ಸುದ್ದಿ ಸದ್ದು ನ್ಯೂಸ್
ವರದಿ: ಬಸವರಾಜ ಚಿನಗುಡಿ ಕಿತ್ತೂರು
ಚನ್ನಮ್ಮನ ಕಿತ್ತೂರು: ಕಿತ್ತೂರಿನಿಂದ ನಿಚ್ಚಣಕಿ ಮಾರ್ಗವಾಗಿ ದಾರವಾಡ ಮತ್ತು ಬೆಳವಡಿಗೆ ಹೋಗುವ ರಸ್ತೆ ಮಧ್ಯ ಬರುವ ಶಿವನೂರು ಗ್ರಾಮದ ಬಳಿ ಇರುವ ರಸ್ತೆ ಕಳೆದ ಎರಡು ವರ್ಷಗಳ ಹಿಂದೆ ನೂತನ ರಸ್ತೆ ನಿರ್ಮಾಣ ಮಾಡಲಾಗಿತ್ತು. ನಿರ್ಮಾಣ ಮಾಡಿದ ಒಂದೇ ವರ್ಷದಲ್ಲಿ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿದ್ದು ಸಂಬಂಧಪಟ್ಟ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರು ದುರಸ್ತಗೊಂಡಿಲ್ಲ ಇದರಿಂದ ಈ ರಸ್ತೆ ಮಾರ್ಗವಾಗಿ ಸಂಚರಿಸುವ ವೇಳೆ ಅನೇಕ ಅಪಘಾತಗಳು ಸಂಬವಿಸಿದರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಜಾಣ ಕುರಡರಂತೆ ವರ್ತಿಸುತ್ತಿದ್ದಾರೆ.
ಹೌದು ಕಳೆದ ವರ್ಷ ಮಳೆಯಿಂದ್ದಾಗಿ ರಸ್ತೆ ಪಕ್ಕದಲ್ಲಿ ಇರುವ ಚರಂಡಿಯ ನೀರು ಈ ರಸ್ತೆ ಮೇಲೆ ಹರಿದು ರಸ್ತೆ ಸಂಪೂರ್ಣವಾಗಿ ತಗ್ಗು ಗುಂಡಿಗಳು ನಿರ್ಮಾಣವಾಗಿದ್ದು ರಸ್ತೆ ಪಕ್ಕದಲ್ಲಿಯೇ ಬಾರಿ ಪ್ರಮಾಣ ಕಂದಕವಾಗಿದ್ದು ಈ ರಸ್ತೆ ಮೂಲಕ ಸಂಚರಿಸುವವರಿಗೆ ತೊಂದರೆಯಾಗುತ್ತಿದೆ.
ರಾತ್ರಿವೇಳೆ ಸರಿಯಾಗಿ ರಸ್ತೆಯಲ್ಲಿರುವ ಗುಂಡಿಗಳು ಗೋಚರಿಸದೇ ಅನೇಕ ಅನಾಹುತುಗಳು ಸಂಬವಿಸಿವೇ ಇದು ಅಲ್ಲದೆ ಬಾರಿ ಗಾತ್ರದ ವಾಹನಗಳು ಎದುರು ಬದರು ಬಂದಾಗ ಮತ್ತಷ್ಟು ಅನಾಹುತಗಳು ಸಂಭವಿಸುವ ಸಾಧ್ಯತೆಗಳು ಇವೆ ಎಂದು ಗ್ರಾಮಸ್ಥರಿಂದ ಮಾತುಗಳು ಕೇಳಿ ಬರುತ್ತಿವೆ. ಕಳೆದ ಮಳೆಗಾಲದಲ್ಲಿ ಹಾಳಾದ ರಸ್ತೆ ಮತ್ತೆ ಮಳೆಗಾಲ ಪ್ರಾರಂಭವಾದರು ಕಾಮಗಾರಿ ದುರಸ್ತಿ ಆಗದೇ ಇರುವುದು ಈ ಭಾಗದ ಜನರ ದುರರಾದೃಷ್ಟವಾಗಿದೆ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಗಾಲಿ ಜನಪ್ರತಿನಿಧಿಗಳಾಗಲಿ ಎಚ್ಚತ್ತುಕೊಂಡು ಈ ರಸ್ತೆ ದುರಸ್ತಿ ಮಾಡುತ್ತಾರೆಯೇ ಎಂದು ಕಾಯ್ದು ನೋಡಬೇಕಾಗಿದೆ.