ಸುದ್ದಿ ಸದ್ದು ನ್ಯೂಸ್
ಗೋಕಾಕ: ಜನ್ಮ ಭೂಮಿಗಾಗಿ ತ್ಯಾಗ, ಬಲಿದಾನಗೈಯುವವನೇ ದೇಶಭಕ್ತನಾದ ಸೈನಿಕನೆಂದು ಜಾನಪದ ತಜ್ಞ-ಸಂಸ್ಕೃತಿ ಚಿಂತಕ ಡಾ.ಸಿ.ಕೆ.ನಾವಲಗಿ ಅಭಿಪ್ರಾಯಪಟ್ಟರು.
ಅವರು ಸುಬೇದಾರ ಶ್ರೀ ಪ್ರಕಾಶ ತಿಪ್ಪಣ್ಣಾ ಕರೆಪ್ಪಗೋಳ ಅವರು ಸೇನಾ ನಿವೃತ್ತರಾಗಿ ಸ್ವಗ್ರಾಮಕ್ಕೆ ಆಗಮಿಸುವ ಸಂದರ್ಭದಲ್ಲಿ ತಾಲ್ಲೂಕಿನ ಬೀರನಗಡ್ಡಿ ಸಮಸ್ತ ಗ್ರಾಮಸ್ಥರು ಗ್ರಾಮದ ಬಸವೇಶ್ವರ ಸಮುದಾಯ ಭವನದಲ್ಲಿ ಅವರಿಗೆ ಹಮ್ಮಿಕೊಂಡ ಅಭಿನಂದನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಸೈನ್ಯವೇ ದೇಶದ ಬೆನ್ನೆಲುಬು. ರಾಷ್ಟç ತಲೆ ಎತ್ತಿ ನಿಲ್ಲಲು ಈ ಬೆನ್ನೆಲುಬು ಗಟ್ಟಿಯಾಗಿರಬೇಕು. ಯಾವಾಗಲೂ ಭಾರತ ವೈರಿಗಳ ಛಾಯೆಯಲ್ಲಿಯೇ ಜೀವಿಸುತ್ತ ಬಂದಿದೆ. ಅದಕ್ಕಾಗಿ ಭಾರತದ ಸೈನ್ಯ ಬಲಾಢ್ಯವಾಗಿದೆ. ಒಳ್ಳೆಯ ಸೈನಿಕ ಒಳ್ಳೆಯ ನಾಗರಿಕನಾಗಿರುತ್ತಾನೆ. ಆದ್ದರಿಂದ ಕಡ್ಡಾಯದ ಸೈನಿಕ ಶಿಕ್ಷಣ ಒಳ್ಳೆಯ ನಾಗರಿಕ ಜನಾಂಗವನ್ನು ನಿರ್ಮಿಸುವಲ್ಲಿ, ಉತ್ತಮ ದೇಶ ಕಟ್ಟುವಲ್ಲಿ ಅವಶ್ಯಕವೆಂದು ತಿಳಿಸಿದರು.
ಸೈನಿಕ ಕರ್ತವ್ಯದಲ್ಲಿ ಆತ್ಮಾರ್ಪನೆಯಾದರೆ ‘ವೀರಸ್ವರ್ಗ’ ದೊರೆಯುವುದೆಂದು ಸರಕಾರಿ ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡುತ್ತೇವೆ. ಆದರೆ ಪ್ರಕಾಶ ಕರೆಪ್ಪಗೋಳ ಭಾರತೀಯ ಸೇನೆಯಲ್ಲಿ ೨೮ ವರುಷಗಳ ಸೇವೆ ಸಲ್ಲಿಸಿ, ಹುಟ್ಟಿದೂರಿಗೆ ಮರಳಿದ ಸಂದರ್ಭದಲ್ಲಿ ಊರಿಗೆ ಊರೇ ಸೇರಿ ಅಭೂತ ಪೂರ್ವಕವಾಗಿ ಸ್ವಾಗತಿಸಿ, ಗೌರವಿಸಿ ಅಭಿನಂದಿಸಿದ್ದು, ಗ್ರಾಮೀಣರ ಹೆಮ್ಮೆ-ಪ್ರೀತಿ ಅಭಿಮಾನದ ಸಂಕೇತವೆAದು ಕೊಂಡಾಡಿದರು. ನಾವಲಗಿ, ಬೀರನಗಡ್ಡಿ ಗ್ರಾಮಸ್ಥರು ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದೀರೆಂದು ಮನದುಂಬಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಬಿ. ಬಳಗಾರ, ಅಜಿತ ಮನ್ನಿಕೇರಿ, ಕುದರಿ, ಪಾಗಾದ, ಕಳಸನ್ನವರ, ಪಂಚಗಾವಿ ಮತ್ತು ಹಲವಾರು ಕನ್ನಡಪರ ಸಂಘಟನೆಗಳು, ಸೈನಿಕ ಮಿತ್ರರು ಕರೆಪ್ಪಗೋಳ ಅವರಿಗೆ ಹೂಹಾರದ-ಪ್ರೀತಿಯ ಮಳೆಗರೆದರು. ಈ ಅದ್ದೂರಿ ಸಮಾರಂಭವನ್ನು ರಮೇಶ ಸತ್ತಿಗೇರಿ ಸಂಘಟಿಸಿ ಕಾರ್ಯಕ್ರಮ ನಿರೂಪಿಸಿದವರು