“ದೇಶದ ಮೊದಲ ಹುತಾತ್ಮ ಸೇನಾನಿ ” ಕಿತ್ತೂರು ವಿಜಯೋತ್ಸವದ ರೂವಾರಿ: ಸರದಾರ ಗುರುಸಿದ್ದಪ್ಪನವರು

ಉಮೇಶ ಗೌರಿ (ಯರಡಾಲ)

ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಇಲ್ಲಿಯವರೆಗೆ ನಾವು ತಿಳಿದಿದ್ದು ಮಂಗಲ್ ಪಾಂಡೆ ಎಂದು.ಆದರೆ ಕಿತ್ತೂರು ಸಂಸ್ಥಾನದ ಇತಿಹಾಸ ಓದುತ್ತಾ ಸಾಗಿದಹಾಗೆ ತಿಳಿಯುವುದು ಮೊದಲ ಹುತಾತ್ಮ ಸರದಾರ ಗುರುಸಿದ್ದಪ್ಪನವರು ಎಂದು.

1857 ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಂದಿ ಮತ್ತು ಹಸುವಿನ ಕೊಬ್ಬು ಸವರಿದ ಮದ್ದುಗುಂಡು ಬಳಕೆಗೆ ಮಾಡಲು ನಿರಾಕರಿಸಿದ ಮಂಗಲ್ ಪಾಂಡೆಗೆ ಬ್ರಿಟಿಷರು ಗಲ್ಲು ಶಿಕ್ಷೆ ವಿಧಿಸಿದ್ದನ್ನು ನಾವೆಲ್ಲರೂ ಅರಿತಿದ್ದೆವೆ..

ಮಂಗಲ್ ಪಾಂಡೆಗೆ ಮುಂಚೆ ಮೂವತ್ತು ವರ್ಷ ಮೊದಲ ಬ್ರಿಟಿಷ್ ವಿರುದ್ದ ಹೋರಾಡಿದ ಕಾರಣಕ್ಕೆ ಸರದಾರ ಗುರುಸಿದ್ದಪ್ಪನವರಿಗೆ ಬೆಳಗಾವಿಯಲ್ಲಿ ಗಲ್ಲು ಹಾಕಿರುವ ಸಂಗತಿ ನಾಡಿನ ಮಹಾಜನತೆಗೆ ಗೂತ್ತಿಲ್ಲದೇ ಇರುವುದು ಖೇದದ ವಿಷಯ.

ಸರದಾರ ಗುರುಸಿದ್ದಪ್ಪನವರು ಎಂದರೆ ಯಾರು?: ಕಿತ್ತೂರು ಸಂಸ್ಥಾನದ ಸೇನಾದಂಡ ನಾಯಕ ಮಲ್ಲಸರ್ಜ ಮತ್ತು ಶಿವಲಿಂಗ ರುದ್ರಸರ್ಜನ ಆಳ್ವಿಕೆಯಲ್ಲಿ ಸೇನಾ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸಿದ ಇವತ್ತಿನ ಕಿತ್ತೂರು ತಾಲೂಕಿನ ನಿಚ್ಚಣಕಿ ಗ್ರಾಮದವರು ಸರದಾರ ಗುರುಸಿದ್ದಪ್ಪನವರು.

“ಕಿತ್ತೂರಿನ ಮೊದಲ ಯುದ್ದದಲ್ಲಿ ವಿಜಯದಲ್ಲಿ ಇವರ ಪಾತ್ರ ಏನು”? :ಚನ್ನಮ್ಮಾಜೀ 1824 ಅಕ್ಟೋಬರ್ 23ರ ಯುದ್ದ ಮಾಡುವ ಮುಂಚೆ ಅಂತಿಮವಾಗಿ ಸಲಹೆ ಕೇಳಿರುವುದು ಸರದಾರ ಗುರುಸಿದ್ದಪ್ಪನವರದ್ದು.1824 ಅಕ್ಟೂಬರ ತಿಂಗಳ ಯುದ್ಧದ ಸಮಯದಲ್ಲಿ ಕಿತ್ತೂರು ಸಂಸ್ಥಾನದ ಸೈನ ಮುನ್ನಡೆಸಿದ ವ್ಯಕ್ತಿ ಸರದಾರ ಗುರುಸಿದ್ದಪ್ಪನವರು.ಯುದ್ಧದ ರಣತಂತ್ರ ರೂಪಿಸಿದ್ದು ಮತ್ತು ಬ್ರಿಟಿಷರ ಸಹನೆ ಕೆಣಕುವಂತೆ ಮಾಡಿ ಅವರನ್ನು ರೊಚ್ಚಿಗೆಬ್ಬಿಸಿದ್ದು ಸರದಾರ ಗುರುಸಿದ್ದಪ್ಪನವರು.

