ಬೈಲಹೊಂಗಲ :ತಾಲೂಕಿನ ಚಿಕ್ಕಬಾಗೇವಾಡಿ ಪ್ರೌಢಶಾಲೆಯ ಸಭಾಭವನದಲ್ಲಿ 20 ವರ್ಷಗಳ ಹಿಂದಿನ ವಿದ್ಯಾರ್ಥಿ ಬದುಕಿನ ನೆನಪುಗಳನ್ನು ಮರುಕಳಿಸಿತು.
ಎರಡು ವರ್ಷಗಳಿಂದ ಸೇರಬೇಕಿದ್ದ 1999-20 ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ ಕಾರ್ಯಕ್ರಮ ಅನೇಕ ವಿದ್ಯಮಾನಗಳಿಗೆ ಸಾಕ್ಷಿಯಾಯಿತು.
ಸುಮಾರು 45 ವಿದ್ಯಾರ್ಥಿಗಳನ್ನು ಹೊಂದಿದ ಬ್ಯಾಚ್. ಇದರಲ್ಲಿ ಆರೋಗ್ಯ, ರಕ್ಷಣಾ, ಶಿಕ್ಷಣ,ನ್ಯಾಯಾಂಗ ಸಹಕಾರಿ ,ಅರಣ್ಯ, ಅನ್ನದಾತರು ಹೀಗೆ ಅನೇಕ ವೃತ್ತಿಗಳಲ್ಲಿ ಚದುರಿ ಹೋಗಿದ್ದ ಮಿತ್ರರೆಲ್ಲಾ ಒಂದೇ ವೇದಿಕೆಯಲ್ಲಿ ಕಲಿಸಿದ ಗುರುಗಳ ಜೊತೆ ಬಂದು ಒಂದಷ್ಟು ಬದುಕಿನ ಸಂಗತಿಗಳನ್ನು ಹಾಗೂ ಕುಶಲೋಪಚಾರಿಯನ್ನು ಹಂಚಿಕೊಂಡರು.
ಅತಿಥಿಗಳಾದ ಹಾಗೂ ಈ ಬ್ಯಾಚ ಗೆ ಪಾಠ ಮಾಡಿದ ಎಸ್ ಎಸ್ ಬಾಳೆಕುಂದ್ರಿ ಉಪನ್ಯಾಸಕಿ ಡೈಟ್ ಬೆಳಗಾವಿ ಮಾತನಾಡಿ ತಮ್ಮ ಸೇವಾ ಸಂದರ್ಭದಲ್ಲಿಯಾದ ಬದಲಾವಣೆಗಳನ್ನು ಹಾಗೂ ಇಲ್ಲಿಯ ಸೇವೆಯನ್ನು ಎಂದು ಮರೆಯಲಾಗದು ಇದೊಂದು ನನಗೆ ತವರುಮನೆ ಈ ಶಾಲೆ ಹಾಗೂ ಇಲ್ಲಿಯ ವಿದ್ಯಾರ್ಥಿಗಳನ್ನು ಮರೆಯಲಾಗದು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು
ಗುರುಮಾತೆ ಶ್ರೀಮತಿ ನಂದಾ ಕುಲಕರ್ಣಿ ಮಾತನಾಡಿ ನಮ್ಮ ಕಲಿಸಿದ ಶ್ರಮ ಸಾರ್ಥಕವಾಗಿದೆ.ಮುಂದೆಯೂ ಸಮಾಜ ಹಿತ ಕೆಲಸ ಮಾಡುತ್ತಾ ಸಾಗಿ ಎಂದು ಹರಿಸಿದರು.
