ಆಧುನಿಕತೆಯ ಸ್ಪರ್ಶದೊಂದಿಗೆ ಒಕ್ಕಲಿಗ ಮುದ್ದಣ್ಣ

ಮುದಗಲ್ಲ :ವಿಜಯ ಮಹಾಂತೇಶ ಪೆಟ್ರೋಲ್ ಬಂಕ್ ಹಿಂದುಗಡೆ ನಡೆದ ಒಕ್ಕಲಿಗ ಮುದ್ದಣ್ಣ ನಾಟಕವು ಪ್ರಚಲಿತದಲ್ಲಿ ರೈತರು ಎದುರಿ ಸುತ್ತಿರುವ ಅನೇಕ ಸಮಸ್ಯೆಗಳನ್ನು, ಪರಿಣಾಮಗಳನ್ನು ನಾಟಕದಲ್ಲಿ ರೈತರ ಕಷ್ಟ, ಸುಂಕದ ಸಮಸ್ಯೆ ಜಿ.ಎಸ್.ಟಿ. ಸಮಸ್ಯೆಗಳು, ಪರಿಣಾಮಕಾರಿಯಾಗಿ ಅಳವಡಿಸಿದ್ದಾರೆ.

ರೈತರು ಇಂದು ಸಂಕೀರ್ಣವಾದ ಕಷ್ಟದ ಸ್ಥಿತಿಯಲ್ಲಿದ್ದಾರೆ ಅವರ ಸಮಸ್ಯೆಗಳು ಅನಂತಕೋಟಿ ಅವುಗಳನ್ನು ಭೇದಿಸಲು ಸಾಧ್ಯವಿಲ್ಲ ದಂತಹ ಪರಿಸ್ಥಿತಿ ಅಂತಹ ಸನ್ನಿವೇಶದಲ್ಲಿ ನಾಟಕವು ೧೨ನೇ ಶತಮಾನದ ಮುದ್ದಣ್ಣನ ಇತಿಹಾಸದೊಂದಿಗೆ ವರ್ತಮಾನದ ಅನೇಕ ಸಮಸ್ಯೆಗಳಿಗೆ ಮುಖಾ ಮುಖಿಯಾಗಿಸಿದ್ದಾರೆ.

ನಾಟಕದ ಆರಂಭವೇ ರಾಜಭಟರು ಸುಂಕ ಕೊಡದ ಪ್ರಜೆಗಳನು ಹುಡುಕುವ ಹುಡುಕಾಟದಿಂದ. ರಾಜಭಟರು ಸುಂಕ ವಸೂಲಿಗಾಗಿ ರೈತರನು ಹೆಡೆಮುರಿ ಕಟ್ಟಿ ಹಿಡಿದು ತರುತ್ತಾರೆ. ಮೂರು ವರ್ಷದಿಂದ ಬರಬಿದ್ದು ಕಷ್ಟಕೋಟಲೆಗಳಲಿ ಬದುಕುತ್ತಿದ್ದ ರೈತರಿಗೆ ತೆರಿಗೆ ಎಂಬುದು ತಲೆದಂಡವಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲಿ ಅವರು ಸುಂಕ ಕಟ್ಟಲು ಅಸಹಾಯಕ ರಾಗಿದ್ದಾರೆ.

ಇದನು ಛಾಯಾಭಾರ್ಗವಿಯವರು ಎಷ್ಟು ಅದ್ಭುತವಾಗಿ ಚಿತ್ರಿಸಿದ್ದಾರೆ ಎಂದರೆ ರೈತರ ಸಮಸ್ಯೆಗಳನು ಇನ್ನೂ ಪರಿಣಾಮಕಾರಿಯಾಗಿ ತೋರಿಸಿತು.

ಒಕ್ಕಲಿಗ ಮುದ್ದಣ್ಣ ಹನ್ನೆರಡನೆಯ ಶತಮಾನದಲ್ಲಿ ಶರಣಗಣದಲಿ ಒಕ್ಕಲಿಗ ಕಾಯಕ ಮಾಡುತ್ತಿದ್ದ ಒಬ್ಬ ಶರಣ. ಈತನ ಹೆಂಡತಿ ದಾನಮ್ಮ. ಸುಮಾರು ದಿನಗಳ ಕಾಲ ಊರು ಬಿಟ್ಟು ಕಲ್ಯಾಣ ಸೇರಿದ್ದ. ಮುದ್ದಣ್ಣ ಮತ್ತೆ ಊರಿಗೆ ಮರಳಿ ಅಲ್ಲಿ ಕಲ್ಯಾಣದಲಿ ಬಸವಣ್ಣನವರು ಏನೇನು ಕಾರ್ಯಗಳನು ಮಾಡಿದ್ದರೂ ಮಾಡುತ್ತಿದ್ದರೋ ಇಲ್ಲಿಯೂ ಮಾಡಲು ಮುಂದಾಗುವ ಶರಣ.

