ಬೆಳಗಾವಿ: ರೈತರು, ಕೂಲಿ ಕಾರ್ಮಿಕರಿಗೆ ಖಾಸಗಿ ಫೈನಾನ್ಸ್ ಪಂಗನಾಮ ಹಾಕಿರುವ ಘಟನೆ ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ನವೋದಯ ಪೈನಾನ್ಸ್, ಜಗಜ್ಯೋತಿ ಸೌಹಾರ್ದ ಸಹಕಾರಿ ಸಂಘ, ಸರ್ವಜ್ಞ ಚಿಟ್ ಹೆಸರಲ್ಲಿ ರೈತರು, ಕೂಲಿ ಕಾರ್ಮಿಕರಿಗೆ ವಂಚನೆ ಮಾಡಲಾಗಿದೆ. ಅಂದಾಜು 25 ಕೋಟಿ ರೂಪಾಯಿ ವಂಚಿಸಿರುವ ಆರೋಪ ಕೇಳಿ ಬಂದಿದೆ. ಇದರಿಂದ ಆಕ್ರೋಶಗೊಂಡಿರುವ ವಂಚನೆಗೊಳಗಾದವರು ಫೈನಾನ್ಸ್ ಎದುರು ಪ್ರತಿಭಟನೆ ನಡೆಸಿದರು. ಫೈನಾನ್ಸ್‍ನ ಆಡಳಿತ ಮಂಡಳಿ ಸದಸ್ಯರ ಮನೆಗಳ ಮುಂದೆಯೂ ವಿನೂತನ ಪ್ರತಿಭಟನೆ ನಡೆಸಿದ್ದು, ಬೊಬ್ಬೆಹಾಕಿ, ತಮಟೆ, ಪಾತ್ರೆ ಬಾರಿಸಿ, ನಮ್ಮ ದುಡಿದ ಹಣ ವಾಪಸ್ ಕೊಡಿ ಎಂದು ಘೋಷಣೆ ಕೂಗಿದರು.
ಗ್ರಾಹಕರ ಪ್ರತಿಭಟನೆಗೆ ಹೆದರಿ ಮನೆ ಖಾಲಿ ಮಾಡಿ ಆಡಳಿತ ಮಂಡಳಿ ಸದಸ್ಯರು ಪರಾರಿಯಾಗಿದ್ದಾರೆ. ಆಡಳಿತ ಮಂಡಳಿ ಅಧ್ಯಕ್ಷ ಅಣ್ಣಪ್ಪ ಹುನಗುಂದ ಸೇರಿ ಆಡಳಿತ ಮಂಡಳಿ ಸದಸ್ಯರು ಪರಾರಿಯಾಗಿದ್ದು. ಗ್ರಾಹಕರ ಡಿಪಾಜಿಟ್ ಹಣದಲ್ಲಿ ಆಡಳಿತ ಮಂಡಳಿ ಸದಸ್ಯರಿಂದ ಬೇರೆಡೆ ಆಸ್ತಿ ಖರೀದಿಸಿರುವ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.