ಬೆಂಗಳೂರು: ಈಗಂತೂ ಕೆಲವು ಮಹಿಳೆಯರು ಗಂಡ-ಮಕ್ಕಳನ್ನ ಮರೆಮಾಚಿ ಇನ್ನೂ ಮದುವೆನೇ ಆಗಿಲ್ಲ ಅನ್ನೋ ರೇಂಜ್ಗೆ ಚಂದದ ಫೋಟೋಗಳನ್ನ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇಂತಹ ಚಂದದ ಆಂಟಿಯರನ್ನೇ ಟಾರ್ಗೆಟ್ ಮಾಡಿ ಖೆಡ್ಡಗೆ ಬೀಳಿಸಿ, ಮರ್ಯಾದೆ ಹರಾಜು ಹಾಕುವುದಾಗಿ ಬೆದರಿಕೆಯೊಡ್ಡುತ್ತಿದ್ದ ಯುವಕನೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ
ಹುಡುಗಿಯರ ಕಡೆಗೆ ತಿರುಗಿ ಕೂಡ ನೋಡುತ್ತಿರಲಿಲ್ಲ, ಮದುವೆ ಆಗಿದ್ದ ಚಂದದ ಆಂಟಿಯರೇ ಈತನ ಟಾರ್ಗೆಟ್, ಮದುವೆಯಾದ ಮಹಿಳೆಯರು ಸಿಕ್ಕರೆ ಬಿಡೋ ಪ್ರಶ್ನೇನೇ ಇಲ್ಲ. ಸೋಷಿಯಲ್ ಮೀಡಿಯಾದಲ್ಲಿ ಗಾಳ ಹಾಕ್ತಿದ್ದ, ಖೆಡ್ಡಗೆ ಬೀಳಿಸಿ ಮಾನ ಹರಾಜು ಹಾಕುವುದಾಗಿ ಬೆದರಿಕೆ ಕೂಡ ಹಾಕ್ತಿದ್ದ. ಅಂತಹ ಒಬ್ಬ ಕಾಮುಕ ಪೊಲೀಸರ ಅತಿಥಿಯಾಗಿದ್ದಾನೆ.
ಇದಾದ ಕೆಲ ದಿನಗಳ ನಂತರ ಆ ಆಂಟಿಯರಿಗೆ ಕರೆ ಮಾಡ್ತಿದ್ದ ಫೈಸಲ್, ಪದೇ ಪದೇ ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ, ಆಮೇಲೆ ಲಕ್ಷ ಲಕ್ಷ ಹಣ ಕೇಳೋಕೆ ಶುರುಮಾಡ್ತಿದ್ದ. ಗಾಬರಿಯಾದ ಆಂಟಿಯರು, ಹಣ ಕೊಡಲ್ಲ, ಬರೋದು ಇಲ್ಲ ಅಂತಾ ಅಂದ್ರೆ ದೈಹಿಕ ಸಂಪರ್ಕದ ವೀಡಿಯೋ ಕಳಿಸಿ ನಿನ್ನ ಗಂಡನಿಗೆ ಕಳಿಸ್ತೀನಿ. ಸೋಷಿಯಲ್ ಮೀಡಿಯಾದಲ್ಲಿ ಮಾನ ಹರಾಜು ಹಾಕ್ತೀನಿ ಅಂತಾ ಬೆದರಿಕೆ ಹಾಕ್ತಿದ್ದ.
ಇಂತಹ ಪ್ರಕರಣದಿಂದ ಬೇಸತ್ತ ಹೆಚ್ಎಸ್ಆರ್ ಬಡಾವಣೆಯ ಮಹಿಳೆಯೊಬ್ಬರು, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅದೇ ಮಹಿಳೆಯಿಂದ ಮಸೇಜ್ ಮಾಡಿ ಲೊಕೆಷನ್ ಹೇಳೋಕೆ ಹೇಳಿದ್ದಾರೆ. ಆಗ ಕಾಮುಕ ಚೆನ್ನೈನ ಒಂದು ಲಾಡ್ಜ್ಗೆ ಬರೋಕೆ ಹೇಳಿದ್ದಾನೆ. ಆ ಮಹಿಳೆ ಬರುತ್ತಾಳೆ ಎಂದು ಕಾದು ಕುಳಿತಿದ್ದ ಫೈಸಲ್ನನ್ನು ಬೆಂಗಳೂರು ಪೊಲೀಸರು ಎಡೆಮುರಿ ಕಟ್ಟಿದ್ದಾರೆ.
ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿರುವ ಪೊಲೀಸರಿಗೆ ಈತ ಈ ಹಿಂದೆಯೂ ಇದೇ ರೀತಿಯ ಕೃತ್ಯಗಳನ್ನ ಎಸೆಗಿರುವ ಬಗ್ಗೆ ಮೊಬೈಲ್ನಲ್ಲಿ ಒಂದಷ್ಟು ಸಾಕ್ಷಿಗಳು ಸಿಕ್ಕಿವೆ. ತನಿಖೆ ಮುಂದುವರಿದಿದೆ.