ಬಾಗಲಕೋಟೆ: ಹಣೆ ಮೇಲಿನ ಕುಂಕುಮ ಭಸ್ಮ, ವಿಭೂತಿ, ಬಳೆ ಬಗ್ಗೆ ನಿರ್ಲಜ್ಯವಾಗಿ ಮಾತನಾಡುತ್ತಿದ್ದಾರೆ ಭಸ್ಮ ಫ್ಯಾಶನ್ ಶೋ ಅಲ್ಲ. ವೈಜ್ಞಾನಿಕವಾದ ಆಚರಣೆಯಿದು. ಸಾವಿರಾರು ವರ್ಷಗಳ ಪರಂಪರೆ, ದೇಶದ ಸಂಸ್ಕೃತಿ, ಸಂಪ್ರದಾಯ ಇದೆ. ನಮ್ಮ ಧರ್ಮದ ಆಚರಣೆ ಇದೆ. ಅದರ ಬಗ್ಗೆ ಮಾತನಾಡಿದರೆ ಹುಷಾರ್. ನಾಲಿಗೆ ಸೀಳಿ ಬಿಡ್ತೀವಿ.ಈ.ರೀತಿ ಬಾಗಲಕೋಟೆಯಲ್ಲಿ ಗುಡುಗಿರುವುದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ .
ಹಿಜಾಬ್- ಕೇಸರಿ ಸಂಘರ್ಷ ವಿಚಾರ ದಿನದಿಂದ ದಿನಕ್ಕೆ ಜೋರಾಗಿ ಸಾಗಿದೆ. ಹಿಂದೂ ಮತ್ತು ಮುಸ್ಲಿಮ್ ಸಂಘಟನೆಗಳು ಪ್ರತಿನಿಧಿಗಳು ವಾಕ್ಸಮರದಲ್ಲಿ ತೊಡಗಿದ್ದಾರೆ. ಬಾಗಲಕೋಟೆಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತೆ ಮುಸ್ಲಿಮರ ವಿರುದ್ಧ ಕತ್ತಿ ಮಸೆದಿದ್ದಾರೆ.
ಕುಂಕುಮ, ಬಳೆ ವಿಚಾರವಾಗಿ ಬಂದರೆ ಸರಿ ಇರಲ್ಲ. ಇದು ಹಿಜಾಬ್ ಪ್ರಶ್ನೆಯಲ್ಲ ಇದರ ಹಿಂದೆ ಇಸ್ಲಾಮೀಕರಣ ವಿದೆ. ಈಗ ಒಂದೊಂದೇ ಹೊರಗೆ ಬರ್ತಿದೆ. ಬರೀ ಹಿಜಾಬ್ ಅಷ್ಟೇ ಅಲ್ಲ. ಇಡೀ ಮೈ ಮುಚ್ಚುವ ಬುರ್ಖಾ ಹಾಕಿಕೊಂಡು ಬರ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮಗೆ ನಮಾಜ್ ಮಾಡೋಕೆ ಅವಕಾಶ ಕೊಡಿ ಅಂತಾರೆ. ಆಮೇಲೆ ಪ್ರತ್ಯೇಕ ಅವಕಾಶ ಕೇಳ್ತಾರೆ. ಹೀಗೆ ಒಂದೊಂದೇ ಮುನ್ನುಗ್ಗುವ ಪ್ರವೃತ್ತಿ ಇಡೀ ಇಸ್ಲಾಮಿಕ್ ಇತಿಹಾಸ ಹೇಳುತ್ತೆ ಎಂದು ಮುತಾಲಿಕ್ ಹೇಳಿದರು.
ನಮ್ಮ ಹತ್ತಾರು ದೇಶಗಳನ್ನ ನುಂಗಿ ನೀರು ಕುಡಿದು ನಮ್ಮ ದೇಶವನ್ನು ನುಂಗಿ ನೀರು ಕುಡಿಯಲು ಈ ಪ್ರವೃತ್ತಿ ಮಾಡ್ತಿದ್ದಾರೆ. ಈಗ ಹಣೆ ಮೇಲಿನ ಕುಂಕುಮ ಭಸ್ಮ, ವಿಭೂತಿ, ಬಳೆ ಬಗ್ಗೆ ನಿರ್ಲಜ್ಯವಾಗಿ ಮಾತನಾಡುತ್ತಿದ್ದಾರೆ. ನಮ್ಮ ಹಣೆ ಮೇಲಿನ ಕುಂಕುಮ, ವಿಭೂತಿ, ಭಸ್ಮ ಫ್ಯಾಶನ್ ಶೋ ಅಲ್ಲ. ವೈಜ್ಞಾನಿಕವಾದ ಆಚರಣೆಯಿದು. ಸಾವಿರಾರು ವರ್ಷಗಳ ಪರಂಪರೆ, ದೇಶದ ಸಂಸ್ಕೃತಿ, ಸಂಪ್ರದಾಯ ಇದೆ. ನಮ್ಮ ಧರ್ಮದ ಆಚರಣೆ ಇದೆ. ಅದರ ಬಗ್ಗೆ ಮಾತನಾಡಿದರೆ ಹುಷಾರ್. ನಾಲಿಗೆ ಸೀಳಿ ಬಿಡ್ತೀವಿ.. ಭಾರತ ದೇಶ ಹಿಂದುಸ್ತಾನ. ಮತ್ತೆ ಬಳೆ ಕುಂಕುಮ, ಮಠ ಮಂದಿರ ಬಗ್ಗೆ ಮಾತನಾಡಿದರೆ ಹುಷಾರ್ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಸಿದ್ದಾರೆ.
ಸಮವಸ್ತ್ರದ ಭಾಗಗಳಲ್ಲ ಹಿಜಾಬ್. ಬಟ್ಟೆ ಬಗ್ಗೆ ಮಾತ್ರ ಮಾತನಾಡಿ. ಸಿಎಫ್ಐ, ಪಿಎಫ್ಐ ಸಂಘಟನೆಗಳು ದೇಶದ್ರೋಹದ ಕೆಲಸದಲ್ಲಿ ತೊಡಗಿವೆ. ಈ ಕುರಿತು ಹಿಂದೆ ಕೇರಳದ ಹಿಂದಿನ ಸಿಎಂ ಪಿಣರಾಯಿ ವಿಜಯನ್ ಅವರು ಪಿಎಂಗೆ ಪತ್ರ ಬರೆದಿದ್ದಾರೆ. ಆಗ ಪಿಎಂ ಆಗಿದ್ದವರು ಮನಮೋಹನ್ ಸಿಂಗ್. ಪಿಎಫ್ಐ ದೇಶದ್ರೋಹಿ ಸಂಘಟನೆಗಳ ಜೊತೆ ಶಾಮೀಲಾಗಿದೆ. ಅದನ್ನು ಬ್ಯಾನ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇವತ್ತು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಪಿಎಫ್ಐ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.
ಪಿಎಫ್ಐ ಸಂಘಟನೆ ಮುಂದೆ ದೇಶಕ್ಕೆ ಮಾರಕವಾಗಲಿದೆ. ಈಗ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಶಾಸಕರೇ ಪಿಎಫ್ಐ ಸಂಘಟನೆ ಬ್ಯಾನ್‌ಗೆ ಆಗ್ರಹಿಸುತ್ತಿದ್ದಾರೆ. ಪಿಎಫ್ಐ, ಎಸ್ಡಿಪಿಐ ಸಂಘಟನೆಗಳನ್ನ ಬ್ಯಾನ್ ಮಾಡಿ ಎಂದು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕೇಂದ್ರ, ರಾಜ್ಯ ಬಿಜೆಪಿ ಸರಕಾರಕ್ಕೆ ಎಷ್ಟು ಬೇಕು ಅಷ್ಟು ದಾಖಲೆ ನೀಡುತ್ತೇನೆ, ರಾಜ್ಯದಲ್ಲಿ ನಡೆದ ಹಲವು ಕೊಲೆಗಳಲ್ಲಿ ಪಿಎಫ್ಐ ನಂಟಿದೆ. ಪಿಎಫ್ಐ, ಎಸ್‌ಡಿಪಿಐ ಸಂಘಟನೆ ಬ್ಯಾನ್ ಮಾಡದಿದ್ದರೇ ಪಿಎಫ್‌ಐ ನಿಮ್ಮನ್ನು ನುಂಗಿ ಹಾಕುತ್ತದೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.