ಮುದಗಲ್: ರವಿವಾರ ಲಿಂಗಸೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಶ್ರೀರಾಮ್ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ತೆರಳುವ ವೇಳೆ ಮುದಗಲ್ಲಿನ ಪಟ್ಟಣದ ಶರಣಮ್ಮ ಗೋ ಶಾಲೆಗೆ ಬೇಟಿ ನೀಡಿ ಗೋ ಪೂಜೆ ಮಾಡಿ ಮಾತನಾಡಿದ ಅವರು ಕಳೆದ ಐದಾರು ವರ್ಷಗಳಿಂದ ನೂರಾರು ಗೋವುಗಳನ್ನು ಸಂರಕ್ಷಣೆ ಮಾಡುತ್ತಿದ್ದಿರಿ, ಪ್ರಸ್ತುತ 70 ರಿಂದ 75 ಹಸುಗಳು ಇರುವುದನ್ನು ನೋಡಿ ತುಂಬಾ ಸಂತೋಷವಾಯಿತು, ನಿಮ್ಮ ಕಾರ್ಯ ಶ್ಲಾಘನೀಯ ಎಂದರು.
ಯುವಕರಲ್ಲಾ ಅವರಿವರೆನ್ನದೆ ಹಿಂದೂ ಸಮಾಜದ ರಕ್ಷಣೆಗೆ ಹಾಗೂ ಹಿಂದೂ ಯುವಕರಿಗೆ ಅನ್ಯಾಯವಾದರೆ ತಕ್ಷಣ ಒಗ್ಗೂಡಬೇಕು ಅನ್ಯಾಯದ ವಿರುದ್ಧ ಧ್ವನಿಯಾಗಬೇಕು, ಧೈರ್ಯದಿಂದ ನ್ಯಾಯಕ್ಕಾಗಿ ಮುನ್ನಡಿಯಿರಿ ಯಾರಾದರೂ ಅಧಿಕಾರಿಗಳು ತಡೆದರೆ ನಮ್ಮ ಶ್ರೀರಾಮ್ ಸೇನೆಗೆ ತಿಳಿಸಿ ನಾವು ಸದಾ ನಿಮ್ಮೊಂದಿಗೆ ಇರುತ್ತೇವೆ, ಹಿಂದೂ ಧರ್ಮದ ಹಾಗೂ ನಮ್ಮ ರಕ್ಷಣೆಗಾಗಿ ಪ್ರತಿಯೊಬ್ಬ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಇಡಿ ಇತ್ತೀಚಿಗೆ ಹರ್ಷ ಎಂಬ ಯುವಕನನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ ಈ ಹಿಂದೆ ಹಲವಾರು ಹಿಂದೂ ಯುವಕರನ್ನು ಹತ್ಯೆ ಮಾಡಿದ್ದಾರೆ, ಇನ್ನೂ ಮುಂದೆ ಹೀಗಾಗ ಬಾರದು ನಾವೆಲ್ಲರೂ ಒಗ್ಗಟ್ಟಾಗಿ ಮತಾಂದೀಯರನ್ನು ಬಗ್ಗು ಬಡಿಯೋಣ ಆದಷ್ಟೂ ವ್ಯವಹಾರವನ್ನು ಹಿಂದೂಗಳ ಜೊತೆಯಲ್ಲಿಯೇ ಮಾಡೋಣ. ನಮ್ಮ ಸನಾತನ ಹಿಂದೂ ಧರ್ಮವನ್ನು ಮತ್ತು ದೇಶವನ್ನು ಮತಾಂದಿಯರಿಂದ ರಕ್ಷಿಸುವುದೇ ಶ್ರೀರಾಮ್ ಸೇನೆಯ ಮುಖ್ಯ ಉದ್ದೇಶ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಡಾ. ಗುರುರಾಜ ದೇಶಪಾಂಡೆ, ವೆಂಕಟೇಶ ಕುಲ್ಕರ್ಣಿ, ಗೋ ಶಾಲೆಯ ಸದಸ್ಯರಾದ ಗುಂಡಪ್ಪ ಗಂಗಾವತಿ, ಮಹಾಂತೇಶ ಅಕ್ಷತಿ, ಹೇಮಂತ್ ನಾಗಲಾಪೂರ್,ವಿನೋದ್ ಗುಡಿಮನಿ,ಲಿಂಗಪ್ಪ ಮಡಿವಾಳರ್,ರಾಘವೇಂದ್ರ ಸುರಪುರ, ಅಮರೇಶ ಮಡಿವಾಳರ್, ಶೇಖರ್ ಚವಾಣ, ಗದ್ದೆಪ್ಪ ಹಡಪದ್,ಷಣ್ಮುಖ ಸಿಂಧೆ, ನವೀನ ತಾವರಗೇರೆ, ಆದರ್ಶ ಸಜ್ಜನ, ಕಾಂತಣ್ಣ ಪತ್ತಾರ, ವೆಂಕಟೇಶ ಯಾದವ್ ಮುದಗಲ್ಲಿನ ಸಮಸ್ತ ಯುವಕರು ಉಪಸ್ಥಿತರಿದ್ದರು.
ವರದಿ:ಮಂಜುನಾಥ ಕುಂಬಾರು