ಸೊಂಟ ಮುಟ್ಟಿದ ಪಿಎಸ್‌ಐ ಸಸ್ಪೆಂಡ್ ! ಸೊಂಟದ ವಿಷ್ಯ ಬ್ಯಾಡವೋ ಶಿಷ್ಯ, ಸೊಂಟಕ್ಕಿಂತ್‌.. ವಾಸಿ ಕಣೊ ಗುಂಡಿನ ದಾಸ್ಯ, ಸೊಂಟ ಸೂಪರೂ ಆದರೆ ಬಾರಿ ಡೆಂಜರೂ!

ಉಮೇಶ ಗೌರಿ (ಯರಡಾಲ)

ಸೊಂಟದ ವಿಷ್ಯ ಬ್ಯಾಡವೋ ಶಿಷ್ಯ, ಸೊಂಟಕ್ಕಿಂತ್‌.. ವಾಸಿ ಕಣೊ ಗುಂಡಿನ ದಾಸ್ಯ,                                              ಸೊಂಟ ಸೂಪರೂ ಆದರೆ ಬಾರಿ ಡೆಂಜರೂ! ಸೊಂಟ ಮುಟ್ಟಿ ಸಸ್ಪೆಂಡ್ ಆದ ಪಿಎಸ್‌ಐ! 

ಬೆಂಗಳೂರು:  ಸ್ನೇಹಿತರ ವಿವಾಹ ವಿಚ್ಛೇದನ ಪ್ರಕರಣದಲ್ಲಿ ಹೇಳಿಕೆ ನೀಡಲು ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣೆಗೆ ತೆರಳಿದ್ದ ಮಹಿಳೆ ಜತೆಗೆ ಅನುಚಿತವಾಗಿ ವರ್ತಿಸಿದ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಮಂಜುನಾಥ್ ಈಗ ಅಮಾನತು ಆಗಿ ಮನೆಯಲ್ಲಿ ಕುಳಿತಿದ್ದಾನೆ.

ಪೊಲೀಸ್‌ ಠಾಣೆಗೆ ದೂರು ನಿಡಲು ಹೋಗಿದ್ದ ಮಹಿಳೆಯೊಬ್ಬರು ತನ್ನ ಮೇಲೆ ಸುದ್ದಗುಂಟೆಪಾಳ್ಯ ಪಿಎಸ್‌ಐ ಮಂಜುನಾಥ್‌ ಅವರು ಮೈ-ಕೈ ಹಾಗೂ ಸೊಂಟ ಮುಟ್ಟಿ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು. ನಿನ್ನೆ ಸಂಜೆ ವೇಳೆ ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣೆಗೆ ಬಂದು ಪಿಎಸ್‌ಐ ಮೇಲೆ ಲಿಖಿತ ದೂರು ದಾಖಲಿಸಿದ್ದರು. ಮಹಿಳೆ ದೂಡಿನ ಆಧಾರದಲ್ಲಿ ಠಾಣೆಯಲ್ಲಿ ಎಫ್‌ಐಆರ್‌ ಅನ್ನೂ ದಾಖಲು ಮಾಡಲಾಯಿತು. ನಂತರ ದೂರು ಇದ್ದ ಪಿಎಸ್‌ಐ ಮೇಲೆ ತನಿಖೆಯನ್ನೂ ಮಾಡಲಾಗಿದ್ದು, ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪಿಎಸ್‌ಐ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಸರ್ಕಾರ ಕೊಟ್ಟಿದ್ದ ಕೆಲಸ ಮಾಡುವುದನ್ನು ಬಿಟ್ಟು ಚಪಲಕ್ಕೆ ಮಹಿಳೆಯ ಸೊಂಟ ಮುಟ್ಟಿದ ಪಿಎಸ್‌ಐ ಈಗ ಅಮಾನತ್ತಾಗಿ ಮನೆಯಲ್ಲಿ ಕೂಳಿತಿದ್ದಾನೆ.

