ಸುದ್ದಿ ಸದ್ದು ನ್ಯೂಸ್
ಬಸವರಾಜ ಶಂ ಚಿನಗುಡಿ. ಚನ್ನಮ್ಮನ ಕಿತ್ತೂರು
ಬಹುತೇಕ ಹಿಂದಿನ ಕಾಲದಲ್ಲಿ ಬಿದಿರಿನಿಂದ ಮಾಡಿದ ಬುಟ್ಟಿ, ಮರ, ಸಾಸಣಿಕೆ, ಜಲ್ಲಿ, ಕಣಜ, ಗಳಗಿ ಇನ್ನೂ ಅನೇಕ ಮನೆ ಬಳಿಕೆಗೆ ಬೇಕಾಗುವ ವಸ್ತುಗಳನ್ನ ಬಳಸುತ್ತಿದ್ದೆವು. ಕಾಲಾಂತರದಲ್ಲಿ ಜಾಗತೀಕರಣದ ಫಲವಾಗಿ ಪ್ಲಾಸ್ಟಿಕ್ ಬಂದು ಬಿದಿರಿನ ಉತ್ಫನ್ನಗಳನ್ನ ನುಂಗಿ ನೀರು ಕುಡಿಯಿತು. ಅವುಗಳನ್ನ ನಂಬಿ ಜೀವನ ಸಾಗಿಸುತ್ತಿದ್ದವರು ಬೇರೆ ಬೇರೆ ಉದ್ಯೊಗಗಳತ್ತ ಸಾಗಿ ತಲೆಮಾರುಗಳಿಂದ ಬಂದ ಬಿದಿರಿನ ಕಲೆ ನಾಶವಾಗುತ್ತ ಸಾಗಿದೆ.
ಇಂತಹ ಸಂದಿಗ್ದ ಸಮಯದಲ್ಲಿ ಬಿದಿರಿನ ಅನೇಕ ಕರಕುಶಲ ವಸ್ತುಗಳನ್ನ ತಯಾರಿಸುವ ಕಿತ್ತೂರಿನ ತೇಜಸ್ವಿ ಯುವಕ ರಾಜು ಬೋಗೂರ (ಮೇದಾರ) ನಾಡಿನ ಗಮನವನ್ನ ಸೆಳೆದಿದ್ದಾನೆ.
ಇವರು ಓದಿದ್ದು ಹತ್ತನೇ ತರಗತಿ ಮನೆತನದ ಮೂಲ ಉದ್ಯೋಗವಾದ ಮೇದಾರಿಕೆ ಮೇಲಿನ ಪ್ರೀತಿ ಮಾತ್ರ ಎಳ್ಳಷ್ಟು ಕಡಿಮೆಯಾಗಿಲ್ಲ.
ಇವರ ಕೈಯಲ್ಲಿ ಅರಳುವ ಬಿದಿರಿನ ವಸ್ತುಗಳು ಹೂವು ಕಂಡಂತೆ ಕಾಣುತ್ತವೆ. ನಿರುಪಯುಕ್ತ ವಸ್ತುಗಳಿಂದ ವಿವಿಧ ತರಹದ ಅಲಂಕಾರದ ವಸ್ತುಗಳನ್ನ ಸಿದ್ದಪಡಿಸುವುದರಲ್ಲಿ ಸಿದ್ದಹಸ್ತರು. ಬಿದಿರಿನಿಂದ ಜನಸಾನ್ಯರಿಗೆ ಗೃಹಬಳಿಕೆಗೆ ಉಪಯೋಗವಾಗುವ ಹಲವಾರು ವಸ್ತುಗಳನ್ನ ತಯಾರಿಸಿ ರಾಜ್ಯದಾದ್ಯಂತ ಹಲವು ಕಡೆ ಮಾರಟ ಮಾಡಲು ಸರಕಾರಿ ಉತ್ಸವಗಳು, ಕೃಷಿ ಮೇಳಗಳಿಗೆ, ಇತ್ಯಾದಿ ಸ್ಥಳಗಳಲ್ಲಿ ಮಾರಾಟ ಮಾಡುತ್ತಾರೆ ಆದರೆ ಪರಿಸರ ಮತ್ತು ಆರೊಗ್ಯಕ್ಕೆ ಮಾರಕವಾದ ಪ್ಲಾಸ್ಟಿಕ್ ಬಂದು ಬಿದಿರಿನ ವಸ್ತುಗಳನ್ನ ಕೊಂಡುಕೊಳ್ಳುವ ಜನ ಮಾತ್ರ ಬಹಳ ಕಡಿಮೆ ಎನ್ನುತ್ತಾರೆ.
