ಕರುನಾಡು “ರಾಜ್ಯೋತ್ಸವ ಪ್ರಶಸ್ತಿ” ಪಡೆದ ಕಿತ್ತೂರು ನಾಡಿನ ತೇಜಸ್ವಿ ಯುವಕ ರಾಜು

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಮೈಸೂರು: ಪ್ರತಿವರ್ಷ ಪದ್ದತಿಯಂತೆ ಮಂಡ್ಯದ ಕರುನಾಡು ಸೇವಾ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕೊಡಮಾಡುವ ಪ್ರತಿಷ್ಠಿತ “ಕರುನಾಡು ರಾಜ್ಯೋತ್ಸವ” ಪ್ರಶಸ್ತಿಯನ್ನು ಪಡೆದ ಐತಿಹಾಸಿಕ ಚನ್ನಮ್ಮನ ಕಿತ್ತೂರು ನಾಡಿನ ತೇಜಸ್ವಿ ಯುವಕ ರಾಜು ಬೋಗುರು(ಮೇದಾರ)

ಡಿಸೆಂಬರ್ 18 ರಂದು ಮೈಸೂರು ಮುಡಾ ಆಫೀಸ್ ಎದುರು ಇರುವ ರೋಟರಿ ಸಭಾಂಗಣದಲ್ಲಿ ನಡೆಯುವ “ಕನ್ನಡದ ಹಬ್ಬ” ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಚಿಂತಕಿ ಪ್ರೊ. ಬಿ.ಟಿ. ಲಲಿತಾನಾಯ್ಕ,   ಸಮಾಜ ಸೇವಕರಾದ ಲಯನ್ ಸಿದ್ದೇಗೌಡ, ಮಾದೇಶ್ ಬಿ, ಸಂತೋಷ ‌ಪೂಜಾರಿ, ಕರುನಾಡು ಸೇವಾ ಟ್ರಸ್ಟ್‌ನ ಅಧ್ಯಕ್ಷ ಅಭಿನಂದನ್ ಎಂ. ಅವರುಗಳ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಯನ್ನು  ನೀಡಿ ಗೌರವಿಸಲಾಯಿತು

ಗಣ್ಯರಿಂದ ಪ್ರಶಸ್ತಿ ಪಡೆಯುತ್ತಿರುವ ರಾಜು ಬೊಗುರು (ಮೇದಾರ)

ಪ್ರಶಸ್ತಿ ಪಡೆದ ರಾಜು ಬೋಗುರು (ಮೇದಾರ) ಅವರ ಸಾಧನೆಗೆ ಐತಿಹಾಸಿಕ ಚನ್ನಮ್ಮನ ಕಿತ್ತೂರು ನಾಡಿನ ಸಮಸ್ತ ಜನತೆ, ಸಕಲ ಸಾಧು ಸಂತರು ಮತ್ತು ಅವರ ಸ್ನೇಹ ಬಳಗ, ಹರ್ಷ ವ್ಯಕ್ತಪಡಿಸಿದ್ದಾರೆ.

 

Share This Article
";