ಬೈಲಹೊಂಗಲ: ಮಹರ್ಷಿ ವಾಲ್ಮೀಕಿಯವರು ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ.ಇಡೀ ಮನುಕುಲಕ್ಕೆ ಜೀವನದ ಮೌಲ್ಯಗಳನ್ನು ತಿಳಿಸಿದ ಮಹಾನ್ ಸಂತರು ಎಂದು ಪತ್ರಕರ್ತರಾದ ಯುವ ಮುಖಂಡ ಉಮೇಶ ಗೌರಿ ಹೇಳಿದರು.
ಬೈಲಹೊಂಗಲ ತಾಲೂಕಿನ ಯರಡಾಲ ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ವಾಲ್ಮೀಕಿ ಸಂಘದಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಮಾಡಿ ಪುಷ್ಪ ನಮನಗಳನ್ನು ಸಲ್ಲಿಸಿ ಮಾತನಾಡಿದ ಉಮೇಶ ಗೌರಿ ಅವರು ಮಹರ್ಷಿ ವಾಲ್ಮೀಕಿಯವರು ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ.ಇಡೀ ಮನುಕುಲಕ್ಕೆ ರಾಮಾಯಣ ಎಂಬ ಕೃತಿ ಮೂಲಕ ಜೀವನದ ಮೌಲ್ಯಗಳನ್ನು ಸಮಾಜಕ್ಕೆ ನೀಡಿದ ಮಹಾನ್ ಸಂತರು. ವಾಲ್ಮೀಕಿಯವರ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ.ಅವರ ತತ್ವಾದರ್ಶಗಳನ್ನು ನಮ್ಮ ನಡೆ ನುಡಿಗಳಲ್ಲಿ ಅನುಸರಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ದುಂಡಯ್ಯ ಹಿರೇಮಠ ಸ್ವಾಮೀಜಿ ಅವರು ಮಾತನಾಡಿ ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯ ರಚನೆ ಮೂಲಕ ಸರ್ವಕಾಲಿಕ ಸರ್ವಜ್ಞರಾಗಿದ್ದಾರೆ. ವಿಶ್ವ ಮಾನವ ಸಮುದಾಯಕ್ಕೆ ಶ್ರೇಷ್ಠ ಕೃತಿ ನೀಡಿ ಮಾದರಿಯಾಗಿದ್ದಾರೆ. ಅವರ ಆದರ್ಶ, ತತ್ವ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿವೆ. ಮನುಕುಲದ ಭವಿಷ್ಯದ ಉಳಿವಿನ ಪರವಾದ ಚಿಂತನೆಗಳನ್ನು ಹೊಂದಿದ್ದ ಬುದ್ದ, ಬಸವ, ಅಂಬೇಡ್ಕರ್, ವಾಲ್ಮೀಕಿಯಂತಹ ಪುಣ್ಯ ಪುರುಷರ ನೆನಪುಗಳು ಕೇವಲ ಆಚರಣೆಗೆ ಸೀಮಿತವಾಗದೆ, ಸಮಗ್ರ ಸಮಾಜದ ವಿಚಾರಧಾರೆಗಳಾಗಿ ಪರಿವರ್ತಿತವಾಗಬೇಕು ಎಂದರು.
ಈ ವೇಳೆ ಗ್ರಾಪಂ ಸದಸ್ಯ ಬಸನಗೌಡ ಪಾಟೀಲ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಭೀಮಪ್ಪ ಕಮತಗಿ. ಯುವ ಮುಖಂಡರಾದ ಸುರೇಶ ಹೂಗಾರ,ಬಸಲಿಂಗಯ್ಯಾ ಪೂಜೇರ. ವಿಠ್ಠಲ ದೇವಲಾಪೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಮೃತ ಖೋದಾನಪೂರ, ಕುಮಾರ್ ಮುರಗೋಡ, ಸಂತೋಷ ದೇವಲಾಪೂರ, ಮಡಿವಾಳಪ್ಪ ತೋಟಗಿ,ಕಾರ್ತಿಕ ರಾಜಗೋಳಿ, ಬಸವರಾಜ ತಳವಾರ ಸೇರಿದಂತೆ ವಾಲ್ಮೀಕಿ ಸಂಘದ ಸರ್ವ ಸದಸ್ಯರು ಹಾಗೂ ಗ್ರಾಮದ ಗ್ರಾಮಸ್ಥರು ಇದ್ದರು.
ಅರುಣ ಖೋದಾನಪೂರ ಕಾರ್ಯಕ್ರಮ ನಿರ್ವಹಿಸಿದರು.