ಹೆಂಡತಿಯ ಕತ್ತು ಕೂಯ್ದು ಕೊಲೆ ಮಾಡಿದ ಪತಿರಾಯ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ರಾಮನಗರ: ಪಾಪಿ ಪತಿಯೊಬ್ಬ ತನ್ನ ಜೊತೆ ಜಗಳ ಮಾಡಿದಳೆಂದು ತನ್ನ ಪತ್ನಿ ಮಂಗಳಗೌರಿ (28) ನಡು ರೋಡಿನಲ್ಲಿ ಕತ್ತು ಕುಯ್ದು ಕೊಲೆ ಮಾಡಿರುವ ಭೀಕರ ಘಟನೆ ತಾಲೂಕಿನ ಅರಳಿಮರದೊಡ್ಡಿ ಗ್ರಾಮದಲ್ಲಿ ವರದಿಯಾಗಿದೆ.

ಕಳೆದ ಒಂದು ವಾರದ ಹಿಂದೆ ಗಂಡನ ಜೊತೆ ಗಲಾಟೆ ಮಾಡಿಕೊಂಡು ಮಂಗಳಗೌರಿ ಅಕ್ಕನ ಮನೆಗೆ ಬಂದಿದ್ದರು. ಈ ವೇಳೆ ರಾಮನಗರದ ಮಧುರಾ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡ್ತಿದ್ದು ಕೆಲಸಕ್ಕೆ ಹೋಗಿದ್ದಾರೆ. ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬರ್ತಿದ್ದಾಗ ಗಾರ್ಮೆಂಟ್​ನ ಬಸ್ ಹಿಂಬಾಲಿಸಿ ಬಂದ ಪತಿ ಸತೀಶ್​ ಚಾಕುವಿನಿಂದ ಕತ್ತು ಕುಯ್ದು ಕೊಲೆ ಮಾಡಿ ಎಸ್ಕೇಪ್​ ಆಗಿದ್ದಾನೆ.

ರಾಮನಗರ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮಹಿಳೆಯ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ

Share This Article
";