ಅಕ್ಟೋಬರ್ 21ರಂದು ಬ್ರಿಟಿಷ್ ಕಿತ್ತೂರು ಖಜಾನೆ ಒಪ್ಪಂದಕ್ಕೆ ಸಹಿ ಹಾಕಲು ಮತ್ತು ಕಿತ್ತೂರು ಕೋಟೆಯ ದ್ವಾರದ ಸೈನಿಕರ ಬದಲಾವಣೆಗೆ ಬ್ರಿಟಿಷ್ ಅದಿಕಾರಗಳಾದ ಸ್ಟೀವನ್‌ಸನ್ ಮತ್ತು ಇಲಿಯಟ್ ಗೆ ಸ್ಪಷ್ಟವಾಗಿ ನಿರಾಕರಿಸಿ ಥ್ಯಾಕರೆಯ ದಬ್ಬಾಳಿಕೆಯನ್ನು ಪ್ರಶ್ನಿಸಿದವರು ಸರದಾರ ಗುರುಸಿದ್ದಪ್ಪನವರು.

1824 ಅಕ್ಟೋಬರ್ 23 ಜರುಗಿದ ಯುದ್ದದಲ್ಲಿ ಇವರದ್ದು ನಿರ್ಣಾಯಕ ಪಾತ್ರ..ಇದರ ಸಿಟ್ಟನ್ನು ಮನಸಿನಲ್ಲಿ ಇಟ್ಟುಕೊಂಡು ದಗದಗಿಸುತ್ತಿದ್ದ ಬ್ರಿಟಿಷರು 1824 ಡಿಸೆಂಬರ 3 ರಿಂದ 5 ನೇ ತಾರೀಖಿನ ವರೆಗೆ ಕಿತ್ತೂರಿನಲ್ಲಿ ನಡೆದ ಎರಡನೇಯ ಯುದ್ದದಲ್ಲಿ 25 ಸಾವಿರ ಸೈನಿಕರನ್ನು ಕೂಡಿಸಿ ಕಿತ್ತೂರು ಮೇಲೆ ಯುದ್ದ ಮಾಡಿದರು. ಡಿಸೆಂಬರ 4 ಮತ್ತು 5ನೇಯ ತಾರಿಖಿನಂದು ಗಡಾದ ಮರಡಿ ವಶಪಡಿಕೂಳ್ಳುವಾಗ ಗುರುಸಿದ್ದಪ್ಪನವರ, ಅಮಟೂರ ಬಾಳಪ್ಪ, ಮತ್ತು ಸಂಗೂಳ್ಳಿ ರಾಯಣ್ಣ ಮತ್ತಿತರರನ್ನು ಸೆರೆ ಹಿಡಿದರು.

ನಂತರ ಇವರನ್ನು ಬಂದಿಸಿ ಬೆಳಗಾವಿಯಲ್ಲಿ ಇಟ್ಟರು.1826 ರಲ್ಲಿ ಸರದಾರ ಗುರುಸಿದ್ದಪ್ಪನನ್ನು ಹೊರತುಪಡಿಸಿ ಉಳಿದವರಿಗೆಲ್ಲ ಬ್ರಿಟಿಷ್ ಸರಕಾರ ಜಾಮೀನು ನೀಡಿತು. ಅಷ್ಟೇ ಅಲ್ಲದೆ ಸರದಾರ ಗುರುಸಿದ್ದಪ್ಪನನ್ನು ಬಿಡುಗಡೆ ಮಾಡಿದರೆ ಬ್ರಿಟಿಷ ಸರಕಾರಕ್ಕೆ ಆತಂಕ ಇದೆ ಎಂದು ಬ್ರಿಟಿಷ್ ಅಧಿಕಾರಿಗಳು ಪತ್ರ ವಿನಿಮಯ ಮಾಡಿಕೂಂಡಿದ್ದರು. (ದಾಖಲೆಗಳು ಈಗಲೂ ಲಬ್ಯವಿದೆ) ಎಂದರೆ ಸರದಾರ ಗುರುಸಿದ್ದಪ್ಪನವರ ಕುರಿತು ಬ್ರಿಟಿಷ ಸಾಮ್ರಾಜ್ಯಷಾಹಿಗೆ ಇರುವ ಆತಂಕ ಅರಿವಾಗುವುದು..

ನಂತರ ಸರದಾರ ಗುರುಸಿದ್ದಪ್ಪನವರಿಗೆ ಬೆಳಗಾವಿಯಲ್ಲಿ ಗಲ್ಲು ಹಾಕಿ ಅವರ ಶವವನ್ನು ಹುಕ್ಕೇರಿ ತಾಲೂಕಿನ ಹಂದಿಗೂಡ ಗ್ರಾಮದ ಚರಂಡಿಯಲ್ಲಿ ತುಂಡು ತುಂಡಾಗಿ ಕತ್ತರಿಸಿ ಚಲ್ಲಿದ್ದರು.ಇದರ ಆದರದ ಮೇಲೆ ಬ್ರಿಟಿಷ್ ಸರ್ಕಾರಕ್ಕೆ ಸರದಾರ ಗುರುಸಿದ್ದಪ್ಪನವರ ಮೇಲೆ ಎಷ್ಟೂಂದು ಸಿಟ್ಟು ಇತ್ತು ಎಂಬುವುದು ಅರಿವಾಗುತ್ತದೆ.

ಸರದಾರ ಗುರುಸಿದ್ದಪ್ಪನವರಿಗೆ ಗಲ್ಲು ಹಾಕಿದ ನಂತರ ಅವರ ಪಾತ್ರವನ್ನು ಕಿತ್ತೂರು ಸಂಸ್ಥಾನದಲ್ಲಿ ಸಂಗೂಳ್ಳಿ ರಾಯಣ್ಣ ನೀರ್ವಹಿಸಿರುವುದು ಗಮನಾರ್ಹ.

ಬ್ರಿಟಿಷ್ ಅಧಿಕಾರಿಗಳ ಕಾಗದ ಪತ್ರ ತಿಳಿದುಕೊಂಡರೆ ಮಾತ್ರ ಸರದಾರ ಗುರುಸಿದ್ದಪ್ಪನವರ ಭವ್ಯ ವ್ಯಕಿತ್ವ ಮಾತ್ರ ಅರಿವಾಗವುದು.ಗುರುಸಿದ್ದಪ್ಪನವರ ಕುರಿತು ಇರುವ ಭಯ ಆತಂಕಗಳನ್ನು ಬ್ರಿಟಿಷ್‌ ಅಧಿಕಾರಿಗಳು ತಮ್ಮ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ.

ಹಾಗಾಗಿ ಇವತ್ತು ಕಿತ್ತೂರು ವಿಜಯೋತ್ಸವದ
ಆಚರಿಸುತ್ತಿದ್ದೆವೆ ಎಂದರೆ ಅದರಲ್ಲಿ ರಾಣಿ ಚನ್ನಮ್ಮಾಜೀ ಜೋತೆಗೆ ಸರದಾರ ಗುರುಸಿದ್ದಪ್ಪನವರ ಪಾತ್ರ ಬಹಳ ಇದೆ.

ದೇಶದ ಮೊದಲ ಹುತಾತ್ಮ ಎಂದರೆ ಸರದಾರ ಗುರುಸಿದ್ದಪ್ಪನವರು.ಆದರೆ ದುರಂತವೆಂದರೆ ಸ್ವಾತಂತ್ರ್ಯ ನಂತರ ರಾಷ್ಟ್ರ ರಾಜಧಾನಿಯಲ್ಲಿ ಕುಳಿತು ಉತ್ತರಭಾರತದ ಹೋರಾಟಗಾರರಿಗೆ ಮಾತ್ರ ಮಣೆ ಹಾಕಿರುವುದು ಇತಿಹಾಸಕಾರರ ಸಮಗ್ರ ದೃಷ್ಟಿಕೋನದ ಕೊರತೆಯನ್ನು ಎತ್ತಿ ತೋರುವುದು.

ದುರಂತವೆಂದರೆ ಬಹಳಷ್ಟು ಇತಿಹಾಸಕಾರರಿಗೆ ಕಿತ್ತೂರ ಸಂಸ್ಥಾನ ನಿರ್ವಹಣೆಯಲ್ಲಿ ಸರದಾರ ಗುರುಸಿದ್ದಪ್ಪನವರ ಪಾತ್ರ ತಿಳಿಯದೇ ಇರುವುದು ಖೇದಕರ.

ಇನ್ನೂ ತಪ್ಪಾಗಿ ನಮೂದಾಗಿರುವ ಅಂಕಿ ಅಂಶಗಳ ಹಾಗೂ ಇತಿಹಾಸದ ತಿದ್ದುಪಡಿ ಕಾರ್ಯಕ್ಕೆ ಸರಕಾರ ಮನಸ್ಸು ಮಾಡಬೇಕು

ಲೇಖಕರು:ಮಹೇಶ.ನೀಲಕಂಠ.ಚನ್ನಂಗಿ
ಮುಖ್ಯ ಶಿಕ್ಷಕರು.
ಚನ್ನಮ್ಮನ ಕಿತ್ತೂರು.
M-9740313820

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";