ಹರ್ಷ ಹತ್ಯೆ ಗೈದವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲು ಹುಮನಾಬಾದ ಹಿಂದೂಪರ ಸಂಘಟನೆಗಳ ಒಕ್ಕೊರಲ ಆಗ್ರಹ

ಉಮೇಶ ಗೌರಿ (ಯರಡಾಲ)

ಬೀದರ್: ಹರ್ಷ ಹತ್ಯೆ ಗೈದವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ, ಹಿಂದೂಪರ ಸಂಘಟನೆಗಳು ಜಿಲ್ಲೆಯ ಹುಮನಾಬಾದ ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿ, ಗೃಹ ಸಚಿವರ ಹೆಸರಿಗೆ ಬರೆದ ಮನವಿಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಹಿರೇಮಠ ಸಂಸ್ಥಾನ ಪೀಠಾಧಿಪತಿ ವೀರರೇಣುಕ ಗಂಗಾಧರ ಸ್ವಾಮೀಜಿ ಮಾತನಾಡಿ, ರಾಷ್ಟ್ರಪೇಮಿ ಹರ್ಷ ಅವರನ್ನು ಬರ್ಬರವಾಗಿ ಹತ್ಯೆಗೈದವರನ್ನು ಗುಂಡಿಕ್ಕಿ ಕೊಲ್ಲಬೇಕೆಂದು ಒತ್ತಾಯಿಸಿದರು.

ಹಳ್ಳಿಖೇಡ(ಕೆ) ಸ್ವಾಮೀಜಿ, ಜಿಲ್ಲಾ ಗೋರಕ್ಷಕ ಪ್ರಮುಖ ಮಹಾದೇವ ಗೌಳಿ, ದಿನೇಶರೆಡ್ಡಿ ವಾಂಜ್ರಿ, ಮಹಾಂತೇಶ ಪೂಜಾರಿ, ಲಕ್ಷ್ಮಿಕಾಂತ ಹಿಂದೊಡ್ಡಿ, ಗೋಪಾಲಕೃಷ್ಣ ಮೊಹಳೆ, ಡಾ.ಸಿದ್ದು ಪಾಟೀಲ, ಸುನೀಲ ಪತ್ರಿ, ಮಹೇಶ ಅಗಡಿ ಮೊದಲಾದವರು ಇದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಡಿವೈಎಸ್ಪಿ ಸೋಮಲಿಂಗ ಕುಂಬಾರ, ಸಿಪಿಐ ಮಲ್ಲಿಕಾರ್ಜುನ್ ಯಾತನೂರ್ ನೇತೃತ್ವದಲ್ಲಿ ಬಿಗಿ ಬಂದೊಬಸ್ತ್ ಮಾಡಲಾಗಿತ್ತು.

Share This Article
";