ಬಸವರಾಜ ಶಂ ಚಿನಗುಡಿ. ಚನ್ನಮ್ಮನ ಕಿತ್ತೂರು
ಸುದ್ದಿ ಸದ್ದು ನ್ಯೂಸ್: ಯಾರು ಡ್ಯೆಪುಟಿ ಚನ್ನಬ್ಬಸಪ್ಪ ಅವರ ಪೂರ್ವಜರು ಮೂಲತ ಬೆಳಗಾವಿ ಜಿಲ್ಲಾ ಗೊಕಾಕನವರು ತಂದೆ ಬಸಲಿಂಗಪ್ಪ ತಾಯಿ ತಿಪ್ಪವ್ವ. ತಂದೆ ವ್ಯಾಪರಕ್ಕೆಂದು ಧಾರವಾಡಕ್ಕೆ ಬಂದು ಅಲ್ಲಿಯೆ ನೆಲಸಿದರು ತಂದೆ ಆರು ವರ್ಷದವನಿದ್ದಾಗಲೆ ತಿರಿಕೊಂಡರು. ಚನ್ನಬಸಪ್ಪನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದರು. ಆಗ ಧಾರವಾಡದ ಆಡಳಿತ ಬಾಷೆ ಮರಾಠಿ ಆಗಿತ್ತು. ಆಗ ಅವರಿಗೆ ಪ್ರೌಡ ಶಿಕ್ಷಣವನ್ನ ಆಂಗ್ಲ ಬಾಷೆಯಲ್ಲಿ ಕಲಿಯಬೇಕು ಎಂಬ ಹಂಬಲ ಆದರೆ ಧಾರವಡದಲ್ಲಿ ಅವಕಾಶ ಇರಲಿಲ್ಲ. ಅದಕ್ಕಾಗಿ ಪೂಣಾ ಹಾದಿ ಹಿಡಿದರೆ ಮಾತ್ರ ನಾನು ಆಂಗ್ಲಭಾಷೆ ಕಲಿಯಲು ಸಾದ್ಯ ಎಂದು ತಿಳಿದು ಅವರು ತನ್ನ ತಾಯಿಗೆ ತಿಳಿಸದೆ ಪೂಣಾ ಕಡೆಗೆ ನಡೆದರು. ಆಗ ಅವರ ಜೇಬಿನಲ್ಲಿ ಕೇವಲ ಮೂರು ರೂ ಅರವತ್ತೆರಡು ಪೈಸೆಗಳು ಇದ್ದವು. ಆ ಹುಡುಗನ ಸಾಹಸ ಮಾತ್ರ ಮೆಚ್ಚಲೆಬೇಕು ಕಾಲು ನಡಿಗೆಯ ಮೂಲಕ ಪೂಣಾ ತಲುಪಿದ್ದು ಆಯಿತು. ಅಗ ಅವರು ತೊಟ್ಟಿರುವ ಬಿಳಿ ಅಂಗಿ, ತಲೆಯ ಮೇಲೆ ಬಿಳಿ ಪಟಗಾ, ಮತ್ತು ಒಂದು ಕಂಬಳಿ ಅವರ ಆಸ್ತಿಗಳು. ಸ್ವತಹ ತಾನೆ ಪ್ರೌಡಶಾಲೆಯ ಮುಖ್ಯೋಪಾದ್ಯಾಯರನ್ನು ಕಂಡು ಬೇಟಿಯಾಗಿ ಶಾಲೆಯ ಧಾಖಲಾತಿ ಪಡೆದರು. ಪ್ರೌಡಶಾಲೆಯಲ್ಲಿ ಉತ್ತಮ ದರ್ಜೆಯಲ್ಲಿ ಪಾಸಾಗಿ ಅಲ್ಲಿಯೆ ಆಗತಾನೆ ಪ್ರಾರಂಭವಾದ ಇಂಜನಿಯರಿಂಗ ಕಾಲೇಜಿಗೆ ಸೇರಿಕೊಂಡ. ಅಲ್ಲಿ ಅವರಿಗೆ ಹತ್ತು ರೂಪಾಯಿ ಮಾಸಿಕ ವಿಧ್ಯಾರ್ಥಿ ವೇತನ ದೊರೆಯಲಾರಂಬಿಸಿತು. ಅದರಿಂದ ಅವರ ಅಬ್ಯಾಸ ನಿರಂತರವಾಗಿ ಸಾಗಿತು.