ತಡರಾತ್ರಿ ವಾಟ್ಸಾಪ್‌ನಲ್ಲಿ ಸಂದೇಶ ಕಳಿಸಿ ಕಿರುಕುಳ: ಸುದ್ದಗುಂಟೆಪಾಳ್ಯ ಠಾಣೆ ಪಿಎಸ್‌ಐ ಮಂಜುನಾಥ ವಿರುದ್ಧ ಮಹಿಳೆ ಅನುಚಿತ ವರ್ತನೆ ಆರೋಪ ಮಾಡಿದ್ದರು. ಈ ಸಂಬಂಧ ಏ.10ರಂದು ಟ್ವಿಟರ್‌ನಲ್ಲಿ ಬರೆದು ನಗರ ಪೊಲೀಸ್‌ ಆಯುಕ್ತರಿಗೆ ಟ್ಯಾಗ್‌ ಮಾಡಿದ್ದರು.‘ಸ್ನೇಹಿತರ ವಿವಾಹ ವಿಚ್ಛೇದನ ಪ್ರಕರಣ ಸಂಬಂಧ ಹೇಳಿಕೆ ದಾಖಲಿಸಲು ಏ.8ರಂದು ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣೆಗೆ ತೆರಳಿದ್ದೆ. ಈ ವೇಳೆ ಪಿಎಸ್‌ಐ ಮಂಜುನಾಥ ಅವರು ಹೇಳಿಕೆ ದಾಖಲಿಸುವ ನೆಪದಲ್ಲಿ ನನ್ನ ಕೈ, ಸೊಂಟ ಮುಟ್ಟಿ ಅಸಭ್ಯವಾಗಿ ವರ್ತಿಸಿದರು. ಅಷ್ಟೇ ಅಲ್ಲದೆ, ತಡರಾತ್ರಿ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದರು

‘ಈ ಘಟನೆಯಿಂದ ನಾನು ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದೇನೆ. ಈ ಬಗ್ಗೆ ನಾನು ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ಈ ಸಂದರ್ಭವನ್ನು ನಾನು ಹೇಗೆ ನಿಭಾಯಿಸಬೇಕು ಎಂಬುದು ಹೊಳೆಯುತ್ತಿಲ್ಲ. ಈ ಬಗ್ಗೆ ಸಲಹೆ ನೀಡಿ’ ಆ ಮಹಿಳೆ ಟ್ವಿಟರ್‌ನಲ್ಲಿ ಮನವಿ ಮಾಡಿಕೊಂಡಿದ್ದರು.

ನೇರವಾಗಿ ಪೊಲೀಸ್‌ ಠಾಣೆಗೆ ಬಂದು ಲಿಖಿತ ದೂರು ದಾಖಲು: ಇನ್ನು ಟ್ವಿಟರ್‌ನಲ್ಲಿ ದಾಖಲಾಗಿದ್ದ ದೂರಿನ ಆಧಾರದಲ್ಲಿ ಮಹಿಳೆಯನ್ನು ಪೊಲೀಸ್‌ ಕಚೇರಿಯಿಂದ ಸಂಪರ್ಕ ಮಾಡಿದ್ದಾರೆ. ನಂತರ, ನೀವು ಪೊಲೀಸ್‌ ಠಾಣೆಗೆ ಬಂದು ಎಫ್ಐಆರ್ ದಾಖಲಿಸಲು ಲಿಖಿತ ದೂರು ನೀಡಬೇಕು ಎಂದು ತಿಳಿಸಲಾಗಿತ್ತು. ನಾವು ಹೇಳಿದ ನಂತರ ಮಹಿಳೆ ನಿನ್ನೆ ಸಂಜೆ ಪೊಲೀಸ್‌ ಠಾಣೆಗೆ ಬಂದು ಲಿಖಿತ ರೂಪದಲ್ಲಿ ದೂರು ನೀಡಿದ್ದಾರೆ. ಮಹಿಳೆಯ ದೂರಿದ ಆಧಾರದ ಮೇಲೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಇನ್ನು ಐಪಿಸಿ 354ಎ ,354ಡಿ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಸತ್ಯಾಂಶವನ್ನು ತಿಳಿದುಕೊಳ್ಳಲು ತನಿಖೆ ನಡೆಸಲಾಗಿದೆ ಎಂದು ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ಹೇಳಿದ್ದಾರೆ.

ಅನುಚಿತ ವರ್ತನೆಯ ಪಿಎಸ್‌ಐ ಅಮಾನತು: ಹಿರಿಯ ಅಧಿಕಾರಿಗೆ ತನಿಖೆ ಜವಾಬ್ದಾರಿಯನ್ನು ನೀಡಲಾಗಿತ್ತು. ಘಟನೆ ಸಂಬಂಧ ಎಸಿಪಿ  ಹಂತದಲ್ಲಿ ತನಿಖೆಗೆ ಆದೇಶಿಸಲಾಗಿತ್ತು. ಇನ್ನು ತನಿಖೆಯಲ್ಲಿ ಪಿಎಸ್ ಐ ಹೇಳಿಕೆ ದಾಖಲಿಸಲು ಬಂದಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರೋದು ಗೊತ್ತಾಗಿದೆ.  ಒಬ್ಬ ಅಧಿಕಾರಿಯಾಗಿ ಈ ರೀತಿ ಮಾಡಿರೋದು ತಪ್ಪು. ಹೀಗಾಗಿ ಆತನ ಮೇಲೆ ಎಫ್ ಐ ಆರ್ ದಾಖಲಾಗಿದ್ದು, ಸಸ್ಪೆಂಡ್‌ ಮಾಡಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬ ಮಾಹಿತಿ ನೀಡಿದ್ದಾರೆ.

