ಬೀದರ್: ಜಿಲ್ಲೆಯ ಹುಮನಾಬಾದನಲ್ಲಿ ಇಂದು ನಡೆದ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ ಜನಜಾಗೃತಿ ಜಾಥಾಗೆ ಎಂ.ಎಲ್.ಸಿ ದ್ವಯರು ಚಾಲನೆ ನೀಡಿದರು.
ಹಸಿರು ಧ್ವಜ ಪ್ರದರ್ಶಿಸಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶಾಎಖರ ಬಿ.ಪಾಟೀಲ 5ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಮೊದಲ ಹಂತದಲ್ಲಿ 32ಬೂತಗಳಲ್ಲಿ ಲಸಿಕೆ ಹಾಕಲಾಗುತ್ತದೆ. ತಪ್ಪಿದ ಮಕ್ಕಳಿಗೆ ಅವರ ಮನೆ ಬಾಗಿಲಿಗೆ ತೆರಳಿ ಲಸಿಕೆ ಹಾಕುವ ವ್ಯವಸ್ಥೆ ಮಾಡಿದ್ದು, ಪಾಲಕರು ಸೌಲಭ್ಯದ ಪ್ರಯೋಜನ ಪಡೆಯಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ, ಮುಖ್ಯ ಆರೋಗ್ಯ ಅಧಿಕಾರಿ ಡಾ.ನಾಗನಾಥ ಹುಲಸೂರೆ, ಡಾ.ಬಸವಂತರಾವ ಗುಮ್ಮೇದ್, ಡಾ.ದಿಲೀಪ ಡೋಂಗ್ರೆ, ಶಿವಕುಮಾರ ಕಿವ್ಡೆ ಮತ್ತು ಬಸವತೀರ್ಥ ವಿದ್ಯಾಪೀಠ ಪ್ರೌಢಶಾಲೆ ಮುಖ್ಯಶಿಕ್ಷಕ ವಿಜಯಕುಮಾರ ಹಾಗೂ ಸಿಬ್ಬಂದಿ ಇದ್ದರು.