ನ್ಯೂಯಾರ್ಕ್: ಇದೇ ಮೊದಲ ಬಾರಿಗೆ ಹಂದಿಯ ಮೂತ್ರಪಿಂಡವನ್ನು (ಕಿಡ್ನಿ) ಮಾನವನಿಗೆ ಪ್ರಾಯೋಗಿಕವಾಗಿ ಕಸಿ ಮಾಡಲಾಗಿದೆ.
ಕಿಡ್ನಿ ಅಳವಡಿಸಿದ ರೋಗಿಯ ಆರೋಗ್ಯ ಮತ್ತು ಪ್ರತಿರೋಧಕ ವ್ಯವಸ್ಥೆಯಲ್ಲಿ ಯಾವುದೇ ತರಹದ ಸಮಸ್ಯೆ ಆಗಿಲ್ಲ ಎಂದು ಮೂತ್ರ ಕಸಿ ಶಸ್ತ್ರಚಿಕಿತ್ಸೆ ನಡೆಸಿದ ನ್ಯೂಯಾರ್ಕನ ಲಾಂಗ್‌ಒನ್
ಹೆಲ್'(ಎನ್‌ವೈಎಲ್) ಸಂಸ್ಥೆಯ ವೈದ್ಯರು ತಿಳಿಸಿದ್ದಾರೆ.
ಮಿದುಳು ನಿಷ್ಕ್ರಿಯವಾಗಿ ಜೀವರಕ್ಷಕ ಸಾಧನದ
(ಐಸಿಯು) ಮೇಲೆ ಜೀವಂತವಿರುವ ಮಹಿಳೆಗೆ ಹಿಂದಿ ಕಿಡ್ನಿ ವಂಶವಾಹಿಯಾಗಿ ಪರಿವರ್ತಿಸಿ ಹಂದಿಯ ಕಿಡ್ನಿಯನ್ನು ಕಸಿ ಮಾಡಲಾಗಿದೆ.ಈ ಶಸ್ತ್ರ ಚಿಕಿತ್ಸೆಯಿಂದ ಹಂದಿಯ ಕಿಡ್ನಿಯು ಸಹ ಮಾನವರ ದೇಹ ತಕ್ಷಣಕ್ಕೆ ತಿರಸ್ಕರಿಸುವುದಿಲ್ಲ ಎಂಬುದು ಸಿದ್ಧವಾಗಿದೆ ಎಂದು ಎನ್‌ವೈಎಲ್ ಸಂಸ್ಥೆ ತಿಳಿಸಿದೆ.
ಕಿಡ್ನಿ ಕಸಿಯಾದ ಮೇಲೆ ಮೂರು ದಿನ ಅದನ್ನು ಆಕೆಯ
ದೇಹದ ಹೊರಗೆ ನಿರ್ವಹಿಸಲಾಗಿತ್ತು ಯಾವುದೇ ಸಮಸ್ಯೆ ಇಲ್ಲದೆ ಅಗತ್ಯ ಪ್ರಮಾಣದಷ್ಟು ಮೂತ್ರ ಆಕೆಯಿಂದ ಹೊರಬಂತು
ಎಂಬುದನ್ನು ಖಚಿತ ಪಡಿಸಿಕೊಳ್ಳಲಾಯಿತು.ಈ ಪ್ರಯೋಗಾತ್ಮಕ ಕಸಿ ಶಸ್ತ್ರಚಿಕಿತ್ಸೆ ನಡೆಸುವುದಕ್ಕೂ ಮೊದಲು ಮಿದುಳು ನಿಷ್ಕ್ರಿಯವಾದ ಮಹಿಳೆಯ ಕುಟುಂಬದವರ ಸಂಪೂರ್ಣ ಒಪ್ಪಿಗೆಯನ್ನು ಪಡೆಯಲಾಗಿತ್ತು ಎಂದು ಎನ್‌ವೈಎಲ್ ಸಂಸ್ಥೆ ವಿವರಿಸಿದೆ.
ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮಹತ್ವದ ಪ್ರಯೋಗ: ಮಿದುಳು ನಿಷ್ಕ್ರಿಯಗೊಂಡ ಮಹಿಳೆಯ ಮೂತ್ರಪಿಂಡ ಸರಿಯಾಗಿ ಕಾರ್ಯನಿರ್ವಹಿಸದೆ ಕಳಪೆಯಾಗಿದ್ದು ಅಸಹಜವಾಗಿ ಕಾರ್ಯನಿರ್ವಹಿಸುತ್ತಿತ್ತು.ಹಂದಿ ಕಿಡ್ನಿ ಅಳವಡಿಸಿ ಕಸಿ ಮಾಡಿದ ನಂತರ ಕಿಡ್ನಿ ಕಾರ್ಯ ಸಹಜವಾಗಿ ಕಾರ್ಯನಿರ್ವಾಹಣೆ ಆರಂಭಿಸಿತು ಎಂದು ಒನ್ ಹೆಲ್ ಸಂಶೋಧನಾ ತಂಡದ ಮುಖ್ಯಸ್ಥ ಡಾ. ರಾಬರ್ಟ್ ಮಾಂಟ್ಗೊಮೆರಿ ವಿವರಿಸಿದ್ದಾರೆ.
ಮಾನವರಿಗೆ ಪ್ರಾಣಿಗಳ ಅಂಗಗಳನ್ನು ಜೋಡಿಸುವ ಬಗ್ಗೆ ಸಂಶೋಧನೆಗಳು ದಶಕದಿಂದ ನಡೆಯುತ್ತಿವೆ. ಆದರೆ, ಕಸಿ ಮಾಡಿದ ತಕ್ಷಣ ಮಾನವ ದೇಹ ಅದನ್ನು ತಿರಸ್ಕರಿಸಿದ ನಿದರ್ಶನವೆ ಹೆಚ್ಚಾಗಿ ಕಂಡು ಬಂದಿದ್ದವು. ರಾಬರ್ಟ್ ಮಾಂಟ್ಗೊಮೆರಿ ಅವರ ತಂಡ ಕಿಡ್ನಿ ಕಸಿ ಮಾಡುವ ನಿಟ್ಟಿನಲ್ಲಿ ಮೊದಲ ಹಂತದ ಯಶಸ್ಸನ್ನು ಗಳಿಸಿದ್ದಾರೆ.
ಹಂದಿ ಕಿಡ್ನಿಯನ್ನು ಮಾನವನ ದೇಹ ತಕ್ಷಣ ತಿರಸ್ಕರಿಸದಿರುವುದು ಮಹತ್ತರ ಬೆಳವಣಿಗೆ ಆಗಿದೆ. ತಳಿ ಮಾರ್ಪಡಿಸಿದ ಹಂದಿಯ ಕಿಡ್ನಿಗೆ ‘ಗಾಲ್ ಸೇಫ್’ ಎಂದು ತಜ್ಞರು ಹೆಸರಿಟ್ಟಿದ್ದಾರೆ.ಈ ಪ್ರಯೋಗವನ್ನು ಯುನೈಟೆಡ್ ಥೆರಪ್ಯೂಟಿಕ್ಸ್ ಕಾರ್ಪ್ಸ್ ರಿವಿವಿಕಾರ್ ಯುನಿಟ್ (ಯುಟಿಎಚ್‌ಆರ್ ಓ) ಮಾಡಿದೆ.
“ಕಸಿಗಾಗಿ ಮಾನವನ ಅಂಗಾಂಗಗಳು ಕೊರತೆ ಆಗಿರುವ ಕಾರಣ ಪ್ರಾಣಿಯ ಕಿಡ್ನಿ ಕಸಿ ಯಶಸ್ವಿಯಾಗಿರುವುದು ಬಹುದೊಡ್ಡ ಮುನ್ನಡೆಯಾಗಿದೆ. ಹಂದಿಯ ಕಿಡ್ನಿಯನ್ನು ಅಳವಡಿಸಲಾದ ಮಹಿಳೆಯ ಆರೋಗ್ಯ ಈಗ ಸಹಜವಾಗಿ ಕಾರ್ಯ ನಿರ್ವಹಿಸುತ್ತಿದೆ”
ಡಾ.ರಾಬರ್ಟ್ ಮಾಂಟ್ಗೊಮೆರಿ ನ್ಯೂಯಾರ್ಕ್ ಲಾಂಗ್‌ಒನ್ ಹೆಲ್’ ಸಂಶೋಧನಾ ತಂಡದ ಮುಖ್ಯಸ್ಥ.