ಕಂಗನಾಗೆ ನೀಡಿದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಪಡೆಯುವಂತೆ ಸರ್ಕಾರದ ಮೇಲೆ ಒತ್ತಡ.

ಉಮೇಶ ಗೌರಿ (ಯರಡಾಲ)

ನವದೆಹಲಿ(ಅ.12): ಕಂಗನಾ ಹೇಳಿಕೆ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ. ಅರ್ಹರಲ್ಲದವರಿಗೆ ಪದ್ಮಶ್ರೀ ನೀಡಿದರೆ ಇಂತಹ ಹೇಳಿಕೆಗಳೇ ಬರುತ್ತವೆ. ಈ ಕೂಡಲೇ ಆಕೆಗೆ ನೀಡಿದ ಪದ್ಮಶ್ರೀ ಪ್ರಶಸ್ತಿ ವಾಪಸ್ ಪಡೆಯಬೇಕು ಎಂದು ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್ ಒತ್ತಾಯಿಸಿದ್ದಾರೆ

ಎರಡು ದಿನದ ಹಿಂದಷ್ಟೇ ಪದ್ಮಶ್ರೀ ಪ್ರಶಸ್ತಿ ಪಡೆದ ನಟಿ ಕಂಗನಾ ರಣಾವತ್ ಮತ್ತೆ ತನ್ನ ನಾಲಿಗೆಯನ್ನು ಹರಿಬಿಟ್ಟಿರುವುದರಿಂದ ಪ್ರಶಸ್ತಿಯನ್ನು ವಾಪಸ್ ಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ.

1947ರಲ್ಲಿ‌ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ ಭಿಕ್ಷೆ, 2014ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯ ಎಂದು ಕಂಗನಾ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದರು.

[videopress zjvfONIL]

ಈ ಬಗ್ಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಇದು ದೇಶದ್ರೋಹದ ಹೇಳಿಕೆ ಎಂದಿದೆ.

ಕಂಗನಾ ಹೇಳಿಕೆ ಕುರಿತು ವರುಣ್ ಗಾಂಧಿ ಕೂಡ ಕಿಡಿ ಕಾರಿದ್ದಾರೆ.

Share This Article
";