ಬೀದರ್: ಜಿಲ್ಲೆಯ ಹುಮನಾಬಾದ್ ಪಟ್ಟಣದ ಸಮಾಜ ಕಲ್ಯಾಣ ಕಚೇರಿಗೆ ಕೋಣೆಯೊಂದಕ್ಕೆ ಬೆಂಕಿ ತಗುಲಿ ಮಹತ್ವದ ದಾಖಲೆ ಭಸ್ಮಗೊಂಡ ಘಟನೆ ನಿನ್ನೆ ಸಂಭವಿಸಿದ್ದು, ಇಂದು ಬೆಳಕಿಗೆ ಬಂದಿದೆ.
ವಿದ್ಯಾರ್ಥಿಗಳ ಸ್ಕಾಲರಷಿಪ್ ಸೇರಿದಂತೆ ಇತರೆ ಮಹತ್ವದ ದಾಖಲೆಗಳಿಗೆ ಬೆಂಕಿ ತಗುಲಿದ ವಿಷಯ ತಿಳಿದ ಅಗ್ನಿ ಶಾಮಕ ತಂಡ ಸ್ಥಳಕ್ಕೆ ಧಾವಿಸಿ, ಅಗ್ನಿನಂದಿಸುವ ಮೂಲಕ ಆಗಬಹುದಾದ ಹೆಚ್ಚಿನ ಹಾನಿ ತಪ್ಪಿಸಿವೆ.
ತಾಲ್ಲೂಕು ಅಧಿಕಾರಿ ಗಿರೀಶ ರಂಜೇರಿ ಅವರು ರಜೆ ಮೇಲೆ ಇದ್ದರು. ಕಚೇರಿ ವ್ಯವಸ್ಥಾಪಕರಿಗೆ ವಿಚಾರಿಸಿದಾಗ ನಿನ್ನೆ ಸುಟ್ಟು ದಾಖಲೆ ಹಳೆಯವಾಗಿವೆ ಆದರೂ ಕೆಲವು ಮಹತ್ವದ ದಾಖಲೆಗಳಿರುವ ಸಾಧ್ಯತೆಗಳಿವೆ ಎಂದು ತಿಳಿಸಿದರು.
ಈ ಕುರಿತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಮುರಗೇಂದ್ರಪ್ಪ ಅವರನ್ನು ವಿಚಾರಿದಿದಾಗ ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆಭೇಟಿ ನೀಡಿ ಪರಿಶೀಲನೆ ನಡೆಸುವೆ. ತನಿಖೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.