ವಿಶ್ವ ಇಎಸ್‌ಡಬ್ಲೂಎಲ್‌ ದಿನಾಚರಣೆ ಪ್ರಯುಕ್ತ ಯುನೈಟೆಡ್‌ ಆಸ್ಪತ್ರೆಯಲ್ಲಿ ವಿಶೇಷ ರಿಯಾಯಿತಿ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಬೆಂಗಳೂರು: ವಿಶ್ವ ಇಎಸ್‌ಡಬ್ಯೂಎಲ್‌ ದಿನಾಚರಣೆಯ ಅಂಗವಾಗಿ ಜಯನಗರದ ಯುನೈಟೆಡ್‌ ಆಸ್ಪತ್ರೆಯಲ್ಲಿ ಕಿಡ್ನಿ ಸ್ಟೋನ್‌ಗಳ ಚಿಕಿತ್ಸೆಗಾಗಿ ಶಸ್ತ್ರಚಿಕಿತ್ಸೆ ಇಲ್ಲದ ಏಕೈಕ ಚಿಕಿತ್ಸಾ ವಿಧಾನ ಎಕ್ಟ್ರಾಕಾರ್ಪೋರೀಯಲ್‌ ಶಾಕ್‌ ವೇವ್‌ ಲಿಥೋರ್ಟಿಪ್ಸಿ  ವಿಶೇಷ ರಿಯಾಯಿತಿಯನ್ನು ಘೋಷಿಸಲಾಗಿದೆ.

1980, ಫೆಬ್ರವರಿ 7 ರಂದು ಮೊದಲ ಬಾರಿಗೆ ಈ ಚಿಕಿತ್ಸೆಯನ್ನು ನೀಡುವ ಮೂಲಕ ಕಿಡ್ನಿ ಸ್ಟೋನ್‌ಗೆ ಚಿಕಿತ್ಸೆಯನ್ನು ನೀಡಲಾಯಿತು. ಈ ಹಿನ್ನಲೆಯಲ್ಲಿ ಫೆಬ್ರವರಿ 7 ನ್ನು ವಿಶ್ವ ಇಎಸ್‌ಡಬ್ಯೂಎಲ್‌ ದಿನಾಚರಣೆಯನ್ನಾಗಿ ಆಚರಿಸುತ್ತಾ ಬರಲಾಗಿದೆ.

ಯುನೈಟೆಡ್‌ ಆಸ್ಪತ್ರೆಯ ಮುಖ್ಯ ಯುರಾಲಜಿ ತಜ್ಞರಾದ ಡಾ ರಾಜೀವ್‌ ಬಾಶೆಟ್ಟಿ ಮಾತನಾಡಿ, ಬಹಳಷ್ಟು ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಇಲ್ಲದೆ ಕಿಡ್ನಿ ಸ್ಟೋನ್‌ಗಳನ್ನು ನಿವಾರಿಸಬಹುದಾಗಿದೆ. ಇದಕ್ಕಾಗಿ ಹೈ ಪ್ರೀಕ್ವೆನ್ಸಿಯ ಶಾಕ್‌ ವೇವ್‌ಗಳನ್ನು ಬಳಸಲಾಗುತ್ತದೆ. ಹಾಗೂ ಚುರಾದ ಕಿಡ್ನಿ ಸ್ಟೋನ್‌ಗಳು ನೈಸರ್ಗಿಕವಾಗಿ ಮೂತ್ರದಲ್ಲಿ ಹೊರಬರುತ್ತವೆ. ಈ ಚಿಕಿತ್ಸಾ ವಿಧಾನ ಬಹಳ ಪರಿಣಾಮಕಾರಿಯಾಗಿದೆ ಎಂದು ಹೇಳಿದರು.

ಯುನೈಟೆಡ್‌ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ ಶಾಂತಕುಮಾರ್‌ ಮುರಡಾ ಮಾತನಾಡಿ,* ಬದಲಾದ ಜೀವನಶೈಲಿ ಯಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಹೆಚ್ಚಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಶಸ್ತ್ರಚಿಕಿತ್ಸೆ ಇಲ್ಲದೆ ಸುಲಭವಾಗಿ ಇದನ್ನು ನಿವಾರಿಸಿಕೊಳ್ಳಬಹುದಾಗಿದೆ. ಈ ಚಿಕಿತ್ಸಾ ಪದ್ದತಿಯನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ನಾವು ವಿಶೇಷ ಪ್ಯಾಕೇಜ್‌ ನ್ನು ರೂಪಿಸಿದ್ದೇವೆ. ಈ ಪ್ಯಾಕೇಜ್‌ ನ ಮೂಲಕ ಸಮಸ್ಯೆ ನಿವಾರಣೆಯಾಗದೇ ಇದ್ದ ಪಕ್ಷದಲ್ಲಿ ಹೆಚ್ಚಿನ ಚಿಕಿತ್ಸೆಗೂ ರಿಯಾಯಿತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಸಂಸ್ಥಾಪಕ ಅಧ್ಯಕ್ಷ ಡಾ. ವಿಕ್ರಮ್ ಸಿದ್ದಾರೆಡ್ಡಿ, ಇಡೀ ತಂಡವನ್ನು ಅಭಿನಂದಿಸಿದರು. ಅತ್ಯುತ್ತಮ ಮೂತ್ರಶಾಸ್ತ್ರಜ್ಞರಾದ ಡಾ. ರಾಜೀವ್ ಬಾಶೆಟ್ಟಿ ಅತ್ಯಂತ ಪರಿಣಿತ ವೈದ್ಯರಾಗಿದ್ದು ಯುನೈಟೆಡ್ ಆಸ್ಪತ್ರೆಯ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು, ರಾಜೀವ್ ಅವರು ಯಾವಾಗಲೂ ಅತ್ಯುತ್ತಮ ಕ್ಲಿನಿಕಲ್ ಅಭ್ಯಾಸಗಳ ಮೂಲಕ ಯುನೈಟೆಡ್ ಆಸ್ಪತ್ರೆಯು ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡಲು ಸಹಕಾರಿಯಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಮಾಹಿತಿಗಾಗಿ ವಾಟ್ಸಾಪ್‌ ನಂ: 99169 77777 ಅಥವಾ ಯುನೈಟೆಡ್ ಆಸ್ಪತ್ರೆಯ ದೂರವಾಣಿ ಸಂಖ್ಯೆ: 080 4566 6666 / 080 6933 3333/ ಟೋಲ್ ಪ್ರೀ ನಂಬರ್ 1860 419 4444, ಇಮೇಲ್ : [email protected] ಅನ್ನು ಸಂಪರ್ಕಿಸುವಂತೆ ತಿಳಿಸಿದೆ.*

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";