ನಕಲಿ ವಿದ್ಯಾರ್ಥಿ ಪರೀಕ್ಷೆ ಬರೆದ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯ​ ಶಿಕ್ಷೆ

ಉಮೇಶ ಗೌರಿ (ಯರಡಾಲ)

ಹುಬ್ಬಳ್ಳಿ: ಧಾರವಾಡದ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದ್ದ ನಕಲಿ ವಿದ್ಯಾರ್ಥಿ ಪರೀಕ್ಷೆ ಬರೆದ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯ​ ಶಿಕ್ಷೆ ಪ್ರಕಟಿಸಿದೆ.

ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜೂನ್ 2008ರಲ್ಲಿ ಅಸಲಿ ವಿದ್ಯಾರ್ಥಿ ಜಾಫರ್ ಖಾನ್ ತಡಕೋಡ ಬದಲು, ನಕಲಿ ವಿದ್ಯಾರ್ಥಿ ಪ್ರಶಾಂತ ಬಡಿಗೇರ ಪರೀಕ್ಷೆ ಬರೆಯಲು ಮುಂದಾಗಿದ್ದರು. ಪರೀಕ್ಷೆ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದು, ಪ್ರಾಂಶುಪಾಲರು ಈ ಅಕ್ರಮದ ಬಗ್ಗೆ ದೂರು ದಾಖಲಿಸಿದ್ದರು.

ದಾಖಲೆಗಳ ಪೋರ್ಜರಿ ಹಾಗೂ ನಕಲಿ ಸಹಿ ಮಾಡಿ ಪರೀಕ್ಷೆ ಬರೆದ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಧಾರವಾಡ ಮೂರನೇ ಜೆಎಂಎಫ್​ಸಿ ಕೋರ್ಟ್ ಇಬ್ಬರು ಆರೋಪಿಗಳಿಗೆ ತಲಾ ಆರು ತಿಂಗಳು ಜೈಲು ಶಿಕ್ಷೆ ಹಾಗೂ 1,000 ರೂಪಾಯಿ ದಂಡ ವಿಧಿಸಿದೆ.

ಇನ್ನು ಅಸಲಿ ವಿದ್ಯಾರ್ಥಿ ಜಾಫರ್ ತಡಕೋಡ ನಿವೃತ್ತಿ ಪೊಲೀಸ್ ಅಧಿಕಾರಿಯ ಪುತ್ರ ಎನ್ನುವ ಮಾಹಿತಿ ಲಭ್ಯವಾಗಿದೆ.

 

Share This Article
";