ಸ್ವಂತ ಅಸ್ತಿತ್ವಕ್ಕಿಂತ ಇತಿಹಾಸದ ಅಸ್ತಿತ್ವ ಮುಖ್ಯ – ನಿಜಗುಣಾನಂದ ಶ್ರೀಗಳು

ಉಮೇಶ ಗೌರಿ (ಯರಡಾಲ)
ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿರುವ ಶ್ರೀ ನಿಜಗುಣಾನಂದ ಶ್ರೀಗಳು

ಸುದ್ದಿ ಸದ್ದು ಚನ್ನಮ್ಮನ ಕಿತ್ತೂರು: ಇಹಾಸದ ಪ್ರಜ್ಞೆಯ ಕೊರತೆಯಿಂದಾಗಿ ಈ ಸಮಾಜದಲ್ಲಿ ಸ್ವಂತ ಅಸ್ತಿತ್ವಕ್ಕಾಗಿ ನಾವುಗಳೆಲ್ಲ ಬಡಿದಾಡುತ್ತಿದ್ದೇವೆ ಸ್ವಂತ ಅಸ್ತಿತ್ವಕ್ಕಿಂತ ಇತಿಹಾಸದ ಅಸ್ತಿತ್ವ ತುಂಬ ಮುಖ್ಯವಾದುದು ಆಗ ಮಾತ್ರ ಮುಂದಿನ ಪೀಳಿಗೆಗೆ ಇತಿಹಾಸ ಸೇರಿದ ಹೋರಾಟಗಾರರನ್ನು ಪರಿಚಯಿಸುವ ಕಾರ್ಯ ಆಗುತ್ತದೆ ಎಂದು ನಿಷ್ಕಲ ಮಂಟಪ ಬೈಲೂರು ಹಾಗೂ ತೋಂಟದಾರ್ಯ ಮಠ ಮುಂಡರಗಿಯ ನಿಜಗುಣಾನಂದ ಮಹಾಸ್ವಾಮಿಗಳು  ಜಿಲ್ಲಾಡಳಿತ ಪ್ರಬಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಿತ್ತೂರು ಕೋಟೆ ಆವರಣದಲ್ಲಿ ಜರುಗಿದ ರಾಣಿ ಚನ್ನಮ್ಮನ ಉತ್ಸವದ ಸಮಾರೋಪ ಸಮಾರಂಭದ ಸಾನಿದ್ಯ ವಹಿಸಿ  ಅಭಿಮತ ವ್ಯಕ್ತಪಡಿಸಿದರು.

ರಾಣಿ ಚನ್ನಮ್ಮ ಹೆಸರಿನ ಗ್ರಾಮೀಣ ಮಹಿಳಾ ಇಂಜಿನೀಯರಿಂಗ್ ಕಾಲೇಜು ಸ್ಥಾಪನೆ ಮಾಡಿದಲ್ಲಿ ಈ ಭಾಗದ ಗ್ರಾಮೀಣ ವಿದ್ಯಾರ್ಥಿನಿಯರಿಗೆ ತಾಂತ್ರಿಕ ಶಿಕ್ಷಣ ಪಡೆಯಲು ತುಂಬಾ  ಅನುಕೂಲವಾಗುತ್ತದೆ. ಅದೇ ರೀತಿ ರಾಷ್ಟ್ರಮಟ್ಟದಲ್ಲಿ ರಾಣಿ ಚನ್ನಮ್ಮನ ಸಾಹಸಗಾಥೆ ಕುರಿತಾದ  ರೂಪಕ ಅಥವಾ ನಾಟಕವನ್ನು ಹಿಂದಿ ಭಾಷೆಯಲ್ಲಿ ರಚನೆ ಮಾಡಿ ರಂಗ ಪ್ರದರ್ಶನ ಮಾಡುವ ಮೂಲಕ ಇಡೀ ರಾಷ್ಟ್ರದಲ್ಲಿ ಕಿತ್ತೂರು ಕ್ರಾಂತಿ ಬಗ್ಗೆ ಪರಿಚಯಿಸುವ ಕೆಲಸವನ್ನು ಕೇಂದ್ರ ಸಂಸ್ಕೃತಿ ಇಲಾಖೆ ಮಾಡುವಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಲ್ಲಿ ಮನವಿ ಮಾಡಿದರು. ಕೋವಿಡ್ ಕರಿನೆರಳು ಸರಿದು ಇಂತಹ ಉತ್ಸವಗಳು ಆರಂಭಗೊಂಡಿದ್ದರಿಂದ ವಿವಿಧ ವ್ಯಾಪಾರಿಗಳು ಶ್ರಮಿಕ ವರ್ಗದವರು ಪುನಃ ಚೇತರಿಸಿಕೊಳ್ಳಲು ಸಾಧ್ಯವಾಗಿದೆ ಎಂದ ಅವರು ಮಠಕ್ಕೆ ದಾವಿಸದೆ ಮಧ್ಯರಾತ್ರಿವರೆಗೆ ಕುಳಿತು ವಿಜಯ ಪ್ರಕಾಶ ಅವರ ಸುಮಧುರ ಹಾಡುಗಳನ್ನು ಕೇಳಿ ಆನಂದಿಸಿದರು.