ಇಷ್ಟಕ್ಕೂ ಟ್ವೀಟ್​ನಲ್ಲಿ ಏನಿದೆ?
ವಿಚ್ಛೇದನ ಪ್ರಕರಣಕ್ಕೆ ಸಾಕ್ಷಿ ಹೇಳಿಕೆ ನೀಡಲು ನಾನು ಪೊಲೀಸ್ ಠಾಣೆಗೆ ಹೋಗಿದ್ದೆ, ಅದು ನನ್ನ ಸ್ನೇಹಿತನ ಸಹೋದರನಿಗಾಗಿ. ಪೊಲೀಸ್ ಠಾಣೆಯಲ್ಲಿ ನಾನು ಹೇಳಿಕೆ ನೀಡಲು ಸಬ್​ ಇನ್ಸ್​ಪೆಕ್ಟರ್​ ಜತೆ ಮಾತನಾಡಬೇಕಿತ್ತು. ಆರಂಭದಲ್ಲಿ ಆತ ತುಂಬಾ ಸ್ನೇಹಪರನಾಗಿದ್ದರು. ಆದರೆ, ನಂತರ ಅವರ ನಿಜವಾದ ಬಣ್ಣಗಳು ಹೊರಹೊಮ್ಮಲು ಪ್ರಾರಂಭಿಸಿದವು ಮತ್ತು ಪರಿಸ್ಥಿತಿ ತುಂಬಾ ಅಹಿತಕರವಾಗಲು ಪ್ರಾರಂಭಿಸಿತು. ನನ್ನೊಂದಿಗೆ ಚೆಲ್ಲಾಟವಾಡಲು ಪ್ರಾರಂಭಿಸಿದರು.

ವಿಚಾರಣೆ ಸಮಯದಲ್ಲಿ ನನ್ನ ಕೈಯನ್ನು ಹಿಡಿದು ಮುದ್ದಿಸಲು ಪ್ರಾರಂಭಿಸಿದರು. ನಾನು ಭಯಭೀತಳಾದೆ. ಮೊದಲು ನನ್ನ ಹೇಳಿಕೆಯನ್ನು ಪೂರ್ಣಗೊಳಿಸೋಣ ಎಂದು ಭಯದಿಂದ ಸುಮ್ಮನಾದೆ. ಹೇಳಿಕೆಯನ್ನು ಕೊಟ್ಟ ಬಳಿಕ ಆತ ತನ್ನ ಮೊಬೈಲ್​ ನಂಬರ್ ಕೊಟ್ಟು ಕರೆ ಮಾಡಲು ಕೇಳಿದರು. ಅದೃಷ್ಟವಶಾತ್, ನನ್ನ ತಾಯಿ ನನಗೆ ಸರಿಯಾದ ಸಮಯಕ್ಕೆ ಕರೆ ಮಾಡಿದರು ಮತ್ತು ಪೊಲೀಸ್ ಠಾಣೆಯಿಂದ ಹೊರಬರಲು ನಾನು ಅವರ ಕರೆಯನ್ನು ನೆಪವಾಗಿ ಬಳಸಿಕೊಂಡೆ ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಈ ಪ್ರಕರಣ ಹಿರಿಯ ಅಧಿಕಾರಿಗಳ ಗಮನಕ್ಕೆ ಬರುತ್ತಲೇ ಅವರು ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. “ನಾವು ಸಂತ್ರಸ್ಥ ಮಹಿಳೆಯೊಂದಿಗೆ ಮಾತನಾಡಿದ್ದೇವೆ. ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಠಾಣೆಯ ಒಳಗೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತೇವೆ ಮತ್ತು ಸಬ್ ಇನ್ಸ್‌ಪೆಕ್ಟರ್ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಘಟನೆಯ ಬಗ್ಗೆ ತಿಳಿದಿರುವ ಅಧಿಕಾರಿಯೊಬ್ಬರು ಹೇಳಿದರು.

ಕೃಪೆ:ಕೆಪಿ+ಸುವರ್ಣಾ
Share This Article
";