ಬದಿರಿನಿಂದ ಮಾಡಿದ ಸಲಕರಣೆಗಳಿಗೆ ಗೆದ್ದಲು (ಕಟ್ಟಿಗೆ ಕೊರಿಯುವ ಹುಳು) ಹತ್ತುವುದಿಲ್ಲ ಮತ್ತು ಬಿದಿರಿಗೆ ಬಣ್ಣ ಬಳಿಯುವ ಅವಶ್ಯಕತೆ ಇರುವುದಿಲ್ಲ ಮತ್ತು ಕಟ್ಟಿಗೆ ವಸ್ತುಗಳನ್ನ ಮಿರಿಸುಮ ಬಾಳಿಕೆ ಬದಿರಿನ ವಸ್ತುಗಳಿಗೆ ಇದೆ. ಬಿದಿರಿನ ವಸ್ತುಗಳನ್ನ ತಯಾರಿಸಲು ಕೆಲಸಗಾರರು ಕಡಿಮೆ ಬೇಕಾಗುತ್ತದೆ ಅಲ್ಲದೆ ಮರದ ವಸ್ತುಗಳಿಗಿಂತ ಕಡಿಮೆ ಬಂಡವಾಳದಲ್ಲಿ ಸಿಗುತ್ತವೆ ಎನ್ನುತ್ತಾರೆ.
ಹಿಂದೆ ಪೂರ್ವಜರು ಬಿದುರಿನ ಬುಟ್ಟಿ, ಸಾಸಣಿಕೆ, ಜಲ್ಲಿ ಇತ್ಯಾದಿ ವಸ್ತುಗಳನ್ನ ತಯಾರಿಸಿ ತಲೆಯ ಮೇಲೆ ಹೊತ್ತುಕೊಂಡು ಹಳ್ಳಿಹಳ್ಳಿಗಳಿಗೆ ಮಾರಾಟ ಮಾಡಲು ಹೋಗುತ್ತಿದ್ದರು ಹಳ್ಳಿಗಳಲ್ಲಿ ರೈತರು ವ್ಯವಸಾಯಕ್ಕೆ ಬೇಕಾಗುವ ಬಿದುರಿನ ವಸ್ತುಳನ್ನ ಕಾಳುಕಡಿ ಕೊಟ್ಟು ಕೊಂಡುಕೊಳ್ಳುತ್ತಿದ್ದರು ಆದರೆ ಪ್ಲ್ಯಾಸ್ಟಿಕ್ ಎಂಬ ಮಹಾಮಾರಿ ಬಂದ ನಂತರ ಬಿದುರಿನ ವಸ್ತುಗಳನ್ನು ಮರೆತು ಪ್ಲ್ಯಾಸ್ಟಿಕಗೆ ಮಾರು ಹೊಗಿದ್ದಾರೆ.