ಮುಖ್ಯ ಅತಿಥಿ ಸ್ಥಾನ ವಹಿಸಿ ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ ಅವರು ಮಾತನಾಡಿ ಸ್ವಾಭಿಮಾನ ಶೌರ‍್ಯದ ನಾಡು ಕಿತ್ತೂರು ಈ ನೆಲದ ರಾಣಿ ಚನ್ನಮ್ಮ ಅವರ ಹೋರಾಟದ    ಆಗತ್ಯ ಇತಿಹಾಸವನ್ನು ನಾವುಗಳೆಲ್ಲ ಮರೆಯಬಾರದು ಇತಿಹಾಸದಲ್ಲಿ ೧೮೨೪ ರಲ್ಲಿ ಬ್ರಿಟಿಷರ ವಿರುದ್ದ ಬಂಡೆದ್ದು ಕಿತ್ತೂರನ್ನು ಸ್ವತಂತ್ರಗೊಳಿಸಿದ ದಿಟ್ಟ ಮೊಟ್ಟ ಮೊದಲ ಹೋರಾಟಗಾರರ್ತಿ ರಾಣಿ ಚನ್ನಮ್ಮ ಅವರ ಹೋರಾಟದ ಇತಿಹಾಸವನ್ನು ಈಗಿನ ಪೀಳಿಗೆಗೂ ತಲುಪಿಸುವ ಕೆಲಸ ಆಗಲಿ ಇಂತ ಸ್ವಾಭಿಮಾನದ ವಿಜಯೋತ್ಸವದಲ್ಲಿ ನಾನು ಭಾಗಿಯಾಗಿದ್ದು ಸಂತೋಷದ ಸಂಗತಿ ಎಂದರು.

ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ರಾಮಚಂದ್ರಗೌಡ ಮಾತನಾಡಿ ಕಿತ್ತೂರು ಚೆನ್ನಮ್ಮ 1824 ರಲ್ಲೇ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಆದರೆ ಇತಿಹಾಸದ ಪುಟಗಳಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟೀಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ಎಂದು ತಪ್ಪು ಮಾಹಿತಿ ದಾಖಲಾಗಿದೆ. ಅದಷ್ಟು ಬೇಗ ಇದನ್ನು ಸರಿಪಡಿಸುವ ಅಗತ್ಯವಿದೆ ಎಂದು  ಪ್ರತಿಪಾದಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷ ಸ್ಥಾನ ವಹಿಸಿ ಶಾಸಕ ಮಹಾಂತೇಶ ದೊಟ್ಟಗೌಡರ ಮಾತನಾಡಿ ಕಿತ್ತೂರು ಮತಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ಕರುಣಿಸಿದ ಸಚಿವರಿಗೆ ಸಂಸದರಿಗೆ ಅಭಿನಂದನೆ ಸಲ್ಲಿಸಿದರು ಮತ್ತು ಕ್ಷೇತ್ರಕ್ಕೆ ಅನೇಕ ಜನಪರ ಯೋಜನೆಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು

ಮಾಜಿ ಸೈನಿಕ ಮಲ್ಲನಗೌಡ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸುತ್ತಿರುವ ಶ್ರೀಗಳು ಮತ್ತು ಗಣ್ಯರು

ಈ ವೇಳೆ ನಿಚ್ಚಣಕಿ ಶ್ರೀ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು, ಕಾದರವಳ್ಳಿ ಸೀಮಿ ಮಠದ ಶ್ರೀ ಪಾಲಾಕ್ಷ ಮಹಾಸ್ವಾಮಿಗಳು, ರಾಜ್ಯಸಭೆ ಸಂಸತ್‌ ಸದಸ್ಯ ಈರಣ್ಣ ಕಡಾಡಿ, ಡಾ ಬಸವರಾಜ ಪರವಣ್ಣವರ, ಚಿನ್ನಪ್ಪ ಮುತ್ನಾಳ, ಸಂದೀಪ ದೇಶಪಾಂಡೆ, ಜಿಲ್ಲಾ ಹಂತದ ಅಧಿಕಾರಿಗಳು ಸೇರಿದಂತೆ ಇನ್ನೂ ಅನೇಕರು ಇದ್ದರು

ಸುದ್ದಿ ಮುಂದುವರೆಯುವುದು

 

 

 

 

 

 

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";