ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರ – ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಕರ್ನಾಟಕ ರಾಜ್ಯ ಗಡಿನಾಡು ಹಿತ ರಕ್ಷಣಾ ವೇದಿಕೆ ವತಿಯಿಂದ ಚನ್ನಮ್ಮನ ಕಿತ್ತೂರಿನ ತಾಲೂಕಾ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿ ಮೂಲಕ ರಾಜ್ಯೋತ್ಸವವನ್ನು ಆಚರಿಸಿಲಾಯಿತು
ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ. ಎಂ. ರಾಜಿಬಾಯಿ ಮಾತನಾಡಿ ಕೊರೋನಾ ಮಹಾಮಾರಿಯ ಸಂಕಷ್ಟವನ್ನು ಎದುರಿಸಿ ಕರುನಾಡು ಉತ್ತಮ ಭವಿಷ್ಯದತ್ತ ದಾಪುಗಾಲು ಹಾಕುತ್ತಿದೆ, ತಾಯಿ ಭುವನೇಶ್ವರಿ ಮತ್ಕತು ದಯಾಘನನಾದ ಭಗವಂತ ರ್ನಾಟಕದ ಜನತೆಗೆ ಸುಖಃ ಸಮೃದ್ದಿ ಒಳ್ಳೆಯ ಆರೋಗ್ಯ ಭಾಗ್ಯ ನೀಡಿ ಕಾಪಾಡಲೇಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಗಡಿನಾಡು ಹಿತ ರಕ್ಷಣಾ ವೇದಿಕೆ ತಾಲೂಕಾ ಅಧ್ಯಕ್ಷ ಕಲ್ಲಪ್ಪ ಅಗಸಿಮನಿ ತಾಲೂಕಾ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಶಂಕ್ರೆಪ್ಪ ಕಮತಗಿ ವೈದ್ಯರಾದ ಡಾ|| ಅಭಿನವ ಮಿಶ್ರಾ , ಸುಮಿತ್ರಾ ಮುಷ್ಟಗಿ, ನಿಂಗಪ್ಪ ಸರಸೆಟ್ಟಿ, ನಿಂಗವ್ವ ಹಾರೋಗೊಪ್ಪ, ರತ್ನವ್ವ ಕಾಗಿ, ಕವಿತಾ ಕೋಳಿಕೊಪ್ಪ, ಗೌರಮ್ಮ, ಬಸವರಾಜ ಭಂಗಿ, ದೇವರಾಜ ದೇವಲತ್ತಿ ಮುಂತಾದವರು ಉಪಸ್ಥಿತರಿದ್ದರು.