ಇದೆ ಸಮಯದಲ್ಲಿ ಇಂಗ್ಲೆಂಡಿನಲ್ಲಿ ಪ್ರಾರಂಭವಾದ “ಕೂಪರ್ಸ ಹಿಲ್ಲ” ಎಂಬ ಎಂಜನೇರಿಯಂಗ ಕಾಲೇಜಿಗೆ ಭಾರತದಿಂದ ಐದು ಜನ ಪ್ರತಿಭಾವಂತರನ್ನ ತರಬೇತಿಗಾಗಿ ಕಳುಹಿಸುವ ಯೋಜನೆಯನ್ನು ಧಾಧಾ ಭಾಯಿ ನವರೋಜಿ ಹಾಕಿಕೊಂಡಾಗ ಆ ಯೋಜನೆಯಲ್ಲಿ ಮೊದಲ ಹೆಸರು ಚನ್ನಬಸಪ್ಪ ಅವರದಾಗಿತ್ತು. ಆದರೆ ಅದು ಕಾರಣಾಂತರದಿಂದ ನಿಂತು ಹೋಯಿತು. ಮುಂಬೈ ಸರಕಾರ ಇವರಿಗೆ ತಮ್ಮ ಸರಕಾರದಲ್ಲಿ ಕಾರ್ಯನಿರ್ವಾಹಕ ಅಭಿಯಂತರ ಹುದ್ದೆಗೆ ಆಹ್ವಾನಿಸಿದರು ಆದರೆ ಅವರು ಕನ್ನಡ ನಾಡು ಮತ್ತು ನುಡಿಯ ಸೇವೆ ಮಾಡಬೇಕೆಂಬ ಬಯಕೆಯಿಂದ ವಾಪಸ್ ಧಾರವಾಡಕ್ಕೆ ಬಂದು ನೆಲೆ ನಿಂತರು. ಕೆಲ ದಿನಗಳ ನಂತರ ಅಂಚೆ ಇಲಾಕೆಯಲ್ಲಿ ಕೆಲಸ ಪ್ರಾರಂಭ ಮಾಡಿದರು. ಕೆಲವು ದಿನಗಳನ್ನ ಕಳೆದ ನಂತರ ಧಾರವಾಡದಲ್ಲಿ ಹೊಸದಾಗಿ ನಾರ್ಮಲ್ ಎಂಬ ಶಾಲೆ ಪ್ರಾರಂಭವಾಯಿತು ಅದರ ಮುಖ್ಯ ಅಧ್ಯಾಪಕರ ಹುದ್ದೆ ಇವರ ಹೆಗಲಿಗೆ ಬಂದಿತು. ಅಲ್ಲಿಂದ ಇವರ ಬದುಕೆಲ್ಲವೂ ಕನ್ನಡ ಕಟ್ಟುವ ಕೆಲಸಕ್ಕೆ ಮಿಸಲಾಯಿತು.
ಬೆಳಗಾವಿ, ಬಿಜಾಪುರ, ಕಾರವಾರ, ಧಾರವಾಡ ಇನ್ನೂ ಹಲವಾರು ಪ್ರದೇಶಗಳು ದಕ್ಷಿಣ ಮಹಾರಾಷ್ಟ್ರವಾಗಿದ್ದವು ಇಲ್ಲಿನ ಜನರ ಬಾಷೆ ಕನ್ನಡವಾಗಿದ್ದರು ಆಡಳಿತ ಮಾತ್ರ ಮರಾಠಿಯದ್ದಾಗಿತ್ತು. 1835 ರಲ್ಲಿ ದಕ್ಷಿಣ ಮಹಾರಾಷ್ಟ್ರದ ಭಾಷೆ ಕನ್ನಡ ಎಂದು ಬ್ರಿಟಿಷ್ ಸರಕಾರ ಘೋಷಿಸಿತು. ಇಲ್ಲಿಯ ಎಲ್ಲ ಶಿಕ್ಷಕರು ಮರಾಠಿಯಿಂದ ಕನ್ನಡದ ಮಗ್ಗುಲಿಗೆ ಹೊರಳಲು ಆಯಾಸ ಪಡುತ್ತಿದ್ದಾಗ ಚನ್ನಬಸಪ್ಪನವರ ಆಗಮನದಿಂದ ಹೊಸ ಪಠ್ಯಪುಸ್ತಕ, ಶಿಕ್ಷಕರ ತರಬೇತಿ ನೇಮಕ ಇವೆಲ್ಲವು ಕ್ರಮಬದ್ಧವಾಗಿ ಕನ್ನಡದ ಶಿಕ್ಷಣ, ಬಾಷೆ ಹಳಿ ಹಿಡಿಯಲು ಪ್ರಾರಂಭಿಸಿತು. ಅದರ ಪ್ರೇರಕ ಶಕ್ತಿಯೆ ಡೆಪುಟಿ ಚನ್ನಬಸಪ್ಪನವರು.
ಕಾರಣಾಂತರಗಳಿಂದ ನಾರ್ಮಲ್ ಶಾಲೆ ಬೆಳಗಾವಿಗೆ ಸ್ಥಳಾಂತರವಾಯಿತು “ನಮ್ಮ ಭಾಷೆಯ ಮೂಲಕವೆ ನಮ್ಮ ಬೆಳವಣಿಗೆ ಸಾದ್ಯ” ಎಂಬ ಕನ್ನಡ ಇಲಾಖೆಯ ಘೊಷವಾಕ್ಯವನ್ನು ಸಿದ್ದಪಡಿಸಿದರು. ಚನ್ನಬಸಪ್ಪನವರು ಬರೆದಿದ್ದು ಕಡಿಮೆ ಬರೆಯಿಸಿದ್ದು ಹೆಚ್ಚು ಇವರ ಮಾರ್ಗದರ್ಶನದಲ್ಲಿ ಗಂಗಾದರ ತುರಮರಿ, ಚುರುಮುರಿ ಶೇಷಗಿರಿರಾಯ ಬರೆಯಲು ಪ್ರಾರಂಭಿಸಿದರು. ಶೇಷಗಿರಿರಾಯರು ಅಭಿಜ್ಙಾನ ಶಾಕುಂತಲೆ ನಾಟಕವನ್ನು ಕನ್ನಡಕ್ಕೆ ಅನುವಾದಿಸಿ ಚನ್ನಬಸಪ್ಪನವರ ಕುರಿತು ಈ ರಿತಿಯಾಗಿ ಬರೆದರು “ಬಡವರ ವಿಧ್ಯಗಾಗಿ ತನು, ಮನ, ಧನದಿಂದ ಸಾಹಸಂಬುಡುತಿಹ ಚನ್ನಬಸವೇಶನ ದಿವ್ಯೆ ಪಾದಕ್ಕೆ ಭೂಷಣ ಕಡು ಗುರು ಭಕ್ತಿಯಿಂದ” ಅರ್ಪಿಸಿದರು ವೇಂಕಟರಂಗೂ ಕಟ್ಟಿ ಅವರಿಗೆ ಹಲವು ರೀತಿಯಲಲಿ ಸಹಾಯ ಮಾಡಿದರು. ನಾರ್ಮಲ್ ಶಾಲೆ ಕನ್ನಡ ಶಿಕ್ಷಕರ ಟ್ರೇನಿಂಗ ಕಾಲೇಜು ಆಗಿ ಪರವರ್ತನೆ ಆಯಿತು. ಅದರ ಪ್ರಥಮ ಪ್ರಾರ್ಚಾರ್ಯರಾಗಿ ಚನ್ನಬಸಪ್ಪನವರು ನೇಮಕವಾದರು ಅದೆ ಮುಂದೆ ಪದವಿಗಳಿಗೆ ಬುನಾದಿ ಹಾಕಿತು. ಅಲ್ಲಿಯೆ “ಮಠ ಪತ್ರಿಕೆ” ಆರಂಭಿಸಿದರು ಪ್ರಸ್ತುತ ಪತ್ರಿಕೆ “ಜೀವನ ಶಿಕ್ಷಣ” ಎಂಬ ಹೆಸರಿನಿಂದ ಬರುತ್ತಿದೆ.
ತದನಂತರ ಅವರು ಉಪ ಶಿಕ್ಷಣ ನಿರೀಕ್ಷಕ ಹುದ್ದೆ ವಹಿಸಿಕೊಂಡರು ಆಗ ಅವರು ಮೊದಲು ಕಾರ್ಯ ಆಡಳತದಲ್ಲಿ ಕನ್ನಡ ಅನಿಷ್ಟಾನಕ್ಕೆ ದುಡಿದರು ಈ ಹುದ್ದೆಯನ್ನು ಅಲಂಕರಿಸಿದಾಗಲೆ ಅವರಿಗೆ ಡೆಪುಟಿ ಎಂಬ ಪದ ಅವರ ಹೆಸರಿಗೆ ಸೇರಿಕೊಂಡಿತು. ಆದರೆ ಅವರು ಡೆಪುಟಿಗಳಂತೆ ಅಧಿಕರಿಗಳಾಗಿ ಶಾಲೆಗಳನ್ನ ಸಂದರ್ಶಿಸಲಿಲ್ಲ ಶಿಕ್ಷಕರ ಸುಖ ದು:ಖಗಳನ್ನ ಸಹಾನುಭೂತಿಯಿಂದ ಆಲಿಸಿದರು. ಅವರು ಉಪ ಶಿಕ್ಷಣ ನಿರೀಕ್ಷಕ ಹುದ್ದೆಯನ್ನು ಸ್ವಿಕರಿಸುವ ಮೊದಲು ಧಾರವಾಡ ಜಿಲ್ಲೆಯಲ್ಲಿ ಕೇವಲ ೪೮ ಕನ್ನಡ ಶಾಲೆಗಳು ಇದ್ದವು ಅವರ ಅಧಿಕಾರ ಅವದಿಯ ಕೊನೆಯಲ್ಲಿ ಶಾಲೆಗಲ ಸಂಖ್ಯೆ 341, ಇದಷ್ಟೇ ಸಾಕು ಅವರ ಕನ್ನಡ ಬದ್ದತೆಯ ಸೇವೆ ಅರಿಯಲು. ಈ ಕಾರಣಕ್ಕಾಗಿ ಡೆಪುಟಿ ಚನ್ನಬಸಪ್ಪನವರನ್ನು ನೈಜ ಕನ್ನಡದ ಕುಲಪುರೋಹಿತ ಎನ್ನುವರು.ಅಂದು ಚನ್ನಬಸಪ್ಪನವರು ಕನ್ನಡ ಕಟ್ಟುವ ಕೆಲಸ ಮಾಡದಿದ್ದರೆ ಇಂದು ನಾವೆಲ್ಲ ಮಹಾರಾಷ್ಟ್ರದ ಭಾಗವಾಗಿ ಇರುತ್ತಿದ್ದೆವು.
ನವೆಂಬರ ಒಂದರಂದು ಜನ ಕನ್ನಡಕ್ಕಾಗಿ ನಂಬರ ಒಂದು ಕೆಲಸ ಮಾಡಿದವರೆ ಡೆಪುಟಿ ಚನ್ನಬಸಪ್ಪನವರು ಅವರ ಜನ್ಮದಿನ ಮತ್ತು ಕರ್ನಾಟಕ ಏಕೀಕರಣಕ್ಕೆ ತಮ್ಮ ಸರಕಾರಿ ಕೆಲಸದ ಮೂಲಕ ಮುನ್ನುಡಿ ಬರೆದು ಅದೆ ದಿನ ಕನ್ನಡ ರಾಜ್ಯೋತ್ಸವ ಆಚರಿಸುವ ನಂಬರ ಒನ್ನ ಕನ್ನಡಿಗರು ನಾವಾಗಬೇಕು ಹೊರತು ನವೆಂಬರ ಒಂದರಂದು ನಾನು ಕನ್ನಡಿಗ ಎಂದು ಸಾಮಾಜೀಕ ಜಾಲತಾಣದಲ್ಲಿ ಹಾಕುವ ಕನ್ನಡ ಪ್ರೇಮಿಗಳಿಗೇನು ಕೊರತೆ ಇಲ್ಲ.