ಅಧಿಕಾರದ ದಾಹಕ್ಕೆ ಮುಂದಾದ ಎಮ್‌ ಡಿ ಮಲ್ಲೂರ್…! ಪುತ್ರನ ಪೊಲಿಟಿಕಲ್ ಭವಿಷ್ಯ ಬೆಳಗಲು ರೈತರ ಕನಸುಗಳು ನುಚ್ಚುನೂರು.

ಉಮೇಶ ಗೌರಿ (ಯರಡಾಲ)

ವರದಿ: ಉಮೇಶ ಗೌರಿ(ಯರಡಾಲ)

ಸೋಮೇಶ್ವರ ಸಕ್ಕರೆ ಕಾರ್ಖಾನೆ ಎಲೆಕ್ಷನ್… ಸಹಕಾರಿ ನಿಯಮಗಳೇ ಕನ್ಫ್ಯೂಷನ್ !

ಬೆಳಗಾವಿ: ಹರ.. ಹರ.. ಶ್ರೀ ಸೊಗಲ ‘ಸೋಮೇಶ್ವರ’ ಎಂದು ಸಂಭ್ರಮದ ಜಯಘೋಷ ಮೊಳಗಿಸಬೇಕಾಗಿದ್ದ ಬೈಲಹೊಂಗಲ ತಾಲೂಕಿನ ಕಾರ್ಖಾನೆಯೊಂದರ ರೈತರು ಕಮ್ ಷೇರುದಾರರು ಈಗ ಅಯ್ಯೋ…. ‘ಸೋಮೇಶ್ವರ’ ಅಂತ ಗೋಳಿಡುತ್ತಿದ್ದಾರೆ. ತಾಲೂಕಿನಲ್ಲಿರುವ ಹೆಸರಾಂತ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ತಾಂಡವ ಆಡುತ್ತಿರುವ ಎಮ್‌ ಡಿ ಮಲ್ಲೂರ್ ಅಕ್ರಮದ ಆಟಾಟೋಪಕ್ಕೆ ರೈತರು ಪಡಬಾರದ ಕಷ್ಟ ಪಡುತ್ತಿದ್ದಾರೆ.

ಇದೇ ಸೆ.10ಕ್ಕೆ ನಡೆಯಬೇಕಾಗಿರುವ ಸೋಮೇಶ್ವರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಹಕಾರಿ ನಿಯಮ ಉಲ್ಲಂಘಣೆ ಆಗಿದೆ. ಇದರ ಹಿಂದೆ ಆಡಳಿತದ ದುರಾಸೆಗೆ ಬಿದ್ದಿರುವ ಎಮ್‌ ಡಿ ಮಲ್ಲೂರ ಅವರ ಕರಾಳ ಕರಾಮತ್ತಿದೆ ಎಂದು ಕೆಲ ಷೇರು ಸದಸ್ಯರು ನೇರವಾಗಿ ಮಲ್ಲೂರ್ ಮೇಲೆ ಆರೋಪಿಸುತ್ತಿದ್ದಾರೆ. ಅಧಿಕಾರದ ವಿಪರೀತ ದಾಹಕ್ಕೆ ಬಲಿಯಾಗಿ ಸಿಹಿ ಉಣಿಸುವ ರೈತರ ಗಂಟಲಿನಲ್ಲಿ ವಿಷ ಕಕ್ಕುವ ಕೃತ್ಯ ಎಸಗಿದ್ದಾರೆ.

ಸಹಕಾರಿ ಇಲಾಖೆಯ ಅಪರ ನಿಬಂಧಕರಾಗಿಯೂ ಮತ್ತು  ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಕೇಂದ್ರ ಸ್ಥಾನೀಕ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಎಂ.ಡಿ.ಮಲ್ಲೂರ ಅವರ ಕೆಳ ಹಂತದ ಸ್ಥಾನವಾದ ಬೈಲಹೊಂಗಲ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯನ್ನು 4 ವರ್ಷಗಳಿಂದ ಮುಂದುವರಿಸಿಕೊಂಡು ಬಂದಿರುವುದು ಅವರ ಭ್ರಷ್ಟ ವ್ಯವಸ್ತೆಗೆ ಮಾದರಿಯಾಗಿದೆ.

 ನನಗೂ ಇರಲಿ ನನ್ನ ಮಗನಿಗೂ ಇರಲಿ ಅನ್ನುವ ದುರಾಸೆಗೆ ಬಿದ್ದು, ಸಹಕಾರಿ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ. ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಪುತ್ರ ಕಾರ್ತಿಕನ ರಾಜಕೀಯ ಭವಿಷ್ಯ ಬೆಳಗಲು ಎಮ್‌  ಡಿ ಮಲ್ಲೂರ್  ಮುಂದಾಗಿದ್ದಾರೆ.

ಈಗಾಗಲೆ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಅವರ ಮಗನಾದ ಕಾರ್ತಿಕ ಎಮ್‌ ಮಲ್ಲೂರ ಇವರ ನಾಮಪತ್ರ ಸಲ್ಲಿಕೆಗೆ ಸಾಕಷ್ಟು ವಿರೋಧದ ದೂರುಗಳು ಸಹಕಾರಿ ಚುನಾವಣಾ ಪ್ರಾಧಿಕಾರದಲ್ಲಿಯೂ ದೂರುಗಳು ದಾಖಲಾಗಿದ್ದು ಮತ್ತು ಇವರ ನಾಮಪತ್ರ ತಿರಸ್ಕರಿಸುವಂತೆ ಸಂಯುಕ್ತ ನಿಬಂಧಕರು ಮತ್ತು  ಜಿಲ್ಲಾ ಉಪ ನಿಬಂಧಕರು ಹಾಗೂ ಕಾರ್ಖಾನೆ ಚುನಾವಣಾಧಿಕಾರಿಗಳು  ಮತ್ತು ಬೈಲಹೊಂಗಲ ಸಹಾಯಕ ನಿಬಂಧಕರು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಇವರಲ್ಲಿ ಲಿಖಿತ ದೂರುಗಳು ದಾಖಲಾಗಿದ್ದರು ಅಧಿಕಾರದ ಪ್ರಭಾವನ್ನು ದುರುಬಳಿಕೆ ಮಾಡಿಕೊಂಡು ಸಹಕಾರಿ ಕಾಯ್ದೆ 29ಸಿ ಅಡಿಯಲ್ಲಿ ಸಹಕಾರಿ ಇಲಾಖೆಯ ಅತ್ಯುನ್ನತ ಅಧಿಕಾರಿಯಾಗಿ  ಕಾನೂನು ರಕ್ಷಿಸುವ ಹೊಣೆ ಹೊತ್ತ ಅಧಿಕಾರಿಗಳಾದ  ಎಂ.ಡಿ.ಮಲ್ಲೂರ ಅವರು ಮಗನ‌ ನಾಮಪತ್ರವನ್ನು ರಕ್ಷಿಸಲು ಕಾನೂನಿನ ಉಲ್ಲಂಘನೆ ಎದುರಿಸಬೇಕಾದ ಸಂದರ್ಭ ಉದ್ಭವವಾಗಲಿದೆ.

Share This Article
";