“ಹಿಂದುತ್ವಕ್ಕೆ ಹೊರಗಿನವರಿಂದ ಅಪಾಯವಿಲ್ಲ, ಬಿಜೆಪಿ ಹಿಂದೂಗಳಿಂದ ಹಿಂದುತ್ವಕ್ಕೆ ಅಪಾಯವಿದೆ :ಉದ್ದವ ಠಾಕ್ರೆ

ಉಮೇಶ ಗೌರಿ (ಯರಡಾಲ)

:ಫೆಡರಲಿಸಂ ಮತ್ತು ದೇಶದ ರಾಜ್ಯಗಳ ಹಕ್ಕುಗಳ ಕುರಿತು ಪ್ರಾಮಾಣಿಕ ಚರ್ಚೆ ನಡೆಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಕೇಂದ್ರದಂತೆ ರಾಜ್ಯಗಳು ಕೂಡ ಸಾರ್ವಭೌಮ ಹಕ್ಕುಗಳನ್ನು ಹೊಂದಿರುತ್ತವೆ ಎಂದು ಡಾ. ಬಿ. ಆರ್. ಅಂಬೇಡ್ಕರ್ ಹೇಳಿದ್ದಾರೆ. ರಾಜ್ಯದ ವ್ಯವಹಾರಗಳಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದರೆ ಸಂವಿಧಾನದ ಉಲ್ಲಂಘನೆಯಾಗುತ್ತದೆ ಎಂದು ಹೇಳಿದರು ಎಂದು ಶಿವಸೇನೆಯ ವಾರ್ಷಿಕ ದಸರಾ ರ್ಯಾಲಿಯಲ್ಲಿ ಮಾತನಾಡುತ್ತಾ ಠಾಕ್ರೆ ಹೇಳಿದರು.

“ಹಿಂದುತ್ವಕ್ಕೆ ಹೊರಗಿನವರಿಂದ ಅಪಾಯವಿಲ್ಲ, ಈ ಹೊಸ ಹಿಂದೂಗಳಿಂದ ಅಪಾಯವಿದೆ” ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

 

Share This Article
";