ಬೆಳಗಾವಿ: ಭಾರತ ದೇಶವನ್ನು ವಿಶ್ವಗುರು ಮಾಡುವ ಸಂಕಲ್ಪ ತೊಟ್ಟಿರುವ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಕನಸ್ಸು ಸಂಪೂರ್ಣವಾಗಿ ಈಡೆರುವತ್ತ ಮೋದಿ ಸರ್ಕಾರ ಸಾಗುತ್ತಿದೆ ಎಂದು ಬೆಳಗಾವಿ ಗ್ರಾಮೀಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.
ಕಿಣೆಯೆ ಗ್ರಾಮದ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಇತ್ತಿಚ್ಚಿಗೆ ಜರುಗಿದ ಬೆಳಗಾವಿ ಗ್ರಾಮೀಣ ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳ ಪ್ರಶಿಕ್ಷಣ ವರ್ಗದ ಅಧ್ಯಕ್ಷತೆವಹಿಸಿ ಮಾತನಾಡಿ, 2014 ರಿಂದ ದೇಶದಲ್ಲಿ ಮಹತ್ತರ ಬದಲಾವಣೆಯಾಗುತಿದ್ದು ರಕ್ಷಣಾ ಸಾಮಾರ್ಥ ಬಲಗೊಳ್ಳುವದರೊಂದಿಗೆ ಸ್ವದೇಶ ನಿರ್ಮಿತ ಸಾಮಾಗ್ರಿಗಳ ಬಳಕೆ ಪ್ರಮಾಣ ಶೇ 60 ರಷ್ಟುಗಿದ್ದು ರಪ್ತುಮಾಡುವ ಹಂತಕ್ಕೆ ಭಾರತ ಬಂದು ನಿಂತಿದೆ ಎಂದರು.
ಸಂಸದೆ ಮಂಗಲಾ ಅಂಗಡಿ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿ, ಪ್ರಪಂಚದಲ್ಲಿ ಅತ್ಯಂತ ದೊಡ್ಡದಾದ ಪಾರ್ಟಿ ಬಿಜೆಪಿಯಾಗಿದ್ದು ಪಕ್ಷದ ಕಾರ್ಯಕರ್ತರಿಗೆ ಹಾಗೂ ಚುನಾಯಿತ ಪ್ರತಿನಿಧಿಗಳಿಗೂ ಪಕ್ಷದ ತತ್ವ ಸಿದ್ದಾಂತ, ಪಕ್ಷದ ಸಾಧನೆ ಹಾಗೂ ಕಾರ್ಯಕರ್ತರ ಕಾರ್ಯಪದ್ದತಿಗಳನ್ನ ತಿಳಿಸುವ ಕಾರ್ಯ ಬಿಜೆಪಿಯನ್ನು ಹೊರತುಪಡಿಸಿ ಯಾವ ಪಕ್ಷದಲ್ಲಿಯು ಈ ಶಿಸ್ತು ಬದ್ದಿನ ಪದ್ದತ್ತಿ ಇಲ್ಲ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾಡಾ ಅಧ್ಯಕ್ಷ ಡಾ. ವಿ. ಆಯ್.ಪಾಟೀಲ, ಮಾಜಿ ಸಚಿವ ಶಶಿಕಾಂತ ನಾಯಕ, ಓಬಿಸಿ ರಾಷ್ಟ್ರಿಯ ಮೊರ್ಚಾ ಕಾರ್ಯಕಾರಣಿ ಸದಸ್ಯ ಲಕ್ಷ್ಮಣ ತಪಸ್ಸಿ, ರಾಜ್ಯ ಕಾರ್ಯಕಾರಣಿ ಸದಸ್ಯ ಧನಶ್ರೀ ದೇಸಾಯಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುಭಾಷ ಪಾಟೀಲ ಸಂದೀಪ್ ದೇಶಪಾಂಡೆ ವೇದಿಕೆಯ ಮೇಲೆಇದ್ದರು.
ಪ್ರತಿ ಮೂರು ವರ್ಷಗಳಿಗೊಮ್ಮೆ ಮೂರು ದಿನಗಳ ಕಾಲ ನಡೆಯುವ ಈ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ಜಿಲ್ಲಾ ಮಾಧ್ಯಮ ಸಂಚಾಲಕ ಹಾಗೂ ಜಿಲ್ಲಾ ಪ್ರಶಿಕ್ಷಣ ಸಂಚಾಲಕ ಎಫ್. ಎಸ್. ಸಿದ್ದನಗೌಡರ, ಜಿಲ್ಲಾ ವಕ್ತಾರ ಸಂಜಯ ಕಂಚಿ, ರೇಖಾ ಚಿನ್ನಾಕಟ್ಟಿ,ನೀತಿನ ಚೌಗಲೆ, ಸಂತೋಷ ದೇಶನೂರ, ವೀರಭದ್ರ ಪುಜಾರ, ಅಭಯ ಅವಲಕ್ಕಿ, ಹೆಮಂತ ಪಾಟೀಲ, ಡಾ.ಗುರುಪ್ರಸಾದ ಕೋತೀನ, ಹಾಗೂ ರಾಜ್ಯ, ಜಿಲ್ಲಾ ಹಾಗೂ ಮಂಡಲಗಳ ಪದಾಧಿಕಾರಿಗಳು ಇದ್ದರು.
(ವರದಿ: ಈರಣ್ಣಾ ಹುಲ್ಲೂರ)