ಸತ್ತೀಗೇರಿ ಪ್ರೌಢಶಾಲೆಯ ಶ್ರೀಮತಿ ಎಸ್ ಎಸ್ ಕುಡುಚಿ ಮಾತನಾಡಿದ ಅವರು ನಾನು ಕಲಿಸಿದ ಪಾಠಗಳು ನಿಮ್ಮ ಬದುಕಿಗೆ ದಾರಿದೀಪವಾದ ತೃಪ್ತಿ ನನಗಿದೆ. ಇಂತಹ ಖುಷಿ ಯಾವ ಪ್ರಶಸ್ತಿಗೂ ಕಡಿಮೆಯಿಲ್ಲ ಎಂದರು .
ಇನ್ನೂ ಮಾರ್ಕ್ಸ ಕಡಿಮೆ ಬಂದಾಗ ನಿಮಗಿಂತ ಚಿಂತೆ ನನಗೂ ಆಗುತ್ತಿತ್ತು ಎನ್ನುವ ಮೂಲಕ ತಮ್ಮ ನೆನಪಿನ ಬುತ್ತಿಯನ್ನು ಎಸ್.ಡಿ ಪಾಟೀಲ ಗುರುಮಾತೆ ತಮ್ಮ ಕಲಿಸಿದ ಪಾಠಗಳು ವಿದ್ಯಾರ್ಥಿಗಳನ್ನು ಹೆಸರಿಸುತ್ತಾ ನೆನಪುಗಳನ್ನು ಹೇಳಿದರು.
ಇತಿಹಾಸದ ಶಿಕ್ಷಕರಾದ ಎನ್.ಎಮ್ ಮಾದನಭಾಂವಿ ಮಾತನಾಡಿ ಇಂದು ನಿಮ್ಮ ಭವಿಷ್ಯತ್ತಿಗೆ ನಮ್ಮ ಕಲಿಸಿದ ಪಾಠಗಳು ನೆರವಾದರೆ ಇದಕ್ಕಿಂತ ಸಂತೋಷ ಮತ್ತೊಂದಿಲ್ಲ ಎಂದರು.
ಪ್ರಾಥಮಿಕ ಗುರುಗಳಾದ ಬಿ.ಎಸ್.ಪಾಟೀಲ ಹಾಗೂ ಬಿ.ಎ.ಪಾಟೀಲ ಗುರುಗಳು ತಮ್ಮ ಒಡನಾಟವನ್ನು ಹಂಚಿಕೊಂಡರು .ಇನ್ನೂ ಅಧ್ಯಕ್ಷೀಯ ಭಾ಼ಷಣ ಮಾಡಿ ಶಾಲೆಯ ಷಣ್ಮುಖ ಗಣಾಚಾರಿ ಮಾತನಾಡಿ ಇಲ್ಲಿಯ ವಿದ್ಯಾರ್ಥೀಗಳಿಗೆ ಒಳ್ಳೆಯ ಸಂಸ್ಕಾರವಿದೆ ನೀವೆಲ್ಲ ನಮ್ಮ ಶಾಲೆಗೆ ಹಾಗೂ ಊರಿಗೆ ಕೀರ್ತಿ ತರುವಂತಾಗಬೇಕು ಎಂದು ಹರಿಸಿದರು.
ರುದ್ರಗೌಡ ಪಾಟೀಲ ರಮೇಶ ಪಢೇಣ್ಣವರ,ಪಾರೀಶ ,ಸುನೀಲ,ಚನಗೌಡಪಾಟೀಲ,ಮುದಕಪ್ಪ ಆನಿಗೋಳ ಸಂಗಮೇಶ,ಗೆಳೆಯರ ಬಳಗ ಎಸ್.ಡಿ.ಎಮ್.ಸಿ ಯವರು ಪರೂರಿನಲ್ಲಿದ್ದ ವಿದ್ಯಾರ್ಥಿಗಳು ಹಾಜರಿದ್ದರು ನಿರೂಪಣೆಯನ್ನು ಮಾರುತಿ ಕುರಿಹುಲಿ ವಂದನಾರ್ಪಣೆಯನ್ನು ಕುಮಾರ ಸಂಗಣ್ಣವರ ಮಾಡಿದರು