ಮೂರು ಮುದ್ವೆಯಾದ ಬ್ಯೂಟಿ, ನಿಲ್ಲದ ರಂಗಿನಾಟಕ್ಕೆ ಗಂಡಂದಿರ ಪರದಾಟ!

ಉಮೇಶ ಗೌರಿ (ಯರಡಾಲ)

ಮೈಸೂರು: ಚೆಂದುಳ್ಳಿ ಚೆಲುವೆ. ಒಂದೇ ನೋಟದಲ್ಲಿ ಯುವಕರನ್ನು ಖೆಡ್ಡಾಗೆ ಬೀಳಿಸುವ ಮೈಮಾಟ. ಇದನ್ನೇ ದಾಳವಾಗಿಸಿಕೊಂಡ ಮೈಸೂರಿನ ಬ್ಯೂಟಿ ನಿಧಾನ ಖಾನ್, ಒಂದಲ್ಲ, ಎರಡಲ್ಲ, ಮೂರು ಮದ್ವೆಯಾಗಿದ್ದಾಳೆ. ಮುದ್ವೆ ಮೂರಾದ್ರೂ ಸಂಸಾರ ಹಲವು. ಜೊತೆಗೆ ಡೇಟಿಂಗ್, ಚಾಟಿಂಗ್ ಮತ್ತಷ್ಟು. ಆದರೆ ಈಕೆಯ ಅಸಲಿ ಬಣ್ಣ ಇದೀಗ ಹೊರಬಿದ್ದಿದೆ. ಮೂರನೇ ಪತಿಗೆ ಮೋಸ ಮಾಡಲು ಹೋಗಿ ರಂಗಿನಾಟ ಬೆಳಕಿಗೆ ಬಂದಿದೆ. 

ಮೈಸೂರಿನ ಉದಯಗಿರಿ ನಿವಾಸಿಯಾಗಿರುವ ನಿಧಾ ಖಾನ್, ನೋಡೆಕೆ ಸುಂದರವಾಗಿರುವ ಚೆಂದುಳ್ಳಿ ಚೆಲುವೆ.  ಇದೀಗ ಮೂರನೇ ಪತಿಗೆ ಚಮಕ್ ಕೊಟ್ಟಿದ್ದಾಳೆ. ಅಂದರೆ ಈಕೆಯ ಮೂರನೇ ಪತಿ.  ಗಂಡ ಮೂರು ಮೂರು ಮದುವೆ ಆದ್ರೆ ಮೋಸ ಮಾಡ್ದ, ಕಟ್ಕೊಂಡ ಹೆಂಡ್ತಿಗೆ ಕೈ ಕೊಟ್ಟ ಅನ್ನೋ‌ ಅಪವಾದಗಳು ಕಾಮನ್. ಆದ್ರೆ ಮೊದಲನೇ ಮದುವೆ ಮುಚ್ಚಿಟ್ಟು ಎರಡನೇ ಮದುವೆ  ಮೂರನೇ ಮದುವೆಯಾಗಿ ಪತಿಯನ್ನ ಯಾಮಾರಿಸಿದ್ದಾಳೆ ಈಕೆ.

ಕ್ಲೀನ್ ಬೋಲ್ಡ್ ಆಗುವ ಸೌಂದರ್ಯ, ಜೊತೆಗೆ ಮಾತಿನಲ್ಲೇ ಮಂಟಪಕ್ಕೆ ಕಟ್ಟೋ ಚಾಕಚಕತ್ಯೆ.ಇದೇ ಕಾರಣದಿಂದ ಒಂದಲ್ಲ, ಎರಡಲ್ಲ, ಮೂರು ಮದ್ವೆಯಾರೂ ಈ ಬ್ಯೂಟಿಯ ದಾಹ ತಣಿದಿಲ್ಲ. ಮೂರನೆ ಗಂಡ ಪಕ್ಕದಲ್ಲಿರುವಾಗಲೇ  ಮೆಸೇಜ್, ಚಾಟಿಂಗ್, ಡೇಟಿಂಗ್, ಕದ್ದು ಮುಚ್ಚಿ ಚೆಲ್ಲಾಟ ಕೂಡ ನಡೆಯುತ್ತಲೇ ಇತ್ತು. ಟಿಂಡರ್ ಆ್ಯಪ್ ಮೂಲಕ ಪರಿಚಯವಾದ ನಿಧಾ ಖಾನ್ ಗೆ ಮದುವೆ ಪ್ರಪೋಜ್ ಮಾಡಿದ್ದಾನೆ. ಮದುವೆ ಪ್ರಪೋಜಲ್ ಗೆ ಒಪ್ಪಿಕೊಂಡ ನಿಧಾ ಖಾನ್ ನವಂಬರ್ 2019 ರಲ್ಲಿ ಮದುವೆಯಾಗಿದ್ದಾರೆ. ಮದುವೆ ನಂತ್ರ ನಿಧಾ ಖಾನ್ ಮತ್ತೊಂದು ಮೊದಲ ಮದುವೆ ವಿಚಾರ ಗೊತ್ತಾಗಿದೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ ಆರ್ ಆಗಿ ಕೆಲ್ಸ ಮಾಡ್ತಿರೋ ಅಜಾಮ್ ಖಾನ್ ಗೆ ನಿಧಾ ಖಾನ್ ನಡವಳಿಕೆ ಮೇಲೆ ಅನುಮಾನ ಬಂದಿದೆ. ಬೇರೆ ಯುವಕರ ಜೊತೆಗೆ ಚಾಟಿಂಗ್ ಡೇಟಿಂಗ್ ಕೂಡ ನಡಿತಾ ಇತ್ತು.ಕಳೆರ ವಾರವಷ್ಟೇ ಕಾರಿನಲ್ಲಿ ಬೇರೊಂದು ಯುವಕನ ಜೊತೆ ಕಾರಿನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ ಹಾಗೂ ಪ್ರಿಯಕರನನ್ನ ಹಿಡಿದು ಉದಯಗಿರಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಬಳಿಕ ಮದರಾಸದಲ್ಲೂ ಡಿವೋರ್ಸ್ ಬೇಕು ಅಂತಾ ಕೋಮಿನ ಮುಖಂಡರನ್ನ ಕೇಳಿದ್ದಾರೆ. ಆದ್ರೆ ಆಕೆ ಡಿವೋರ್ಸ್ ಕೊಡಲ್ಲ ಅಂತಿದ್ದಾಳಂತೆ. ಆಕೆಯಿಂದ ನನಗೆ  ಜೀವ ಬೆದರಿಕೆ ಇದೆ. ಡಿವೋರ್ಸ್ ಸಿಕ್ರೆ ಸಾಕಪ್ಪ ಅಂತಾ ಅಜಾಮ್ ಖಾನ್ ವಕೀಲರ ಮೊರೆ ಹೊಗಿದ್ದಾನೆ. ಪ್ರಕರಣ ಠಾಣೆ ಮೆಟ್ಟಿಲೇರಿದರೂ ಇನ್ನೂ ಎಫ್‌ಐಆರ್ ಮಾತ್ರ ದಾಖಲಾಗಿಲ್ಲ.

 

Share This Article
";