ಬೀದರ್: ತೆಲಂಗಾಣದ ಜಹೀರಾಬಾದ ತಾಲೂಕಿನ ಸುಕ್ಷೇತ್ರ ಝರಾಸಂಗಮ್‌ದ ಶ್ರೀ ಕೇತಕಿ ಸಂಗಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಶನಿವಾರ ದಿಂದ ವಿಶೇಷ ಪೂಜೆಯೊಂದಿಗೆ ಆರಂಭಗೊಂಡಿದ್ದು, ದಿ.06ರ ವರೆಗೆ ವೈಭವದಿಂದ ಜರುಗಲಿದೆ.
ದಿ. 26 ರಿಂದ 06ರ ವರೆಗೆ ದಿನನಿತ್ಯ ರುದ್ರಾಭಿಷೇಕ, ಕುಂಕುಮ ಅರ್ಚನ, ಪಲ್ಲಕಿ ಸೇವೆ, ರಾತ್ರಿ ಭಜನೆ, ದಿ. 01 ರಂದು ಮಹಾಶಿವರಾತ್ರಿಯ ವಿಶೇಷ ಮಹೋತ್ಸವ ರುದ್ರಾಭಿಷೇಕ, ಕುಂಕುಮ ಅರ್ಚನ, ವಿಘ್ನೇಶ್ವರ ಪೂಜೆ, ಕೀರ್ತನೆ, ದಿ. 02 ರಂದು ರುದ್ರಾಭಿಷೇಕ, ನಂದಿ ವಾಹನ ಸೇವೆ, ಪಲ್ಲಕಿ ಸೇವೆ, ರಾತ್ರಿ ಹರಿ ಕಥೆ, ದಿ.03 ರಂದು ಮಧ್ಯಾಹ್ನ 4.30ಕ್ಕೆ ಶ್ರೀ ಸಂಗಮೇಶ್ವರ ದೇವರ ಕಲ್ಯಾಣೋತ್ಸವ ಮತ್ತು ರಾತ್ರಿ 10ಕ್ಕೆ ರಥೋತ್ಸವ, ಪಲ್ಲಕಿ ಸೇವೆ. ದಿ.4 ಮತ್ತು 5 ರಂದು ರುದ್ರಾಭಿಷೇಕ, ಕುಂಕುಮ ಅರ್ಚನ ಪೂರ್ಣಾಮತಿ, ದಿ. 6 ರಂದು ರುದ್ರಾಭಿಷೇಕ, ಕುಂಕುಮ ಅರ್ಚನ, ಪಲ್ಲಕಿ ಸೇವೆ, ರಾತ್ರಿ ಭಜನೆ ಸೇರಿದಂತೆ ಮತ್ತಿತರರ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು.
ಆದ್ದರಿಂದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದುಕೊಳ್ಳುವಂತೆ ದೇವಸ್ಥಾನ ಸಮಿತಿ ಕಾರ್ಯನಿರ್ವಾಹಣ ಅಧಿಕಾರಿ ಎಂ. ಶ್ರೀನಿವಾಸ ಮೂರ್ತಿ ಹಾಗೂ ದೇವಸ್ಥಾನ ಸಧ್ಭಕ್ತ ಸೇವಾ ಪ್ರಮುಖ ಹುಮನಾಬಾದನ ದತ್ತಕುಮಾರ ಚಿದ್ರಿ ಕೋರಿದ್ದಾರೆ.