ಬೀದರ್: ವಿಧಾನಸಭೆ ಅಧಿವೇಷನದಲ್ಲಿ ಅಭಿವೃದ್ದಿ ವಿಷಯ ಕುರಿತು ಚರ್ಚಿಸಬೇಕಾದ ಪವಿತ್ರ ಸ್ಥಳದಲ್ಲಿ ಸದನದಲ್ಲಿ ಕಾಂಗ್ರೆಸ ಮುಖಂಡರು ಗದ್ದಲ, ಅಹೋರಾತ್ರಿ ಧರಣಿ ನಡೆಸಿ ಅಭಿವೃದ್ದಿ ಕೆಲಸಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ, ಬಿಜೆಪಿ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಜನವಿರೋಧಿ ಧೋರಣೆ ಖಂಡಿಸಿ ಮತ್ತು ಶಿವಮೊಗ್ಗದಲ್ಲಿ ನಡೆದಿರುವ ಹಿಂದೂ ಯುವಕನ ಬರ್ಬರ ಕೊಲೆಗೈದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಪ್ರತಿಭಟನೆ ನಡೆಸಿ, ರಾಜ್ಯಪಾಲರ ಹೆಸರಿಗೆ ಬರೆದಿರುವ ಮನವಿಪತ್ರ ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.
ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸುಭಾಶ ಕಲ್ಲೂರ, ಬಿಜೆಪಿ ರಾಜ್ಯ ಕಾರ್ಯಲಾರಣಿ ಬಸವರಾಜ ಆರ್ಯ, ಮುಖಂಡರಾದ ಡಾ.ಸಿದ್ದು ಪಾಟೀಲ ಮಾತನಾಡಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಕುಂಬಾರ, ಮಂಡಲ ಅಧ್ಯಕ್ಷ ಪ್ರಭಾಕರ ನಾಗರಾಳೆ, ಕಾರ್ಯದರ್ಶಿ ರಾಜು ಭಂಡಾರಿ, ಗಿರೀಶ ತುಂಬಾ, ಎಂ.ಡಿ.ಇಲಿಯಾಸ ಮತ್ತಿತರರು ಇದ್ದರು.