ಬೆಳಗಾವಿ: ಮನಿ ಡಬ್ಲಿಂಗ್ ಸ್ಕೀಂ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚಿಸಲಾಗಿದೆ. ಚಿಕ್ಕೋಡಿ ಪೊಲೀಸರು ಐಪಿಸಿ ಸೆಕ್ಷನ್420 ಮತ್ತು 511 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಎರಡು ಕಂಪನಿಗಳು ಹಣ ಡಬ್ಲಿಂಗ್ ಮಾಡುತ್ತೇವೆಂದು ಹೇಳಿ ಸಾವಿರಾರು ಜನರಿಗೆ ಮಹಾವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ಹಣ ಡಬ್ಲಿಂಗ್ ಮಾಡುತ್ತೇನೆಂದು ಹೇಳಿ ವೈಕಾ ಹಾಗೂ ಐ ಎಫ್ ಟಿ ಕಂಪನಿ ಹೆಸರಿನಲ್ಲಿ ಸಾವಿರಾರು ಜನರಿಗೆ ಪಂಗನಾಮ ಹಾಕಲಾಗಿದೆ.
ವೈಕಾ ಕಂಪನಿ 1500 ಜನರಿಂದ ಸುಮಾರು 30 ಕೋಟಿ ರೂ. ಹಾಗೂ ಐ ಎಫ್ ಟಿ ಕಂಪನಿ 2000 ಜನರಿಂದ ಸುಮಾರು 40 ಕೋಟಿ ರೂ. ದೋಚಿರುವ ಆರೋಪ ಕೇಳಿಬರುತ್ತಿದೆ. ಈಗಾಗಲೇ ಹಣ ಕಳೆದುಕೊಂಡ ಜನರು ಈ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಕುರಿತು ಸೋಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸರು. ಐಪಿಸಿ ಸೆಕ್ಷನ್420 ಮತ್ತು 511 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.