ಶಿವಸಂಚಾರ ಸಾಣೆಹಳ್ಳಿ ತಂಡ ಪರಮಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಶ್ರಮದ ಬಲದಿಂದ ಕಟ್ಟಿದ ನಾಟಕ ತಂಡ. ಅದು ಅನೇಕ ವರ್ಷಗಳಿಂದ ಈ ನಾಡಿನಲ್ಲಿ ನಾಟಕಗಳ ಮುಖಾಂತರ ವೈಚಾರಿಕತೆಯ ಹೊಸತು ಹರಡುತ್ತಿದೆ.

ಛಾಯಾ ಭಾರ್ಗವಿಯವರು ನಿರ್ದೇಶಿಸಿದ ಒಕ್ಕಲಿಗ ಮುದ್ದಣ್ಣ ಈಗ ಶಿವಸಂಚಾರ ನಾಟಕ ಪ್ರಮುಖ ನಾಟಕವಾಗಿ ಸಂಚಾರದಲಿ ಪಾಲ್ಗೊಂಡಿದೆ. ಇದನ್ನು ಬರೆದವರು, ಚಂದ್ರಶೇಖರ ತಾಳ್ಯ ಅವರು.

ಸ್ವಲ್ಪ ಹಿಂದೆ ಹೊದರೆ, ಸ್ಥಾಪರ ಧಿಕ್ಕರಿಸಿ ಇಷ್ಟಲಿಂಗವನು ಅದರ ಮಹತ್ವವನು ಹೇಳುವ ಮುದ್ದಣ್ಣ. 19 ನೇ ಶತಮಾನದ ಪ್ರಮುಖ ಥಿಯರಿಗಳಾಗಿದ್ದ ದಾಸ್ ಕ್ಯಾಪಿಟಲ್ ಮತ್ತು ಮ್ಯಾನಿಫೆಸ್ಟೋದ ಅನೇಕ ಅಂಶಗಳನು ಚರ್ಚಿಸುತ್ತಾನೆ. ಭೂಮಿಯನು ಸಾರ್ವಜನಿಕ ಆಸ್ತಿಯನ್ನಾಗಿ ಮಾಡುವರು ಸರ್ವರು ದುಡಿದು ತಿನ್ನಬೇಕೆಂಬ ಆಶಯದ ಬಸವತತ್ವ ಮತ್ತು ಮಾರ್ಕ್ಸ್ ಮಹಾಶಯನ ತತ್ವಗಳನು ಅನುಷ್ಠಾನಕ್ಕೆ ಒಡ್ಡುತ್ತಾನೆ. ಅದಕ್ಕಾಗಿ ಇದು ಒಂದು ಕಾಲಾತೀತ ಕೃತಿಯಾಗಿ ನಮ್ಮ ಮುಂದೆ ಕಾಣುತ್ತದೆ.

ಛಾಯಾ ಭಾರ್ಗವಿಯವರು ತಮ್ಮ ಎಲ್ಲಾ ಅನುಭವವನ್ನು ಧಾರೆ ಎರೆದಿದ್ದಾರೆ. ಮುಂದಿನಂತೆ ಕಾಸ್ಟೂಮ್ಸ್, ನೆರಳು ಬೆಳಕು ಸೆಟ್ ಅದ್ಭುತವಾಗಿದೆ ಹಾಡುಗಳು ಸನ್ನಿವೇಶಕ್ಕೆ ತಕ್ಕಂತೆ ಚೆನ್ನಾಗಿವೆ….

ಸಂದರ್ಭದಲ್ಲಿ ಮುದಗಲ್ಲ ಗಣ್ಯರಾದ ಅಶೋಕ ಗೌಡ ಪಾಟೀಲ್, ಗುರುಬಸಪ್ಪ ಸಜ್ಜನ್, ಶ್ರೀಕಾಂತ ಗೌಡ ಪಾಟೀಲ್ ಮಲ್ಲಿಕಾರ್ಜುನ ಶಿಕ್ಷಕರು, ಅಶೋಕ್ ಗೌಡ ಕಾಲೋನಿ ಜನತೆ ಹಾಗೂ ಮುದಗಲ್ಲಿನ ನಾಟಕ ಅಭಿಮಾನಿಗಳು ಉಪಸ್ಥಿತರಿದ್ದರು..

ವರದಿ: ಮಂಜುನಾಥ ಕುಂಬಾರ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";