ಲಿಂಗಸಗೂರು:ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಐತಿಹಾಸಿಕ ಮುದಗಲ್ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಂದುಗಡೆ ಅಂಡರ್ ಆರ್ಮ್ ಕ್ರಿಕೆಟ್ ಟೊರ್ನಾಮೆಂಟ ಆಶ್ರಯದಲ್ಲಿ ಬುದ್ಧ ಟ್ರೋಫಿ ಹಾಡ್೯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಯಿತು.
ಕ್ರಿಕೆಟ್ ಪಂದ್ಯಾವಳಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಎ. ನಯೀಮ್ ಉದ್ಘಾಟಿಸಿ ಮಾತನಾಡಿದ ಅವರು ಮುದಗಲ್ ಐತಿಹಾಸಿಕ ಪಟ್ಟಣದಲ್ಲಿ ಕ್ರೀಡೆಯ ಇತಿಹಾಸವೇ ಇದೆ. ಇಲ್ಲಿ ಜಿಲ್ಲಾ ಮಟ್ಟ, ರಾಜ್ಯಮಟ್ಟದಲ್ಲಿ ಭಾಗವಹಿಸಿದ ಅನೇಕ ಕ್ರೀಡಾ ಪ್ರತಿಭೆ ಗಳಿವೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ, ಹಾಗೂ ಮನಸ್ಸಿಗೆ ಉಲ್ಲಾಸ ಸಿಗುವುದಲ್ಲದೆ ದೇಹದ ಶಕ್ತಿ ವೃದ್ಧಿಯಾಗುತ್ತದೆ, ಈಗಿನ ಯುಗದ ಯುವಕರು ಹೆಚ್ಚಾಗಿ ಮೊಬೈಲ್ ಗಳನ್ನು ಬಳಸಿ ಕ್ರಿಕೆಟ್ ಆಡುವುದನ್ನು ಕಂಡಿದ್ದೇವೆ ಆದರೆ ಮೈದಾನದಲ್ಲಿ ಬೆವರು ಸುರಿಸಿ ಆಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಮತ್ತು ಇಂತಹ ಪಂದ್ಯಾವಳಿಗಳಲ್ಲಿ ಭಾಗವಹಿಸುವುದರಿಂದ ಪರಸ್ಪರ ಸ್ನೇಹ ಹೆಚ್ಚಾಗುತ್ತದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಪಂದ್ಯಾವಳಿಗಳಲ್ಲಿ ಯುವಕರು ಭಾಗವಹಿಸ ಬೇಕು ಹಾಗು ದುಶ್ಚಟಗಳಿಂದ ದೂರವಿರಬೇಕು ಆಟದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು . ಹಾಗೂ ಇಂತಹ ಪಂದ್ಯಾವಳಿಯನ್ನು ಏರ್ಪಡಿಸಿದ ಬುದ್ದ ಕ್ರಿಕೆಟ್ ಕ್ಲಬ್ ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದರು.
ಅತಿಥಿಯಾಗಿ ಆಗಮಿಸಿದ ಅಂಬರೀಶ್ ಬಿರಾದರ್ ಅವರಿಗೆ ಬುದ್ಧ ಟ್ರೋಫಿ ನ ಆಯೋಜಕರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ವೇದಿಕೆ ಮೇಲೆ ಪುರಸಭೆ ಸದಸ್ಯ ತಸ್ಲೀಮ್ ಮುಲ್ಲಾ, ಮುಖಂಡರಾದ ನಾಗರಾಜ್ ಚೆಟ್ಟರ್, ಶಿವರಾಜ ತಳವಾರ, ಮೌನೇಶ್ ಛಲುವಾದಿ, ಹಾಗು ಆಟಗಾರರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕುಂಬಾರ