ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರು: ಐತಿಹಾಸಿಕ ಚನ್ನಮ್ಮನ ಕಿತ್ತೂರ ತಾಲೂಕಾಗಿ ಹಲವು ವರ್ಷಗಳು ಕಳೆದರು ಇದುವರೆಗೆ ಬೈಲಹೊಂಗಲದಲ್ಲಿ ಇರುವ ಕೆಲವು ಕಚೇರಿಗಳು ಚನ್ನಮ್ಮನ ಕಿತ್ತೂರ ಆಡಳಿತ ಸೌಧಕ್ಕೆ ಬರದ ಕಾರಣ ಈ ಭಾಗದ ಜನತೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಭಾಗದ ಜನತೆ ಬೈಲಹೊಂಗಲಕ್ಕೆ ಹೊಗುವುದು ಇನ್ನೂ ತಪ್ಪಿಲ್ಲ ಕಿತ್ತೂರಿನ ಆಡಳಿತ ಸೌಧಕ್ಕೆ ಕೆಲವೇ ಕಚೇರಿಗಳು ಕಾರ್ಯ ನಿರ್ವಹಿಸತ್ತಿದ್ದವೆ ಇನ್ನೂ ಪ್ರಮುಖವಾಗಿ ಇರವ ಕಚೇರಿಗಳು ಬೈಲಹೊಂಗಲದಲ್ಲಿ ಇವೆ. ಕಿತ್ತೂರಿನ ಆಡಳಿತ ಸೌಧಕ್ಕೆ ಕಚೇರಿಗಳು ಬರುವದು ಯಾವಗ ಕಂದಾಯ ಸಚಿವರು ಇದರ ಬಗ್ಗೆ ಗಮನ ಹರಿಸಿ ಬೈಲಹೊಂಗಲದಲ್ಲಿ ಕಚೇರಿಗಳನ್ನು ಕಿತ್ತೂರಿನ ಆಡಳಿತ ಸೌಧಕ್ಕೆ ಸ್ಥಳಾಂತರ ಮಾಡಸಲು ಕೊಡಲೇ ಕ್ರಮ ಕೈಗೊಳ್ಳಬೇಕು ಮತ್ತು ಉಪ ನೋಂದಣಿ ಕಚೇರಿ ಸಹ ಹಳೆಯ ತಹಶೀಲ್ದಾರ ಕಚೇರಿಯ ಹತ್ತಿರವೇ ಇದೆ. ಆಡಳಿತ ಸೌಧ ಪ್ರಾರಂಭವಾಗಿ ಎರಡು ವರ್ಷ ಕಳೆದರು ನೂತನ ಆಡಳಿತ ಸೌಧಕ್ಕೆ ಉಪ ನೋಂದಣಿ ಕಚೇರಿ ಸ್ಥಳಾಂತರ ಆಗಿಲ್ಲ, ಕಿತ್ತೂರ ಆಡಳಿತ ಸೌಧಕ್ಕೆ ಬರುವ ಜನರಿಗೆ ಮೂಲಭೂತ ಸೌಲಭ್ಯಗಲಿಂದ ವಂಚಿತವಾಗಿದ್ದು ತಕ್ಷಣ ಸರಕಾರ ಐತಿಹಾಸಿಕ ಪಟ್ಟಣದ ಕಡೆಗೆ ಗಮನ ಹರಿಸಬೇಕು ಎಂದು ರಾಣಿ ಚನ್ನಮ್ಮ ನವಭಾರತ ಸೇನೆಯ ರಾಜ್ಯ ಸಂಚಾಲಕ ಜಗದೀಶ ಕಡೋಲಿ ಹಾಗೂ ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ಭೀಮರಾಣಿ ತಹಶೀಲ್ದಾರ ಮೂಲಕ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.