ಆದರೆ ರಾಜು ಅವರು ಇದನ್ನೆಲ್ಲ ಅರಿತು ವಂಶಪರಂಪರೆಯಾಗಿ ಬಂದ ಮೇದಾರಿಕೆಯನ್ನು ಬಿಡಬಾರದು ಎಂದು ಹಳಿಯಾಳದ ದೇಶಪಾಂಡೆ ರುಡ್ ಸೇಟ್ ಸಂಸ್ಥೆಯಲ್ಲಿ ಸುಮಾರು 200 ಕ್ಕೂ ಹೆಚ್ಚು ಕಲಾತ್ಮಕ ವಿನ್ಯಾಸದ ತರಬೇತಿ ಪಡೆದು ಬಿದುರಿಗೆ ಆಧುನಿಕ ಸ್ಫರ್ಶವನ್ನು ಕೊಟ್ಟು ಕೀ ಚೈನು, ಪೆನ್ನ ಸ್ಟ್ಯಾಂಡ್, ಪ್ಲಾವರ್ ಪಾಟ್, ಗೋಡೆ ಹ್ಯಾಂಗಿಂಗ ಲ್ಯಾಂಪ್,ಬಿಡ್ ಲ್ಯಾಂಪ್, ಟೋಪಿ, ಹೇರಕ್ಲಿಪ್, ಪ್ರುಟ್ ಟ್ರೇ, ಲಾಕೇಟ್, ದೇವರ ಮೂರ್ತಿಗಳು, ಗೃಹ ಅಲಂಕಾರ ವಸ್ತುಗಳು ಸೇರಿದಂತೆ ಇನ್ನೂ ಹಲಾವಾರು ತರಹದ ಕರ ಕುಶಲ ವಸ್ತುಗಳನ್ನ ತಯಾರಿಸಿ ಎಕ್ಷಪೋಗಳಲ್ಲಿ ಮಾರಾಟ ಮಾಡುತ್ತಾರೆ.
ಒಳ್ಳೆಯ ಗುಣಮಟ್ಟದ ಬಿದಿರಿನ ವಸ್ತುಗಳನ್ನ ಮತ್ತು ಮನೆಯ ಅಲಂಕಾರಿಕೆಯ ವಸ್ತುಗಳ ಬಳಕೆಯನ್ನು ಜನರು ಉಪಯೋಗ ಮಾಡಿದರೆ ನಮಗೂ ಮುಂದೆ ಇನ್ನು ಹೆಚ್ಚು ಹೆಚ್ಚಾಗಿ ಬಿದುರಿನ ವಸ್ತುಗಳನ್ನು ತಯಾರಿಸಬೇಕು ಎಂಬ ಉತ್ಸಾಹ ಹೆಚ್ಚಾಗುತ್ತದೆ.
ಬಿದುರಿನ ವಸ್ತುಗಳನ್ನ ಉಪಯೋಗ ಮಾಡುವುದರಿಂದ ಮನೆಯ ಅಲಂಕಾರವಾಗಿ ಕಾಣುವುದಲ್ಲದೆ ಆರೋಗ್ಯಕ್ಕು ಒಳ್ಳೆಯದು ಎಂದು ಸರ್ವಜ್ಞ ತನ್ನ ವಚನದಲ್ಲಿ “ಬಿದಿರು ಅಂದಣವಕ್ಕು ಬಿದಿರು ಸತ್ತಿಗೆಯಕ್ಕು ಅಂದವಿಹ ಮನೆಗೆ ಸಿಂಗಾರವಕ್ಕು” ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ನಾವು ನೀವೆಲ್ಲರೂ ಬಿದಿರಿನಿಂದ ಮಾಡಿದ ವಸ್ತುಗಳನ್ನ ಉಪಯೋಗಿಸೋಣ ಇಂತಹ ಕುಷಲಕರ್ಮಿಗಳ ಏಳಿಗೆಗೆ ಪಣ ತೊಡೋಣ.ಇಂತಹ ಸಾಧಕರ ಬೆನ್ನು ತಟ್ಟಿ ಅವರ ಸಾಧನಗೆ ಪ್ರೇರಣೆಯಾಗೊಣ ತಾವೆಲ್ಲರೂ ರಾಜು ಬೋಗೂರ (ಮೇದಾರ) ಆವರನ್ನ ಪ್ರೇರೇಪಿಸಿ, ಅವರ ಜಂಗಮವಾನಿ ಸಂಖ್ಯೆಗೆ (988086172) ಕರೆ ಮಾಡುವ ಮುಖಾಂತರ ಬೆನ್ನು ತಟ್ಟಿರಿ.