ಲಿಂಗಸೂರು: ತಾಲ್ಲೂಕಿನ ಅಡವಿಭಾವಿ ಗ್ರಾಮದ ನಾಗರಹಾಳ್ ದೊಡ್ಡಿಯಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ ಪರದಾಡುತ್ತಿರುವ ಸಾರ್ವಜನಿಕರು ವಿಜಯಸೇನೆ ಸಂಘಟನೆಯ ಮುಖಂಡರಾದ ಶಿವಪುತ್ರ ಗಾಣಧಾಳ್ ಅವರ ನೇತೃತ್ವದಲ್ಲಿ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರುನಾಡ ವಿಜಯಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಕರ್ನಾಟಕ ಉಸ್ತುವಾರಿಗಳಾದ ಶಿವಪುತ್ರ ಗಾಣಧಾಳ್ ಅವರು ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಈ ನಾಗರಹಾಳದೊಡ್ಡಿಗೆ ವಿದ್ಯುತ್ ಸಂಪರ್ಕದ ಕೊರತೆಯಿದ್ದು,ಕೂಡಲೇ ವಿದ್ಯುತ್ ಸೌಲಭ್ಯ ಕಲ್ಪಿಸಿ ಗ್ರಾಮಸ್ತರಿಗೆ ಅನುಕೂಲ ಮಾಡಿಕೊಡಬೇಕೆಂದು ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕಾ ಉಪಾಧ್ಯಕ್ಷ ಸುರೇಶ ಮಡಿವಾಳ, ಮುಖಂಡರಾದ ಹನುಮಂತ ನೀರಲಕೇರಿ, ಚಂದ್ರು ಹಿರೇಮಠ್ ಮರಳಿ, ಮುದಗಲ್ ಹೋಬಳಿ ಘಟಕದ ಅಧ್ಯಕ್ಷರಾದ ಮೌನೇಶ ಚಲುವಾದಿ, ರಂಗಪ್ಪ, ಸುರೇಶ ಭೋವಿ, ಸಂಜು ಹುನಕುಂಟಿ, ಮಂಜುನಾಥ್ ಅಕ್ಕಿ, ರವಿ ನಾಯ್ಡು, ಶಿವು ಹಳೆಮನಿ, ರಾಮು ಹಿರೇಮಠ, ಪರಶುರಾಮ್ ಗೊರೆಬಾಳ, ಹನುಮಂತ ರಾಂಪುರ, ಗ್ರಾಮ ಘಟಕದ ಅಧ್ಯಕ್ಷರಾದ ಹನುಮಂತ ಅಡವಿಭಾವಿ, ಮುಂತಾದ ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕುಂಬಾರ