ವರದಿ: ಬಸವರಾಜ ಶಂ ಚಿನಗುಡಿ
ಕಿತ್ತೂರು ಉತ್ಸವದ ಬೆಳ್ಳಿ ಹಬ್ಬದ ವರ್ಷಾಚರಣೆ ನಿಮಿತ್ತ ನಡೆದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶಾಸಕ ಮಹಾಂತೇಶ ದೊಡ್ಡಗೌಡರ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.
“ಕಿತ್ತೂರ ರಾಣಿ ಚನ್ನöಮ್ಮಳ ಜೀವನ ಹಾಗೂ ಸಾಧನೆಗಳು’’ ಎಂಬ ವಿಷಯದ ಕುರಿತು ಅ 21 ರಂದು ಬೆಳ್ಳಿ ಹಬ್ಬದ ವರ್ಷಾಚರಣೆ ನಿಮಿತ್ತ ನಡೆದ ಪ್ರಬಂದ ಸ್ಪರ್ದೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ದೇವಗಾಂವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೀಪಾ ಲಿಂಗದಳ್ಳಿ ಪ್ರಥಮ, ವೀರಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸೌಭಾಗ್ಯ ವಸ್ತ್ರದ ದ್ವಿತಿಯ. ಹುಣಸಿಕಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೇಯಾ ಬೈರನಟ್ಟಿ ತೃತೀಯ ಬಹುಮಾನಗಳನ್ನು ಪಡೆದರು.
“ಸ್ವಾತಂತ್ರ ಹೋರಾಟದಲ್ಲಿ ಕಿತ್ತೂರ ರಾಣಿ ಚನ್ನಮ್ಮ ಹಾಗೂ ಅವಳ ಸಹಚರರ ಪಾತ್ರ ’’ ಎಂಬ ವಿಷಯದ ಕುರಿತು ಅ 21 ರಂದು ಬೆಳ್ಳಿ ಹಬ್ಬದ ವರ್ಷಾಚರಣೆ ನಿಮಿತ್ತ ನಡೆದ ಪ್ರಬಂದ ಸ್ಪರ್ದೆಯಲ್ಲಿ ಪ್ರೌಢ ಶಾಲಾ ವಿಭಾಗದಲ್ಲಿ ಬೈಲೂರು ಸರಕಾರಿ ಪ್ರೌಢ ಶಾಲೆಯ ಈಶ್ವರಿ ಅಂಬವ್ವಗೋಳ ಪ್ರಥಮ, ಕಾದರವಳ್ಳಿ ಸರಕಾರಿ ಪ್ರೌಢ ಶಾಲೆಯ ರಚನಾ ಪೂಜೇರ ದ್ವಿತಿಯ. ಕಿತ್ತೂರು ಜ್ಞಾನಗಂಗಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ದೀಪಾ ಪಾಟೀಲ ತೃತೀಯ ಬಹುಮಾನಗಳನ್ನು ಪಡೆದರು.
ಈ ಸಂದರ್ಭದಲ್ಲಿ ಕಿತ್ತೂರ ಕ್ಷೇತ್ರ ಶಿಕ್ಷಾಣಾಧಿಕಾರಿ ಪ್ರಬಂದ ಸ್ಪರ್ದೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಉತ್ಸವದ ಮುಖ್ಯ ವೇದಿಕೆಯಲ್ಲಿ ಪ್ರಶಸ್ತಿ ಪ್ರಮಾಣ ಪತ್ರ ವಿತರಣೆ ಮಾಡಿದ ಸರ್ವರಿಗೂ ಶಿಕ್ಷಣ ಇಲಾಖೆ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
ಈ ವೇಳೆ ಅಪರ್ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ತಾಲೂಕಾ ದಂಡಾಧಿಕಾರಿ ಸೋಮಲಿಂಗಪ್ಪ ಹಾಲಗಿ, ಕ್ಷೇತ್ರ ಶಿಕ್ಷಣಾಧಿಕಾರಿ ರವೀಂದ್ರ ಬಳಿಗಾರ, ಶಿಕ್ಷಣ ಸಂಯೋಜಕ ಮಹೇಶ್ ಹೆಗಡೆ, ಸಾಹಿತಿ ಯ. ರು. ಪಾಟೀಲ, ಕಸಾಪ ಕಿತ್ತೂರು ತಾಲೂಕಾ ಅಧ್ಯಕ್ಷ ಶೇಖರ ಹಲಸಗಿ ಹಾಗೂ ಬಿಆರ್‌ಸಿಯ ಅಜ್ಜಪ್ಪ ಪೂಜಾರ, ನಂದಾ ಕಾಜಗಾರ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು