ಹುಬ್ಬಳ್ಳಿ: ಧಾರವಾಡದ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದ್ದ ನಕಲಿ ವಿದ್ಯಾರ್ಥಿ ಪರೀಕ್ಷೆ ಬರೆದ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜೂನ್ 2008ರಲ್ಲಿ ಅಸಲಿ ವಿದ್ಯಾರ್ಥಿ ಜಾಫರ್ ಖಾನ್ ತಡಕೋಡ ಬದಲು, ನಕಲಿ ವಿದ್ಯಾರ್ಥಿ ಪ್ರಶಾಂತ ಬಡಿಗೇರ ಪರೀಕ್ಷೆ ಬರೆಯಲು ಮುಂದಾಗಿದ್ದರು. ಪರೀಕ್ಷೆ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದು, ಪ್ರಾಂಶುಪಾಲರು ಈ ಅಕ್ರಮದ ಬಗ್ಗೆ ದೂರು ದಾಖಲಿಸಿದ್ದರು.
ದಾಖಲೆಗಳ ಪೋರ್ಜರಿ ಹಾಗೂ ನಕಲಿ ಸಹಿ ಮಾಡಿ ಪರೀಕ್ಷೆ ಬರೆದ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಧಾರವಾಡ ಮೂರನೇ ಜೆಎಂಎಫ್ಸಿ ಕೋರ್ಟ್ ಇಬ್ಬರು ಆರೋಪಿಗಳಿಗೆ ತಲಾ ಆರು ತಿಂಗಳು ಜೈಲು ಶಿಕ್ಷೆ ಹಾಗೂ 1,000 ರೂಪಾಯಿ ದಂಡ ವಿಧಿಸಿದೆ.
ಇನ್ನು ಅಸಲಿ ವಿದ್ಯಾರ್ಥಿ ಜಾಫರ್ ತಡಕೋಡ ನಿವೃತ್ತಿ ಪೊಲೀಸ್ ಅಧಿಕಾರಿಯ ಪುತ್ರ ಎನ್ನುವ ಮಾಹಿತಿ ಲಭ್ಯವಾಗಿದೆ.