ಲೇಖಕನ:ವಿಠ್ಠಲ ವಗ್ಗನ್
ಶಂಕರಾಚಾರ್ಯ ಪ್ರತಿಪಾದನೆ ಮಾಡಿರುವುದು ಅದ್ವೈತ ಸಿದ್ಧಾಂತ. “ಬ್ರಹ್ಮ ಸತ್ಯಂ, ಜಗನ್ ಮಿಥ್ಯಾ, ಜೀವೋ ಬ್ರಹ್ಮೈವ ನಾಪರಃ” ಅಂದರೆ ಬ್ರಹ್ಮವೇ ಸತ್ಯ, ಜಗತ್ ಸುಳ್ಳು, ಜೀವ ಬ್ರಹ್ಮ ಬೇರೆ ಇಲ್ಲ ಅವೇರಡೂ ಒಂದೇ”. ಅದ್ವೈತ ಸಿದ್ಧಾಂತ ಮೂಲ ಉದ್ದೇಶ ಬ್ರಾಹ್ಮಣ ಸಂಘಟನೆ ಮತ್ತು ಚಾತುರ್ವರ್ಣ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದಾಗಿದೇ ಆಗಿತ್ತು.
ಶಂಕರಾಚಾರ್ಯ ಬೌದ್ಧ ಧಮ್ಮದ ನಾಶಕ್ಕೆ ಷಡ್ಯಂತ್ರ ರೂಪಿಸಿದ ಕುತಂತ್ರಿಯೇ ವಿನಃ ಬೌದ್ಧ ಧಮ್ಮ ಇವನಿಂದಲೇ ನಾಶವಾಗಿದೆ ಎಂಬುವುದು ಮೂರ್ಖನ ಮಾತಾಗುತ್ತದೆ.
ಕಾರಣ ಶಂಕರಾಚಾರ್ಯ ಒಬ್ಬ ಕೃತಿಚೌರ್ಯ ವ್ಯಕ್ತಿಯಾಗಿದ್ದ. ಶಂಕರಾಚಾರ್ಯನ ಬಗ್ಗೆ ಒಂದೆರಡು ವಾಸ್ತವಿಕ ಮಾಹಿತಿಗಳನ್ನು ನೋಡೋಣ:
ಶಂಕರಾಚಾರ್ಯನ ಸಿದ್ಧಾಂತ ಸುಳ್ಳಿನ ಸಿದ್ಧಾಂತವಿದೆ.ಮಾಯಾವಾದಸಚ್ಛಾಸ್ತ್ರಂ ಪ್ರಚ್ಛನ್ನ|ಬೌದ್ಧಮುಚ್ಯತೆ | ಮಧ್ವೈವ ಕೃಇತಂ ದೇವಿ ಕತಾ ಬ್ರಾಹ್ಮಣರೂಪಿಣಾ ||ಪದ್ಮಪುರುರಾಣ. ಉ.ಖಂ.263/72.
ಅರ್ಥ:- ಶಂಕರಾಚಾರ್ಯನ ಮಾಯಾವಾದ (ಸಿದ್ಧಾಂತ) ಸುಳ್ಳಿನ ಶಾಸ್ತ್ರವಿದೆ. ಅದು ಪ್ರಚ್ಛನ್ನ ಬುದ್ಧತ್ವವೇ ಇದೆ. ಆ ಮಾಯಾವಾದದ ಹೇ ದೇವಿ, ನಾನೇ ಬ್ರಾಹ್ಮಣನ ರೂಪಧಾರಣೆ ಮಾಡಿ ಕಲಿಯುಗದಲ್ಲಿ ಪ್ರತಿಪಾದನೆ ಮಾಡಿದ್ದೇನೆ”
ಸ್ಕಂದ ಪುರಾಣದಲ್ಲೂ ಶಂಕರಾಚಾರ್ಯನ ಕೃತಿ ಚೌರ್ಯದ ಬಗ್ಗೆ ದಾಖಲೆ ಇದೆ.
“ಶಂಕರಾಚಾರ್ಯ ಅಸುರ ಅವತಾರಿ, ಮಾಯಾವಾದಿ, ಸುಳ್ಳಿನ ಶಾಸ್ತ್ರ ಪ್ರವರ್ತಕ, ಪ್ರಚ್ಛನ್ನ ಬೌದ್ಧ, ಪ್ರಕೃತಿಯ ಜನ ಮೋಹಕ” ಎಂದು ಹೇಳಲಾಗಿದೆ. ಇಂತಹ ಕೃತಿ ಚೌರ್ಯ ವ್ಯಕ್ತಿಯಿಂದ ಬೌದ್ಧ ಧರ್ಮ ನಾಶವಾಗಿಲ್ಲ. ನಾಶ ಮಾಡಿಸಿದ್ದಾನೆ.
