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಇತಿಹಾಸ ಸಂಶೋಧಕರಾದ ಡಾ.ಸಿ.ಬಿ.ಗಣಾಚಾರಿ ಮಾತನಾಡಿ ಒಕ್ಕುಂದ ಕೇವಲ ಒಂದು ಗ್ರಾಮ, ತಾಲೂಕು, ಜಿಲ್ಲೆ ಆಗಿರಲಿಲ್ಲ. ಇದೊಂದು ಪ್ರಾಂತ ಆಗಿತ್ತು. ತಿರುಳ್ಗನ್ನಡನಾಡಿನ ಇತಿಹಾಸ ಕ್ರಿ.ಶ.3ನೇ ಶತಮಾನಕ್ಕಿಂತಲೂ ಹಳೆಯದಾಗಿದೆ. ಈ ಇತಿಹಾಸವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಗ್ರಾಮದಲ್ಲಿರುವ ಐತಿಹಾಸಿಕ ತ್ರಿಕೂಟೇಶ್ವರ ಮಂದಿರದ ಜೀರ್ಣೋದ್ಧಾರ ಆಗಿ ಇದೊಂದು ಪ್ರಸಿದ್ಧ ಪ್ರವಾಸಿ ತಾಣ ಆಗಬೇಕು ಎಂದು ಅಭಿಪ್ರಾಯ ಪಟ್ಟರು.
ಉತ್ಸವ ಸಮಿತಿಯ ಅಧ್ಯಕ್ಷ ಬಸನಗೌಡ ಪೊಲೀಸ್ ಪಾಟೀಲ್, ಪ್ರಾಚಾರ್ಯ ಎಂ.ಎನ್.ಕಿಲಾರಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಗ್ರಾ.ಪಂ.ಅಧ್ಯಕ್ಷೆ ಸವಿತಾ ಹೂವಿನ್ ವಹಿಸಿದ್ದರು.
ಪಿಡಿಓ ವಿಜಯಲಕ್ಷ್ಮೀ ಆನಿಗೋಳ, ಗ್ರಾ.ಪಂ.ಉಪಾಧ್ಯಕ್ಷ ಸೋಮಪ್ಪ ಗೌಡರ, ಸದಸ್ಯರಾದ ಮಹಾಂತೇಶ ಉಳ್ಳಿಗೇರಿ, ಮಡಿವಾಳಪ್ಪ ಬಡ್ಲಿ, ಬಸವರಾಜ ಕೊರಿಕೊಪ್ಪ, ಲಲಿತಾ ಏಣಗಿ ಸೇರಿದಂತೆ ಇನ್ನಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಅಶೋಕ ಭದ್ರಶೆಟ್ಟಿ, ಪರ್ವತಗೌಡ ಪಾಟೀಲ್, ರಾಮನಗೌಡ ಪಾಟೀಲ್, ಶಂಕರ ಕೋಟಗಿ, ಅಶೋಕ ಜಂತಿ, ಮಲ್ಲಪ್ಪ ಢವಳೆ, ಕಾಶಪ್ಪ ಭದ್ರಶೆಟ್ಟಿ, ಮಲ್ಲವ್ವ ಪಟಾತ, ಮಡಿವಾಳಪ್ಪ ತಡಸಲ್, ಈರಣಗೌಡ ಶೀಲವಂತರ, ಸಂತೋಷ ಹಡಪದ, ಸಿದ್ದನಗೌಡ ಪಾಟೀಲ್, ಸುರೇಶ ಅಂಗಡಿ, ಶಂಕರಗೌಡ ಪಾಟೀಲ್, ವಿಕಾಸ್ ಹಾದಿಮನಿ, ಆಕಾಶ ಭದ್ರಶೆಟ್ಟಿ, ರಾಹುಲ್ ಪಾಟೀಲ್, ಮಡ್ಡೆಪ್ಪ ಅಂಗಡಿ, ಪ್ರಜ್ವಲ್ ಸುತಗಟ್ಟಿ ಸೇರಿದಂತೆ ಗ್ರಾಮದ ಯುವಕರು, ಹಿರಿಯರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.