ಕಳೆದ ಎಂಎಲ್‌ಸಿ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಹಾಗೂ ಡಿಕೆಶಿ ಮಧ್ಯ ಮೈತ್ರಿ ಆಗಿತ್ತು; ರಮೇಶ ಜಾರಕಿಹೊಳಿ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಬೆಳಗಾವಿ : ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಸೋತ ವ್ಯಕ್ತಿಯನ್ನು ಬಿಜೆಪಿ ಡಿಸಿಎಂ ಮಾಡಿತ್ತು, ಪಕ್ಷನಿಷ್ಠೆಯನ್ನು ತೋರಿಸದ ಲಕ್ಷ್ಮಣ ಸವದಿ ಇಂದು ಪಕ್ಷ ಬಿಟ್ಟು ಪಕ್ಷಕ್ಕೆ ದ್ರೋಹ ಮಾಡಿದ್ದಾನೆ. ಡಿ.ಕೆ ಶಿವಕುಮಾರ್ ಬೆಳಗಾವಿಯಿಂದ ವಿಶೇಷ ವಿಮಾನದಲ್ಲಿ ಕರೆದುಕೊಂಡಿ ಹೋಗಿದ್ದು ಸವದಿ ಎಂಬ ಪೀಡೆ ಪಕ್ಷ ಬಿಟ್ಟು ತೊಲಗಿದೆ ಎಂದು ರಮೇಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಅಥಣಿಯಲ್ಲಿ ನಡೆದ ಸರ‍್ವಜನಿಕರ ಸಭೆ ಉದ್ದೇಶಿಸಿ ಮಾತನಾಡಿದ ಅವರು ನಾನು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತೇನೆ ಎಂದು ಸವದಿ ತಲೆಯಲ್ಲಿ ಇತ್ತು.ನಾನು ಸಚಿವ ಸ್ಥಾನ ಸಿಗದಿದ್ದರು ಬಿಜೆಪಿ ಬಿಟ್ಟಿಲ್ಲ. ಸವದಿ ಅಧಿಕಾರದಲ್ಲಿ ಇದ್ದಾಗ ಮತಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಈಗ ಅಧಿಕಾರದ ಆಸೆಗಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾನೆ. ನಮ್ಮ ಪಕ್ಷಕ್ಕೆ ಅಂಟಿದ ಪೀಡೆ ತೊಲಗಿದಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಕಳೆದ ಎಂಎಲ್ಸಿ ನಡೆದ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಹಾಗೂ ಡಿಕೆಶಿ ಅವರ ಮಧ್ಯ ಮೈತ್ರಿ ಆಗಿತ್ತು ಅಂದಿನಿಂದ ಕುತಂತ್ರ ರಾಜಕಾರಣ ಮಾಡುತ್ತಲೇ ಇದ್ದರು. ಕಪಟ ಮನಸಿನ ಸವದಿ ಬಿಜೆಪಿಯಿಂದ ಹೊರಗೆ ಹೋಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ನಮ್ಮ ಪಕ್ಷದ ಎಲ್ಲಾ ಕರ‍್ಯರ‍್ತರು ಒಗ್ಗಟ್ಟಿನಿಂದ ಕೆಳ ಮಟದಟದಿಂದ ಕೆಲಸ ಮಾಡುವ ಮೂಲಕ ಮಹೇಶ ಕುಮಟಳ್ಳಿ ಅವರನ್ನು ಬಹಳ ಅಂತರದ ಮತದಿಂದ ಗೆಲ್ಲಿಸಬೇಕು. ಲಕ್ಷ್ಮಣ ಸವದಿ ಬಿಜೆಪಿ ಪಕ್ಷದಲ್ಲಿ ಅಧಕಾರ ಅನುಭವಿಸಿ ಸಾಕಷ್ಟು ದುಡ್ಡು ಮಾಡಿದ್ದಾನೆ ದುಡ್ಡು ಹಂಚಿ ಮತ ಕೇಳಬಹುದು, ಅಥಣಿ ಕ್ಷೇತ್ರದ ಮತದಾರರು ಅವರ ಯಾವುದೇ ಆಮಿಷಕ್ಕೆ ಒಳಗಾಗದೆ ಗಟ್ಟಿಯಾಗಿ ದೃಡ ಮನಸ್ಸಿನಿಂದ ನಮ್ಮ ಅಭ್ರ‍್ಥಿ ಮಹೇಶ ಕುಮಟಳ್ಳಿ ಅವರನ್ನ ಬೆಂಬಲಿಸಬೇಕು ಎಂದ ಅವರು ಪಿಕೆಪಿಎಸ್ ಸಿಬ್ಬಂದಿ ಹಾಗೂ ಶೇರು ಹೊಂದಿದ ಸದಸ್ಯರು ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬಾರದು. ಒಂದು ವೇಳೆ ಒತ್ತಡಕ್ಕೆ ಒಳಗಾದರೆ ಮುಂಬರುವ ದಿನಗಳಲ್ಲಿ ಎಲ್ಲಾ ಸಂಘಗಳಲ್ಲಿ ಅಡಿಟ್ ಮಾಡಿಸಲಸಗುವುದು ಎಂದು ರಚ್ಚರಕೆ ನೀಡಿದರು.
ಸವದಿ ಬಿಜೆಪಿ ತೊರೆದಿದ್ದು ನನಗೆ ತುಂಬಾ ಸಂತೋಷ ಆಗಿದೆ. ಸವದಿಗೆ ಬಿಜೆಪಿ ಅಧಿಕಾರ ನೀಡಿ ಗೌರವಿಸಿತ್ತು ಆದರೆ ಸವದಿ ಪಕ್ಷಕ್ಕೆ ನಿಷ್ಠನಾಗಿ ಉಳಿಯಲಿಲ್ಲ. ಅಥಣಿಯಲ್ಲಿ ಮಹೇಶ್ ಕುಮಠಳ್ಳಿ, ಬೆಳಗಾವಿ ಗ್ರಾಮೀಣದಲ್ಲಿ ನಾಗೇಶ್ ಮನ್ನೋಳಕರ್ ಅವರನ್ನು ಗೆಲ್ಲಿಸಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದ ಗದ್ದುಗೆ ಏರುವಂತೆ ಮಾಡುತ್ತೇನೆ. ಕಾಗವಾಡ ಹಾಗೂ ಅಥಣಿ ಗೆಲುವಿಗೆ ತಾವೆಲ್ಲ ಆಶೀರ್ವಾದ ಮಾಡಬೇಕು ಎಂದರು. 

Share This Article
";