ಶಂಕರಾಚಾರ್ಯನ ವಿಕೃತ ಮನಸ್ಥಿತಿ ನೋಡಿ: 14ನೇ ಶತಮಾನದಲ್ಲಿ ಮಾಧವಾಚಾರ್ಯರಿಂದ ರಚಿತಚವಾದ “ಶಂಕರ ದಿಗ್ವೀಜಯ” ಗ್ರಂಥ ನೋಡಿದರೆ ಶಂಕರನ ಪುಂಡಾಟ ಆರ್ಥವಾಗುತ್ತದೆ. ಶಂಕರ ಬೌದ್ಧರನ್ನು ನಾಶ ಮಾಡಿದ್ದು ಶಾಸ್ತ್ರದಿಂದ ಅಲ್ಲ. ಬದಲಾಗಿ ಶಸ್ತ್ರದಿಂದ ನಾಶ ಮಾಡಿಸಿದ್ದಾನೆ.ಶಂಕರ ದಿಗ್ವಿಜಯದ ಪ್ರಥಮ ಸರ್ಗ1./93 ರಲ್ಲಿ ದಾಖಲಾಗಿರುವುದು:
ರಾಜಾ ಸುಧನ್ವನು ಕುಮಾರಿಲ್ ಭಟ್ ನ ಒತ್ತಾಯಕ್ಕೆ ಮಣಿದು ತನ್ನ ಸೈನಿಕರಿಗೆ ಆಜ್ಞೆ ಮಾಡಿದ “ಹಿಮಾಲಯದಿಂದ ರಾಮೇಶ್ವರದವಯಾನ ಪ್ರದೇಶದಲ್ಲಿ ವಾಸವಾಗಿರುವ ಬಾಲಕನಿಂದ ಮುದುಕನವರೆಗೂ ಎಲ್ಲಾ ಬೌದ್ಧರನ್ನು ಯಾರು ಕೊಲ್ಲುವುದಿಲ್ಲವೋ ನಾನು ಅವರಿಗೆ ಮೃತ್ಯುದಂಡ ಕೋಡುತ್ತೇನೆ “.( ರಾಜಾಜ್ಞೆ)
ಬೌದ್ಧ ಬಿಕ್ಕುಗಳು ಆತ್ಮ ರಕ್ಷಣೆ ಮಾಡಿಕೊಳ್ಳುವ ಸಾಮಥ್ರ್ಯ ಹೊಂದಿದ್ದರು. ಇದರ ಬಗ್ಗೆ ಭಯವಿದ್ದ ಶಂಕರಾಚಾರ್ಯ, ರಾಜಾ ಸುಧನ್ವನ ಸೈನ್ಯದೊಂದಿಗೆ ತನ್ನ ಶಿಷ್ಯರನ್ನು ಕಳುಹಿಸಿ ಬಿಕ್ಕುಗಳ ತಲೆಯನ್ನು ಕಡಿಸಿದನು. ( ಶಂಕರದಿಗ್ವಿಜಯ 15/1)
ದುರ್ಭಿಕ್ಷು ಸ್ವಪರೈಕತಾ ಫಲಗತಂ|ದುರ್ಭಿಕ್ಷು ಸಂಪಾದೀತಮ್ || *15/172.
ಶಂಕರ ದಿಗ್ವಿಜಯ
ಅರ್ಥ:- ದುಷ್ಟ ಬಿಕ್ಷುವಾದ ಬುದ್ಧನು ಈ ಸಂಸಾರದ ಅತೀ ದೊಡ್ಡ ದುರ್ಭಿಕ್ಷೆ ಹಬ್ಬಿಸಿದನು. ಅಂಗುಲಿಮಾಲಾನಂತಹ ಕ್ರೂರಿಗೆ ಪರಿವರ್ತನೆ ಮಾಡಿರುವ ಬುದ್ಧನನ್ನು ಕ್ರೂರಿ ಎನ್ನುವ ಈ ಅವಿವೇಕಿ ಎಂತಹ ಕ್ರೂರಿ ಇದ್ದಿರಬೇಕು ಅರ್ಥ ಮಾಡಿಕೊಳ್ಳಿ.
