ಲೈಂಗಿಕ ಕಿರುಕುಳ: ಗುಜರಾತ್‌ ಜಿಲ್ಲಾಧಿಕಾರಿ ಪಟೇಲ್ ಅಮಾನತು

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಅಹಮದಾಬಾದ್:ಅಮಾಯಕ ಮಹಿಳೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪದ ಮೇಲೆ ಗುಜರಾತಿನ ಅರವಲ್ಲಿ ಜಿಲ್ಲೆಯ ಮೊಡಾಸಾದ ಜಿಲ್ಲಾಧಿಕಾರಿ ಮಯಾಂಕ್ ಪಟೇಲ್ ಎಂಬುವವರನ್ನು ಅಮಾನತು ಗೊಳಿಸಿ ಬಂಧಿಸಲಿಗಿದೆ.

ದೂರುದಾರ ಮಹಿಳೆ ಸೋಮವಾರ ಸಲ್ಲಿಸಿದ ದೂರಿನನ್ವಯ ಜಿಲ್ಲಾಧಿಕಾರಿ ಮಯಾಂಕ್ ಪಟೇಲ್ ಅವರು 2016ರಲ್ಲಿ ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ನನ್ನನ್ನು ಭೇಟಿಯಾಗಿದ್ದರು. ನಂತರ ಕೆಲಸದ ಉದ್ದೇಶದಿಂದಾಗಿ ನಾನು ಅವರನ್ನು ಆಗಾಗ್ಗೆ ಭೇಟಿಯಾಗಬೇಕಾಗಿತ್ತು. ಆ ವೇಳೆ ಅವರು ನನ್ನ ಮೊಬೈಲ್ ನಂಬರ್ ತೆಗೆದುಕೊಂಡರು. ಇಬ್ಬರ ನಡುವೆ ಉತ್ತಮ ಸ್ನೇಹ ಬೆಳೆದಿತ್ತು ಆದರೆ ದಿನಗಳು ಉರುಳಿದಂತೆ ಜಿಲ್ಲಾಧಿಕಾರಿ ಮಯಾಂಕ್ ಪಟೇಲ್ ಅವರು ಲೈಂಗಿಕವಾಗಿ ನನ್ನನ್ನು ಒತ್ತಾಯಿಸಲು ಪ್ರಾರಂಭಿಸಿದರು ನಂತರ ನಾನು ಜಿಲ್ಲಾಧಿಕಾರಿ ಮಯಾಂಕ್ ಪಟೇಲ್ ಅವರ ಜೊತೆ ಮಾತನಾಡುವುದನ್ನು ನಿಲ್ಲಿಸಿದೆನು ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.

ಒಂದು ಸರ್ಕಾರ ನಿಗದಿಪಡಿಸಿದ ಸಂಖ್ಯೆಯು ಸೇರಿದಂತೆ ಇನ್ನೂ ಎಂಟು ಸಿಮ್ಮುಗಳಿಂದ ನನಗೆ ಕಿರುಕುಳ ನೀಡುವುದು ಮಾತ್ರವಲ್ಲದೆ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿಯೂ ಚಿತ್ರಹಿಂಸೆ ನೀಡುತ್ತಿದ್ದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.

“ಆರೋಪಿಯು ಮಹಿಳೆಗೆ ವಾಟ್ಸಾಪ್‌ನಲ್ಲಿ ಕರೆ ಮತ್ತು ಸಂದೇಶವನ್ನು ಮಾಡುತ್ತಿದ್ದನು… ಆರೋಪಿಯು ಆಕೆಯ ಫೋನ್‌ನ ಲೋಕೇಷನ್‌ಅನ್ನು ಟ್ರ್ಯಾಕ್ ಮಾಡುತ್ತಿದ್ದನು ಮತ್ತು ಆಕೆಯನ್ನು ಹಿಂಬಾಲಿಸುತ್ತಿದ್ದನು, ಆಕೆ ಆತನ ಕರೆಗಳನ್ನು ನಿರಾಕರಿಸಿದರೆ ಆತ ಮಹಿಳೆಯ ಪತಿಗೆ ಕರೆ ಮಾಡಿ ನಿಂದಿಸುತ್ತಿದ್ದನು” ಎಂದು ಅಹಮದಾಬಾದ್ ಸೈಬರ್ ಕ್ರೈಮ್ ಉಪ ಪೊಲೀಸ್ ಆಯುಕ್ತ ಅಮಿತ್ ವಾಸವ ಹೇಳಿದ್ದಾರೆ.

ಅಷ್ಟೇ ಅಲ್ಲದೆ “ಆರೋಪಿಯು ಮಹಿಳೆಯ ಅಸಭ್ಯ ಚಿತ್ರಗಳನ್ನು ಆಕೆಯ ಮಗ ಮತ್ತು ಮಾವನಿಗೆ ಕಳಿಸುತ್ತಿದ್ದರು ಏನಾದರೂ ಮಾಡಿ ಈ ವಿಷಯವನ್ನು ಆರೋಪಿಯ ಪತ್ನಿ ಮತ್ತು ಮನೆಯವರಿಗೆ ದೂರುದಾರ ಮಹಿಳೆ ತಿಳಿಸಲು ಪ್ರಯತ್ನಿಸಿದಾಗ ಆತ ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಜಿಲ್ಲಾಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದೇವೆ” ಎಂದು ವಾಸವ್ ಅವರು ವಿವರಿಸಿದ್ದಾರೆ.

“ಆರೋಪಿಯ ಸೆಲ್ ಫೋನ್‌ನಿಂದ ದೋಷಾರೋಪಣೆಗೆ ಸಂಬಂಧಿಸಿದ ಸಾಕ್ಷ್ಯಚಿತ್ರಗಳನ್ನು ಪಡೆದುಕೊಳ್ಳಲಾಗಿದೆ. ಖಿನ್ನತೆಗೆ ಒಳಗಾದ ಮಹಿಳೆ ಆರೋಪಿಸಿದಂತೆ ಬೆದರಿಕೆ ಸಂದೇಶಗಳು, ಅಸಭ್ಯ ಚಿತ್ರಗಳು, ಪಠ್ಯ ಸಂದೇಶಗಳು, ಕಾಲ್‌ ಹಿಸ್ಟರಿ ಮತ್ತು ಚಾಟ್ ಹಿಸ್ಟರಿಗಳ ಜೊತೆಗೆ ತನ್ನ ಅಪ್ರಾಪ್ತ ಮಗನಿಗೆ ಕಳುಹಿಸಿದ ಅಸಭ್ಯ ಚಿತ್ರಗಳ ಪುರಾವೆಗಳು ದೊರೆತಿವೆ”    ಅಮಿತ್ ವಾಸವ, ಪೊಲೀಸ್ ಆಯುಕ್ತ ಅಹಮದಾಬಾದ್

 

 

 

Share This Article
";