ಚಿಕ್ಕ ಕೊಡಗಲಿ ತಾಂಡಾ ಜನರಿಂದ ಪಿ.ಡಿ.ಓ ವಿರುದ್ಧ ತಾಲ್ಲೂಕು ಪಂಚಾಯತ್ ಕಾರ್ಯಾಲಯಕ್ಕೆ ಮುತ್ತಿಗೆ.

ಉಮೇಶ ಗೌರಿ (ಯರಡಾಲ)

ಇಳಕಲ್: ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ನೀಡುವಂತೆ ಇಳಕಲ್ ತಾಲ್ಲೂಕು ಪಂಚಾಯತ ಮುಂದುಗಡೆ ಚಿಕ್ಕ ಕೊಡಗಲಿ ತಾಂಡಾದ ಜನರು ಗ್ರಾಮಪಂಚಾಯತ ವ್ಯಾಪ್ತಿಯ ಸುಮಾರು-90 ಜನ ಕೂಲಿ ಕಾರ್ಮಿಕರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕೆಲಸ ನೀಡುವಂತೆ ಮತ್ತು ಸರಿಯಾಗಿ ಗ್ರಾಮಪಂಚಾಯತಿಗೆ ಆಗಮಿಸಿದ ಪಿಡಿಓ ಗೋಪಾಲ್ ನಾಯಕ ಅವರನ್ನು ವರ್ಗಾವಣೆ ಮಾಡುವಂತೆ ಹಾಗೂ ಅಮಾನತು ಮಾಡುವಂತೆ ಪ್ರತಿಭಟನೆ ಮಾಡಿದರು.

ಪಿ.ಡಿ.ಓ ನನ್ನು ಅಮಾನತು ಮಾಡುವವರೆಗೂ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಮಾದ್ಯಮದ ಮುಂದೆ ಹೇಳಿಕೆ ನೀಡಿದರು. ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸುತ್ತೇವೆ  ಎಂದು ತಾ.ಪಂ ಅಧಿಕಾರಿಗಳು ಹೇಳಿದ ನಂತರ  ಪ್ರತಿಭಟನೆ ಹಿಂಪಡೆದರು.

ವರದಿ.. ದಾವಲ್.ಶೇಡಂ

Share This Article
";