ಶಂಕರಾಚಾರ್ಯ ಬೌದ್ಧ ಧಮ್ಮದ ಯಾವುದೇ ಮೂಲ ತತ್ವಗಳನ್ನು ಅಧ್ಯಯನ ಮಾಡಿಲ್ಲ. ವ್ಯಾಖ್ಯಾನ ಮಾಡಿಲ್ಲ. ಆತನ ತರ್ಕ ಬುದ್ಧಿಶಕ್ತಿ, ವೈಚಾರಿಕತೆಯ ಶ್ರೇಷ್ಟತೆಯಿಂದ ಬೌದ್ಧ ಧಮ್ಮ ನಾಶವಾಗಿಲ್ಲ. ಬೌದ್ಧ ಧಮ್ಮವನ್ನು ‘ಶಾಸ್ತ್ರದಿಂದ’ ಸೋಲಿಸದೇ ‘ಶಸ್ತ್ರದಿಂದ’ ಅದರಲ್ಲೂ ಆತನ ಕುತಂತ್ರದಿಂದ ಧಮ್ಮ ನಾಶ ಮಾಡಿಸಿದ್ದಾನೆ.
ಶಂಕರಾಚಾರ್ಯ ಬೌದ್ಧಧಮ್ಮಕ್ಕೆ ಪ್ರತಿಗಾಮಿಯಾದರೂ ಆತನಿಂದಲೇ ಧಮ್ಮ ನಾಶವಾಗಿಲ್ಲ. ನಾಶ ಮಾಡಿಸಿದ್ಧಾನೆ. ಶಂಕರಾಚಾರ್ಯ ಸತ್ತಿದ್ದು ಕ್ರಿ.ಶ. 820ರಲ್ಲಿ. ಈತನ ನಂತರ ಬಂದ ಬ್ರಾಹ್ಮಣ ಧರ್ಮ ಸಂರಕ್ಷಕರಾದ:
1. ವಾಚಸ್ಪತಿ-ಕ್ರಿ.ಶ.900
2. ಜಯಂತ ಭಟ್-ಕ್ರಿ.ಶ.1000
3. ಶ್ರೀಧರ ಕ್ರಿ.ಶ. 1000
4. ಸಾಂಖ್ಯ ಕ್ರಿ.ಶ. 1400
5. ಅನಿರುದ್ಧ ಕ್ರಿ.ಶ. 1500. ಮುಂತಾದವರು ಬೌದ್ಧಧಮ್ಮವನ್ನು ನಾಶ ಮಾಡಿಸಿದರು.
ಅಂದರೆ ಭಾರತದ ಮೂಲ ಧರ್ಮವಾದ ಬೌದ್ಧಧಮ್ಮದ ಚಿಂತನೆಗಳ ಮೇಲೆ ವಿದೇಶಿ ಆರ್ಯ ಬ್ರಾಹ್ಮಣರಿಂದ ಕ್ರಿ.ಪೂ.185ರಿಂದಲೂ ನಿರಂತರವಾಗಿ ಮತ್ತು ಅವ್ಯಾಹತವಾಗಿ ದೌರ್ಜನ್ಯ ನಡೆಯುತ್ತಲೇ ಇದೆ. ಆದರೆ ದುರಾದೃಷ್ಠಕರವೆಂದರೆ, ಈ ಸಂಗತಿಯನ್ನು ಅರ್ಥ ಮಾಡಿಕೊಳ್ಳದ ಮೂಲಭಾರತೀಯರು ರಾಜಕೀಯ ಅಧಿಕಾರದ ದುರಾಸೆಗಾಗಿ ಹಿಂದೂ ಧರ್ಮದ ಅಫೀಮನ್ನು ನೆತ್ತಿಗೇರಿಸಿಕೊಂಡು ತಮ್ಮ ಸಮಾಜ ಭವಿಷ್ಯವನ್ನು ಬಲಿಕೊಟ್ಟು ಬ್ರಾಹ್ಮಣವದದ ಅಡಿಯಾಲಾಗಿ ದುಡಿಯುತ್ತಲಿದ್ದಾರೆ. ಇದು ತುಂಬಾ ಅಘಾತಕಾರಿ ಬೆಳವಣಿಗೆಯಾಗಿದೆ. ಇದನ್ನು ಓದಿ ಅರ್ಥ ಮಾಡಿಕೊಂಡಾದರೂ ಮಾನಸಿಕವಾಗಿ ಪರಿವರ್ತನೆಯಾದರೆ ಬಹು ಸಂಸ್ಕೃತಿಯ ಭಾರತ ಉಳಿಯುತ್ತದೆ. ಇಲ್ಲದಿದ್ದರೆ ಬ್ರಾಹ್ಮಣ ಭಾರತ ರೂಪಿತಗೊಳ್ಳುತ್ತದೆ.