ಧಾರವಾಡ: ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಚಲನಚಿತ್ರಗಳು ಪ್ರದರ್ಶನಗಳನ್ನು ಕಾಣುತ್ತಿದ್ದರೂ ಕೂಡ ರಂಗಭೂಮಿಯು ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡು ಬೆಳವಣಿಗೆಯನ್ನು ಹೊಂದುತ್ತಿದೆ ಎಂದು ಬೈಲಹೊಂಗಲ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸ್ನಾತಕೋತ್ತರ ಅಧ್ಯನ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಫಕೀರನಾಯ್ಕ ದುಂಡಪ್ಪ ಗಡ್ಡಿಗೌಡರ ಅವರು ಹೇಳಿದರು.
ಧಾರವಾಡ ರಂಗಾಯಣವು ಏರ್ಪಡಿಸಿದ್ದ ವಾರಾಂತ್ಯ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಅನಾದಿ ಕಾಲದಿಂದಲೂ ನಾಟಕಗಳ ಪರಂಪರೆಗೆ ಸುದೀರ್ಘ ಇತಿಹಾಸವಿದೆ. ಅಂದಿನಿಂದ ಇಂದಿನವರೆಗೆ ಕಲಾವಿದರು ನಾಟಕಗಳ ಪರಂಪರೆ, ಕಲೆಯನ್ನು ಉಳಿಸಿ, ಬೆಳೆಸುತ್ತಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನಾಟಕಗಳು ನೀಡುತ್ತಿವೆ. ನಾಟಕಗಳು ಕೇವಲ ಮನರಂಜನೆಯನ್ನು ನೀಡುವುದಲ್ಲದೆ ಮನೋವಿಕಾಸವನ್ನು ಹೆಚ್ಚಿಸುವಲ್ಲಿ ಪ್ರಮಖ ಪಾತ್ರವನ್ನು ವಹಿಸಿವೆ. ಕಲಾವಿದರನ್ನು ಗುರುತಿಸಿ, ವೇದಿಕೆಯನ್ನು ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಧಾರವಾಡ ರಂಗಾಯಣ ಮಾಡುತ್ತಿದೆ.
ರಂಗಸಮಾಜ ಸದಸ್ಯರಾದ ಹಿಪ್ಪರಗಿ ಸಿದ್ಧರಾಮ ಅವರು ಮಾತನಾಡಿ, ರಂಗಭೂಮಿಯು ಒಂದು ಪ್ರಬಲ ಮಾಧ್ಯಮವಾಗಿ, ಸಮಾಜದಲ್ಲಿ ನಡೆಯುವ ಘಟನೆ, ವಿಚಾರ, ವಿದ್ಯಮಾನಗಳ ಕುರಿತು ಜನರಲ್ಲಿ ಅರಿವನ್ನು ಮೂಡಿಸುವ ಕಾರ್ಯವನ್ನು ಮಾಡುತ್ತವೆ. ಅದರಂತೆ ಧಾರವಾಡ ರಂಗಾಯಣವು ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಅನೇಕ ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ವೇದಿಕೆಯನ್ನು ನೀಡುತ್ತಿದೆ. ಈ ಮೂಲಕ ಕಲಾವಿದರಿಗೆ ಪ್ರೋತ್ಸಾಹವನ್ನು ನೀಡಿ ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿಯನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ಹೀಗೆ ಸಂಸೃತಿಯ ಪ್ರತೀಕವಾದ ಧಾರವಾಡದಲ್ಲಿ ರಂಗಾಯಣವು ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡಲಿ ಎಂದು ಹೇಳಿದರು.
ರಂಗಾಯಣ ನಿರ್ದೇಶಕರಾದ ರಮೇಶ ಪರವಿನಾಯ್ಕರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಮೂಲ ಕಲೆಯಾದ ನಾಟಕಗಳ ಕಲೆ, ಸಂಸ್ಕøತಿ, ಪರಂಪರೆಗಳು ನಶಿಸಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಧಾರವಾಡ ರಂಗಾಯಣವು ಪ್ರತಿ ವಾರವು ನಾಟಕಗಳನ್ನು ಏರ್ಪಡಿಸುವ ಮೂಲಕ ಕಲಾವಿದರಿಗೆ ಸಹಕಾರವನ್ನು ನೀಡುತ್ತಿದೆ. ರಂಗಭೂಮಿಯನ್ನು ಬೆಳೆಸುವಲ್ಲಿ ರಂಗಾಯಣವು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ. ರಂಗಾಯಣಕ್ಕೆ ರಂಗಾಸಕ್ತರು, ಸಾಹಿತಿಗಳು ಹಾಗೂ ಕಲಾವಿದರು ಸಲಹೆ ಸಹಕಾರಗಳನ್ನು ನೀಡಿ, ರಂಗಭೂಮಿಯ ಬೆಳವಣಿಗಗೆ ಪ್ರೋತ್ಸಾಹವನ್ನು ನೀಡಬೇಕು ಎಂದರು.
ಹಾವೇರಿ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳಾದ ಅಶೋಕ ಗದ್ದಿಗೌಡರ, ಬೆಳಗಾವಿ ಜಿಲ್ಲೆಯ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷರಾದ ಮೋಹನಗೌಡ ಬಸವನಗೌಡ ಪಾಟೀಲನಂತರ ಡಾ.ಶಶಿಧರ ನರೇಂದ್ರ ರಚಿಸಿ, ಬಸವರಾಜ ಗುಡ್ಡಪ್ಪನವರ ನಿರ್ದೇಶಿಸಿದ ಒಳಿತಲ್ಲ ನಿನ್ನ ಸಲಿಗಿ ನಾಟಕವನ್ನು ಧಾರವಾಡ ಕಲಾ ತಂಡ ವಿಜಯಬಸವ ರಂಗ ಪಥ ಕಲಾವಿದರು ಪ್ರದರ್ಶಿಸಿದರು.